ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋತಿರುವ ವಿಷಯಕ್ಕೆ ಗ್ಯಾರಂಟಿಗಳೇ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
- Home
- News
- State
- Karnataka By-Election Results 2026 LIVE: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ವಿರುದ್ಧ ಸಚಿವ ಎನ್.ಎಸ್.ಬೋಸರಾಜು ವಾಗ್ದಾಳಿ
Karnataka By-Election Results 2026 LIVE: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ವಿರುದ್ಧ ಸಚಿವ ಎನ್.ಎಸ್.ಬೋಸರಾಜು ವಾಗ್ದಾಳಿ

ಪಂಚ ರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎಱಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಡಿಸಿಎಂ ಶಿವಕುಮಾರ್ ಆ ವಿಷಯ ಸದ್ಯಕ್ಕೆ ಬೇಡವೆಂದು ಉತ್ತರಿಸಿದ್ದಾರೆ.
ಶ್ಯಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು ಗೆದ್ದು ಬೀಗಿದ್ದಾರೆ. ಶ್ಯಾಮನೂರು ಕುಟುಂಬದಲ್ಲಿ ತಂದೆ ಮಲ್ಲಿಕಾರ್ಜುನ್ ಎಸ್.ಎಸ್ ಶಾಸಕ, ಸಚಿವನಾದರೆ, ಅಮ್ಮ ದಾವಣಗೆರೆ ಎಂಪಿ. ಇದೀಗ ಮೂರನೇ ಕುಡಿಸ 25 ವರ್ಷದ ಸಮರ್ಥ್ ಸಹ ಶಾಸಕರಾಗಿ ಆಯ್ಕೆಯಾಗಿದ್ದು, ಇನ್ನು ನಾಲ್ಕು ಬೂತುಗಳ ಮತ ಎಣಿಕೆ ಬಾಕಿ ಇದೆ.
ಎಚ್.ವೈ.ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಉಮೇಶ್ ಮೇಟಿ, ಬಿಜೆಪಿಯ ವೀರಣ್ಣ ಚರಂತಿಮಠ ಅವರ ವಿರುದ್ಧ ಸುಮಾರು 21 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ. ತಂದೆ ಗೆದ್ದ ಮತಗಳ ಅಂತರಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಮತಗಳ ಅಂತರಿಂದ ಮಗ ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಐದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.
Karnataka By-Election Results 2026 LIVE ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ವಿರುದ್ಧ ಸಚಿವ ಎನ್.ಎಸ್.ಬೋಸರಾಜು ವಾಗ್ದಾಳಿ
Karnataka By-Election Results 2026 LIVE ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬದ ಮನಸ್ಸು ಗೆದ್ದವರು ಸಿಎಂ ಆಗ್ತಾರೆ - ಸಂಸದ ಬೊಮ್ಮಾಯಿ
ಕಾಂಗ್ರೆಸ್ಸಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮನಸ್ಸು ಯಾರು ಗೆಲ್ಲುತ್ತಾರೆಯೋ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Karnataka By-Election Results 2026 LIVE ಮೋದಿ, ಶಾ ಹೇಗೆ ಬೇಕಾದರೂ ಗೆಲ್ತಾರೆ: ಭೋಸರಾಜ್
ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋಲು ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಭೋಸರಾಜ್.
ಗ್ಯಾರಂಟಿ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ. ಅಸ್ಸಾಂನಲ್ಲಿ ಅಭ್ಯರ್ಥಿಗಳು ಎಲ್ಲಿಂದ ಬಂದವರು? ಅವರೇನು ಬಿಜೆಪಿ ಆರ್ಎಸ್ಎಸ್ ನಿಂದ ಬಂದವರೇ? ಬಿಜೆಪಿ ಆಪರೇಷನ್ ಕಮಲದ ಮೂಲಕ ಗೆಲುವು ಪಡೆದಿದೆ. ದೇಶದಲ್ಲಿ ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿ. ಪಶ್ಚಿಮ ಬಂಗಾಳಕ್ಕೆ ಮೋದಿ, ಷಾ ಅವರು ಎಷ್ಟು ಬಾರಿ ಹೋದರು? ಆರು ತಿಂಗಳಿಂದ ಬಹುತೇಕ ಅಲ್ಲಿಯೇ ಇದ್ದರು. ಅಲ್ಲಿಯೇ ಇದ್ದು ಶಾ ಕುತಂತ್ರ ಮಾಡಿದರು. ಯುಪಿ ಐಎಎಸ್ ಅಧಿಕಾರಿಗಳನ್ನು ಪಶ್ಚಿಮ ಬಂಗಾಳಕ್ಕೆ ತಂದು ಹಾಕಿದರು. ಆ ಮೂಲಕ ಚುನಾವಣೆ ಗೆಲುವಿಗೆ ಕುತಂತ್ರಗಳನ್ನು ಮಾಡಿದರು. ಜೊತೆಗೆ ಅಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಹೀಗಾಗಿ ಬಿಜೆಪಿ ಗೆಲವು ಪಡೆದಿದೆ. ಅವರಿಗೆ ನೀತಿ ನಿಯಮಗಳು ಏನೂ ಇಲ್ಲ. ಒಟ್ಟಿನಲ್ಲಿ ಅವರಿಗೆ ಗೆಲುವು ಪಡೆಯಬೇಕು ಅಷ್ಟೇ. ಮಡಿಕೇರಿಯಲ್ಲಿ ಸಣ್ಣ ನೀರಾವರಿ ಸಚಿವ ಭೋಸರಾಜ್ ಬಿಜೆಪಿ ವಿರುದ್ಧ ವಾಗ್ದಾಳಿ.
