- Home
- Entertainment
- TV Talk
- BBK 12: ಇನ್ನು ಒಂದೇ ವಾರಕ್ಕೆ ಫಿನಾಲೆ; ಮುಕ್ಕಾಲು ಭಾಗ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ: ಕಿಚ್ಚ ಸುದೀಪ್
BBK 12: ಇನ್ನು ಒಂದೇ ವಾರಕ್ಕೆ ಫಿನಾಲೆ; ಮುಕ್ಕಾಲು ಭಾಗ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ: ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಪ್ರತಿ ವಾರ ಎಲಿಮಿನೇಶನ್ ನಡೆಯುತ್ತದೆ. ಈಗ ಮೊದಲ ವಾರಕ್ಕೆ ಅಮಿತ್, ಕರಿಬಸಪ್ಪ ಅವರು ಹೊರಗಡೆ ಬಂದಿದ್ದಾರೆ. ಕಳೆದ ವಾರದಿಂದಲೂ ಕಿಚ್ಚ ಸುದೀಪ್ ಅವರು ಮಾಸ್ ಎಲಿಮಿನೇಶನ್ ನಡೆಯಲಿದೆ ಎಂದು ಹೇಳುತ್ತಲೇ ಇದ್ದಾರೆ. ಈ ಬಾರಿಯೂ ಮತ್ತೆ ಅದನ್ನೇ ರಿಪೀಟ್ ಮಾಡಿದ್ದಾರೆ.

ಶೋನ ಗಾಂಭೀರ್ಯತೆ ಗೊತ್ತಿಲ್ಲ
ಈ ಬಾರಿ ಯಾರಿಗೂ ಶೋನ ಗಾಂಭೀರ್ಯತೆ ಗೊತ್ತಿಲ್ಲ. ಎಷ್ಟೊಂದು ಜನರು ಈ ಶೋಗೆ ಸ್ಪಾನ್ಸರ್ ಮಾಡಿದ್ದಾರೆ ಎಂದರೆ ಈ ಶೋನ ಘನತೆ ಅರ್ಥ ಮಾಡಿಕೊಳ್ಳಿ, ಇದು ಕಾಮಿಡಿ ಶೋ ಅಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್ ಅವರು “ನೆನಪಿಟ್ಟುಕೊಳ್ಳುವ ಸೀಸನ್ ಆಗಬೇಕಾ? ಫಾರೆನ್ಸಿಕ್ ರಿಪೋರ್ಟ್ ಕೊಡುವ ಸೀಸನ್ ಆಗಬೇಕಾ? ನಿಮಗೆ ಬಿಟ್ಟಿದ್ದು. ಹೇಗೋ ಶೋ ಮುಗಿಯುತ್ತದೆ, ಆದರೆ ಶೋ ನೆನಪಿಡುವಂಥ ಶೋ ಆಗಬೇಕು” ಎಂದು ಅವರು ಹೇಳಿದ್ದಾರೆ.
ಇನ್ನು ಒಂದು ವಾರದಲ್ಲಿ ಫಿನಾಲೆ
“ಇನ್ನು ಒಂದು ವಾರದಲ್ಲಿ ಫಿನಾಲೆಯಿದೆ. ಇಲ್ಲಿರುವ ಮುಕ್ಕಾಲು ಭಾಗ ಸ್ಪರ್ಧಿಗಳು ಹೊರಗಡೆ ಹೋಗಲೂಬಹುದು. ನಾನು ಇಲ್ಲೊಬ್ಬ ನಿರೂಪಕ ಅಷ್ಟೇ. ನಾನು ನಿಂತುಕೊಂಡ ಜಾಗದಿಂದ ನೀವೆಲ್ಲರೂ ನನಗೆ ಒಂದೇ. ನಾನು ಏನೂ ಮಾಡೋಕೆ ಆಗದು. ಇದು ಬೇಸರ ಆಗುತ್ತದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ
ಪ್ರತಿ ಸೀಸನ್‌ನಲ್ಲಿಯೂ ಇಬ್ಬರೂ ಅಥವಾ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದರು. ಸೀಸನ್‌ನಲ್ಲಿ ಕೆಲ ವಾರ ಎಲಿಮಿನೇಶನ್ ಇದ್ದಿರಲಿಲ್ಲ, ಇನ್ನೂ ಕೆಲ ವಾರ ವಾರಕ್ಕೆ ಒಬ್ಬರು ಮಾತ್ರ ಎಲಿಮಿನೇಶನ್ ಆಗುತ್ತಿದ್ದರು, ಕೊನೆಯ ವಾರಗಳಲ್ಲಿ ಡಬಲ್ ಎಲಿಮಿನೇಶನ್ ನಡೆದ ಉದಾಹರಣೆ ಇದೆ.
ರಿಪ್ಲೇಸ್ ಮಾಡಲು ಸ್ಪರ್ಧಿಗಳ ಎಂಟ್ರಿ
ಇಲ್ಲಿರುವ ಮುಕ್ಕಾಲು ಭಾಗ ಸ್ಪರ್ಧಿಗಳು ಹೊರಗಡೆ ಹೋಗಿ, ಅವರನ್ನು ರಿಪ್ಲೇಸ್ ಮಾಡಲು ಸ್ಪರ್ಧಿಗಳು ಬರಲಿದ್ದಾರೆ. ನಿಮ್ಮನ್ನು ರಿಪ್ಲೇಸ್ ಮಾಡೋಕೆ ದೊಡ್ಡ ಬ್ಯಾಚ್ ರೆಡಿಯಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದರು.