- Home
- Entertainment
- TV Talk
- ಮದುವೆಯಾದ್ಮೇಲೆ ಉತ್ತರ ಭಾರತದಂತೆ ಕರ್ವಾ ಚೌತ್ ಆಚರಿಸಿದ Actress Vaishnavi Gowda; ಫೋಟೋಗಳಿವು
ಮದುವೆಯಾದ್ಮೇಲೆ ಉತ್ತರ ಭಾರತದಂತೆ ಕರ್ವಾ ಚೌತ್ ಆಚರಿಸಿದ Actress Vaishnavi Gowda; ಫೋಟೋಗಳಿವು
ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಮೊದಲ ಬಾರಿಗೆ ಕರ್ವಾ ಚೌತ್ ಹಬ್ಬವನ್ನು ಆಚರಿಸಿದ್ದಾರೆ. ಅತ್ತೆಯಿಂದ ಸರ್ಗಿ ಪಡೆದು ಅವರು ಈ ವ್ರತ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದು ಮೊದಲ ಕರ್ವಾ ಚೌತ್
ಮದುವೆಯಾದ ನಂತರ ವೈಷ್ಣವಿ ಗೌಡ ಅವರಿಗೆ ಇದು ಮೊದಲ ಕರ್ವಾ ಚೌತ್. ಹೀಗಾಗಿ ಅವರು ಕೆಂಪು ಬಣ್ಣದ ಸೀರೆಯುಟ್ಟು ಹಬ್ಬ ಆಚರಿಸಿದ್ದಾರೆ. ಇದು ಉತ್ತರ ಭಾರತದಲ್ಲಿ ನಡೆಯುವ ಪದ್ಧತಿಯಾಗಿದೆ. ಉತ್ತರ ಭಾರತದ ಹುಡುಗನನ್ನು ಮದುವೆ ಆಗಿರೋದಿಕ್ಕೆ ವೈಷ್ಣವಿ ಗೌಡ ಅವರು ಈ ವ್ರತವನ್ನು ಮಾಡಿದ್ದಾರೆ.
ರಾತ್ರಿ ಚಂದ್ರದರ್ಶನ
ದಿನಪೂರ್ತಿ ಉಪವಾಸ ಇದ್ದು, ಆಮೇಲೆ ರಾತ್ರಿ ಚಂದ್ರದರ್ಶನ ಮಾಡಿದ ನಂತರ ಪತಿಯ ಮುಖ ನೋಡಿ ಉಪವಾಸ ಮುಗಿಸಿದ್ದಾರೆ. ಗಂಡನಿಗೆ ಒಳಿತಾಗಲಿ, ಆಯುಷ್ಯ ಹೆಚ್ಚಾಗಲಿ ಎಂದು ಈ ವ್ರತ ಮಾಡುತ್ತಾರೆ, ಈ ಕ್ಷಣಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಶ್ರದ್ಧೆ, ನಂಬಿಕೆ ಇಟ್ಟು ಮಾಡಿದೆ
ವೈಷ್ಣವಿ ಗೌಡ ಅವರು ಇದು ನನ್ನ ಮೊದಲ ಕರ್ವಾ ಚೌತ್. ಶ್ರದ್ಧೆ, ನಂಬಿಕೆ ಇಟ್ಟು ಈ ವ್ರತ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇವರ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಉತ್ತರ ಭಾರತದಂತೆ ರೆಡಿಯಾದ್ರು
ವೈಷ್ಣವಿ ಗೌಡ ಅವರು ಕೆಂಪು ಸೀರೆ ಇಟ್ಟು, ಹಣೆಗೆ ಸಿಂಧೂರ ಇಟ್ಟು ಅವರು ಉತ್ತರ ಭಾರತದಂತೆ ರೆಡಿಯಾಗಿದ್ದರು.
ಅತ್ತೆ ಸಹಾಯ
ಉತ್ತರ ಭಾರತದಲ್ಲಿ ಅತ್ತೆ ಅಥವಾ ಹಿರಿಯರು ಉಪವಾಸ ಮಾಡುವವರಿಗೆ ಸರ್ಗಿ ಕೊಡುತ್ತಾರೆ. ಅದನ್ನು ಸ್ವೀಕರಿಸಿದ ಬಳಿಕ ಉಪವಾಸ ಶುರುವಾಗುವುದು.
ಅನುಕೂಲ್ ಮಿಶ್ರಾ ಜೊತೆ ಮದುವೆ
ವೈಷ್ಣವಿ ಗೌಡ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಅವರನ್ನು ಕಳೆದ ಜೂನ್ ತಿಂಗಳಿನಲ್ಲಿ ಮದುವೆಯಾದರು. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಮ್ಯಾಟ್ರಿಮೋನಿಯಲ್ಲಿ ಸಂಬಂಧ ಹುಡುಕಲಾಗಿತ್ತು.
ಚಂಡೀಗಡದ ಹುಡುಗ
ಅನುಕೂಲ್ ಮಿಶ್ರಾ ಅವರು ಮೂಲತಃ ಚಂಡೀಗಡದವರು. ಆದರೆ ಅವರ ಉದ್ಯೋಗ ಬೆಂಗಳೂರಿನಲ್ಲಿದೆ. ಹೀಗಾಗಿ ವೈಷ್ಣವಿ ಗೌಡ ಅವರು ಬೆಂಗಳೂರು, ಚಂಡೀಗಡ ಎಂದು ಓಡಾಡುತ್ತಿರುತ್ತಾರೆ.