ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿಯೂ ತಮ್ಮ ವರ್ತನೆ ಮುಂದುವರಿಸಿದ ಜೋಡಿಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಇಂದಿನ ಯುವ ಸಮುದಾಯಕ್ಕೆ ಎಲ್ಲಿ ಏನು ಮಾಡಬೇಕು ಮತ್ತು ಹೇಗೆ ವರ್ತಿಸಬೇಕು ಅನ್ನೋದು ತಿಳಿಯುವುದಿಲ್ಲ. ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಜೋಡಿಯೊಂದು ಎಲ್ಲವನ್ನು ಮರೆತು ತುಟಿಗೆ ತುಟಿ ಸೇರಿಸಿ ರೊಮ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕರು ತಮ್ಮ ವಿಡಿಯೋ ಸೆರೆ ಹಿಡಿಯುತ್ತಿರೋದು ಗಮನಕ್ಕೂ ಬಂದ್ರೂ ಅಪ್ಪು ಮುದ್ದಾಡೋದನ್ನು ಹೆಚ್ಚು ಮಾಡಿದ್ದಾರೆ. ಈ ಘಟನೆ ಮಲ್ಲೇಶ್ವರನಲ್ಲಿ ನಡೆದಿದೆ ಎನ್ನಲಾಗಿದ್ದು, ನಿಖರವಾಗಿ ಯಾವ ಪಾರ್ಕ್ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಜೋಡಿಯೊಂದು ಬೆಂಚ್ ಮೇಲೆ ಕುಳಿತು ಮೈ ಮರೆತಿರೋದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೂಗಳತೆ ದೂರದಲ್ಲಿ ಮಹಿಳೆಯೊಬ್ಬರು ಕುಳಿತು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಪಾರ್ಕ್‌ನ ಮತ್ತೊಂದು ಭಾಗದಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುತ್ತಿದ್ರೆ, ಗೇಮ್ ಜೋನ್‌ನಲ್ಲಿ ಸುಮಾರು ಮಕ್ಕಳು ಆಟವಾಡುತ್ತಿರೋದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಬೇಕಿದ್ರೆ ಓಯೋ ರೂಮ್‌ಗೆ ಹೋಗಲಿ, ಪಾರ್ಕ್‌ನಲ್ಲಿ ಜೋಡಿಯ ಪ್ರಣಯ

ಪಾರ್ಕ್‌ನಲ್ಲಿ ಇಷ್ಟೆಲ್ಲಾ ಜನರು ಕುಳಿತಿದ್ದರೂ ಜೋಡಿ ಮಾತ್ರ ಯಾವುದಕ್ಕೂ ಕೇರ್ ಮಾಡದೇ ಏಕಾಂತದಲ್ಲಿ ಸಮಯ ಕಳೆದಿದ್ದಾರೆ. ವಿಡಿಯೋ ಮಾಡುತ್ತಿರೋರು ಯುವಕರು ಸಹ, ಸಾರ್ವಜನಿಕ ಪಾರ್ಕ್‌ನಲ್ಲಿ ಅಸಹ್ಯವಾಗಿ ನಡೆದುಕೊಳ್ಳುವುದು ತಪ್ಪು. ಬೇಕಿದ್ರೆ ಓಯೋ ರೂಮ್‌ಗೆ ಹೋಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು Gj Kannada ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಲ್ಲೇಶ್ವರಂ ಪಾರ್ಕ್ ನಲ್ಲಿ ರೋಮ್ಯಾನ್ಸ್ ಹಿಂತವರಿಗೆ ಏನು ಹೇಳ್ಬೇಕು? ಎಂಬ ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಅಪ್ಲೋಡ್ ಆಗಿರುವ ವಿಡಿಯೋಗೆ 2 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದೆ. ಇದೇ ವಿಡಿಯೋವನ್ನು ಬೇರೆ ಟ್ರೋಲ್ ಪೇಜ್‌ಗಳಲ್ಲಿ ಶೇರ್ ಮಾಡಲಾಗಿದೆ.

ಇದನ್ನೂ ಓದಿ: ಆಕೆಗೆ ತಿಳಿಯದಂತೆ ಈಕೆಯೊಂದಿಗೆ, ಈಕೆಗೆ ಗೊತ್ತಿಲ್ಲದಂತೆ ಆಕೆಯೊಂದಿಗೆ; ಇಬ್ಬರ ಜೊತೆ ಸಿನಿಮಾ ನೋಡಿದ ಚಾಲಕಿ!

ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?

ಈ ವಿಡಿಯೋ ನೋಡಿದ ನೆಟ್ಟಿಗರು, ಇಂತಹ ದೃಶ್ಯಗಳನ್ನು ನೋಡಿದಾಗ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆಯಾ ಎಂಬ ಆತಂಕ ಎದುರಾಗುತ್ತದೆ. ಸಾರ್ವಜನಿಕರು ಅಸಭ್ಯವಾಗಿ ನಡೆದುಕೊಳ್ಳುವ ಜೋಡಿಗೆ ಚಳಿ ಬಿಡಿಸಬೇಕು. ಪಾರ್ಕ್ ನಿರ್ವಹಣೆ ಮಾಡುವ ಸಿಬ್ಬಂದಿ ಈ ವಿಷಯವಾಗಿ ಅಲರ್ಟ್ ಆಗಿರಬೇಕು. ಈ ಜೋಡಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಷ್ಟು ಬಾರಿ ನಿನ್ನ ಜೊತೆಯಲ್ಲಿ OYOಗೆ ಬಂದಿದ್ದೀನಿ, ಈಗ್ಯಾಕೆ ಶಾಕ್! ಮಧ್ಯರಾತ್ರಿ ಪ್ರೇಮಿಯನ್ನ ದಿಗ್ಭ್ರಮೆಗೊಳಿಸಿದ ಯುವತಿ, ವಿಡಿಯೋ ನೋಡಿ

ನೂರಾರು ಪ್ರಯಾಣಿಕರ ನಡುವೆಯೇ ಜೋಡಿಯ ಅಸಹ್ಯ ಕೆಲಸ

ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ರೈಲ್ವೆಯಲ್ಲಿ ಜೋಡಿಯೊಂದು ಅಸಹ್ಯವಾಗಿ ನಡೆದುಕೊಂಡಿತ್ತು. ನೂರಾರು ಪ್ರಯಾಣಿಕರ ನಡುವೆಯೇ ಇಂಟಿಮೇಂಟ್ ಆಗಲು ಜೋಡಿ ಪ್ರಯತ್ನಿಸಿತ್ತು. ಈ ಎಲ್ಲಾ ದೃಶ್ಯಗಳನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದರು. ಈ ವಿಡಿಯೋ ಸಹ ವೈರಲ್ ಆಗಿದ್ದು, ರೈಲ್ವೆ ಇಲಾಖೆ ಸಿಬ್ಬಂದಿ ಜೋಡಿಯನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಒಯೋದಿಂದ ಹೊಸ ಅಧ್ಯಾಯ: ಗ್ರಾಹಕರಿಗೆ ಗುಡ್‌ನ್ಯೂಸ್, ಒಂದಲ್ಲ ಎರಡು ಬೆನೆಫಿಟ್

View post on Instagram