November Kranti In Karnataka: ನವೆಂಬರ್‌ನಲ್ಲಿ ಕ್ರಾಂತಿ ಆಗತ್ತೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗತ್ತೆ ಎಂದು ಬಿಜೆಪಿ ವಾದ ಮಾಡುತ್ತಲಿದೆ. ಈಗ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕೂಡ ರಾಜ್ಯಾಡಳಿತದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆ, ಅದು ಗ್ಯಾರಂಟಿ ಎಂದು ಬಿ ಶ್ರೀರಾಮುಲು ಅವರು ಹೇಳಿದ್ದರು. ಸಿದ್ದರಾಮಯ್ಯ ಅವರ ಜಾಗಕ್ಕೆ ಡಿಕೆ ಶಿವಕುಮಾರ್ ಅವರು ಬರುತ್ತಾರೋ ಅಥವಾ ಬೇರೆ ಯಾರಾದರೂ ಬರುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ ಖ್ಯಾತ ಜ್ಯೋತಿಷಿ ಅವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ಯಾಡಳಿತ ಬದಲಾವಣೆ ಬಗ್ಗೆ ಹೇಳಿದ್ದಾರೆ.
ಪ್ರಕಾಶ್ ಅಮ್ಮಣ್ಣಾಯ ಏನಂದ್ರು?
ಯೋಗಸ್ಯ ಪರಿರಕ್ಷಣಂ ಕ್ಷೇಮಃ. ನವೆಂಬರ್ 28ರ ನಂತರ ರಾಜ್ಯದ ಆಡಳಿತದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 18 ಕ್ಕೆ ಗುರು ತನ್ನ ಉಚ್ಚರಾಶಿ ಪ್ರವೇಶ ಮಾಡುತ್ತಾನೆ. ಒಂದು ಅಧಿಕಾರ ಪ್ರಾಪ್ತಿಯ ಕಾಲದ ಗ್ರಹಸ್ಥಿತಿಯು ಜಾತಕದ ಗ್ರಹಸ್ಥಿತಿಗೆ ಹೇಗೆ ಇರಬೇಕು ಎಂಬುದನ್ನು ತಿಳಿಸಿದ್ದಷ್ಟೇ ಹೊರತು, ಯಾರದ್ದು, ಯಾರಿಗೆ, ಯಾವ ಅಧಿಕಾರ ಎಂಬ ವಿಚಾರ ಬೇಡ ಎಂದು ಅವರು ಹೇಳಿದ್ದಾರೆ.
ಎಲ್ಲೋ ಒಂದು ಕಡೆ ಯೋಗ ಇದ್ದರೆ ಸಾಲದು. ಈ ಜಾತಕದಲ್ಲಿ ಲಗ್ನಾಧಿಪತಿ ಕುಜನ ಸ್ಥಿತಿಯ ಭಾಗ್ಯಸ್ಥಾನಕ್ಕೆ ಗುರು ದೃಷ್ಟಿ. ಚಂದ್ರನ ಕಿರೀಟ ಸ್ಥಾನಕ್ಕೆ( ಏಕಾದಶ) ಗುರು ದೃಷ್ಟಿ. ಚಂದ್ರ ರಾಶ್ಯಾಧಿಪತಿ ಶುಕ್ರನ ಏಕಾದಶಕ್ಕೆ ಗುರು ದೃಷ್ಟಿ.ಚಂದ್ರ ಏಕಾದಶದಲ್ಲಿ ಶನಿ ಸಂಚಾರ.ನವಮದ ದ್ವಿತೀಯಕ್ಕೆ ಗುರುದೃಷ್ಟಿ.ನವಮಾಧಿಪತಿ (ರಾಜ್ಯಾಧಿಪತಿ) ಗುರುವಿನ ಸ್ಥಿತಿಯ ಕ್ಷೇತ್ರಕ್ಕೆ ಗುರುದೃಷ್ಟಿ,ಗುರುವಿನ ಏಕಾದಶಕ್ಕೂ ಗುರು ದೃಷ್ಟಿಯ ಕಾಲ ಸ್ಥಿತಿ ಹೇಗಿರಬೇಕು ಎಂಬ ವಿಮರ್ಷೆಯಿದು ಎಂದು ಅವರು ಹೇಳಿದ್ದಾರೆ.
ಜಾತಕದಲ್ಲಿ ಗುರು ನೀಚನಿದ್ದು ಗೋಚರದಲ್ಲಿ ಉಚ್ಚ ರಾಶಿಗೆ ಬರುವ ಕಾಲ.ಹೆಚ್ಚುಕಡಿಮೆ 90% ಅಧಿಕಾರ ಸಿಗಲೇ ಬೇಕು.ಆದರೆ ಇಂತವರು ಅಧಿಕಾರ ಪಡೆಯುವಲ್ಲಿ ದೋಷಗಳಿದ್ದರೆ ಪರಿಹಾರ ಮಾಡಿಕೊಳ್ಳಲೇ ಬೇಕು.ಇಲ್ಲದಿದ್ದರೆ ಅಧಿಕಾರ ಲಭಿಸದು.ಕೇವಲ ಮನಸಿನಲ್ಲೇ ಆ feelings ಇರಬಹುದಷ್ಟೆ ಎಂದು ಹೇಳಿದ್ದಾರೆ.
“ನೂರಕ್ಕೆ ನೂರರಷ್ಟು ನವೆಂಬರ್‌ನಲ್ಲಿ ಕ್ರಾಂತಿ ಆಗೇ ಆಗುತ್ತದೆ. ಇದು ಬಿಜೆಪಿಯ ವಾದ. ಸಿದ್ದರಾಮಯ್ಯ ಅವರು ನವೆಂಬರ್‌ನಲ್ಲಿ ಕುರ್ಚಿ ಖಾಲಿ ಮಾಡಬೇಕಾಗುತ್ತದೆ. ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಚರ್ಚೆ ನಡೆಯುತ್ತಿವದೆ. ಕ್ಯಾಬಿನೆಟ್ ಮಂತ್ರಿಗಳು ಮಾತ್ರ ಔತಣಕೂಟ ತಪ್ಪಿಸಬಾರದೆಂದು ಆದೇಶ ಮಾಡಲಾಗಿದೆ. ಈ ಔತಣಕೂಟಕ್ಕೆ ಬರಲ್ಲ ಎಂದರೆ ಸಚಿವ ಸಂಪುಟದಿಂದ ತಗೆದು ಹಾಕ್ತೀವಿ ಅಂತ ಹೇಳಿದ್ದಾರಂತೆ.ಸಿಎಂ ಹೇಳಿದ್ದಾರೆ ಅಂತ ಎಲ್ಲರೂ ಹೋಗಲಿದ್ದಾರೆ ಎಂದು ಕಾಣುತ್ತಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ” ಎಂದು ಶ್ರೀರಾಮುಲು ಹೇಳಿದ್ದಾರೆ.