Karnataka By-Election Results 2026 LIVE ಬೆಳ್ಳಿ ಪರದೆ To ಸಿಎಂ ಗದ್ದುಗೆ; ಇನ್ನು ದಳಪತಿ ದರ್ಬಾರ್ ಶುರು.. ಇದೇ ನೋಡಿ ವಿಜಯ್ ಗೆಲ್ಲಲು ಅಸಲಿ ಕಾರಣ!
ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಸಿನಿಮಾ ಮತ್ತು ಸಿದ್ಧಾಂತಗಳ ನಡುವೆ ಬೇರ್ಪಡಿಸಲಾಗದ ನಂಟಿದೆ. ಎಂ.ಜಿ. ರಾಮಚಂದ್ರನ್, ಕರುಣಾನಿಧಿ ಮತ್ತು ಜಯಲಲಿತಾ ಅವರಂತಹ ದೈತ್ಯರು ಆಳಿದ ಮಣ್ಣಿನಲ್ಲಿ, ಈಗ ಮತ್ತೊಬ್ಬ ಸಿನಿಮಾ ಸುಲ್ತಾನನ ಉದಯವಾಗಿದೆ. ಇದೀಗ ತಮಿಳುನಾಡಿನಲ್ಲಿ ಹೊಸ ಮನ್ವಂತರ ಶುರು!..
Karnataka By-Election Results 2026 LIVE ಕಾಂಗ್ರೆಸ್ ಭವಿಷ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ,
ಬೈ ಎಲೆಕ್ಷನ್ ಫಲಿತಾಂಶ 2028ರ ಚುನಾವಣೆಗೆ ದಿಕ್ಸೂಚಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಶ್ಚಿಮ ಬಂಗಾಳದಲ್ಲಿ ಏನಾಗಿದೆ ಕಾಂಗ್ರೆಸ್ ಸ್ಥಿತಿ? ಅಲ್ಲಿ ಧೂಳೀಪಟವಾಗಿದೆ. ಮೋದಿ, ಅಮಿತ್ ಷಾರಿಂದ ನಾವು ಗೆದ್ದಿದ್ದೇವೆ.
ಕಾಂಗ್ರೆಸ್ ನವರ ಭವಿಷ್ಯ ಪಶ್ಚಿಮ ಬಂಗಾಳದಲ್ಲಿ ತೋರಿಸಿದ್ದಾರೆ. ಅವರ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾಗಲಕೋಟೆ ಹಾಗೂ ದಾವಣಗೆರೆ ಗೆಲ್ಲುತ್ತೇವೆ ಅನ್ನೋ ವಿಶ್ವಾಸ ಇತ್ತು. ನಮಗೂ ಬಹಳ ನೋವಾಗಿದೆ. ಮುಂದಿನ ದಿನಗಳಲ್ಲಿ ತಪ್ಪನ್ನ ಸರಿಪಡಿಸಿಕೊಳ್ಳುತ್ತೇವೆ, ಎಂದಿದ್ದಾರೆ.
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದೆ ಪ್ರತಿಕ್ರಿಯೆ ನೀಡಿರುವ ಬಿಎಸ್‌ವೈ,್ ಜೀವರಾಜ್‌ಗೆ ಅನ್ಯಾಯವಾಗಬಾರಿದಿತ್ತು. ಈಗ ನ್ಯಾಯ ಸಿಕ್ಕಿದೆ, ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಬಹುಮತದಿಂದ ಗೆಲ್ಲಲಿ ಆಶೀರ್ವಾದ ಮಾಡುವೆ.
ಅಭಿಮಾನೋತ್ಸವ ಕಾರ್ಯಕ್ರಮ ವಿಚಾರವಾಗಿ, ಕಾರ್ಯಕರ್ಯರು ಮಾಡುವಾಗ ಬೇಡ ಅನ್ನೋಕೆ ಆಗಲ್ಲ. ಪಕ್ಷಾತೀತವಾಗಿ ಹಲವರು ಭಾಗಿ ಆಗಲಿದ್ದಾರೆ. ಅನೇಕ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಅಮಿತ್ ಶಾ ಸಹ ಕಾರ್ಯಕ್ರಮಕ್ಕೆ ಬರ್ತಿದ್ದಾರೆ. ವಾರಕ್ಕೆ ಒಂದು ದಿನವಾದ್ರೂ ಮುಂದಿನ ದಿನಗಳಲ್ಲಿ ಹೋಗಿ ಕೆಲಸ ಮಾಡ್ತೀನಿ
ಮುಂದೆ ಜಿಲ್ಲಾ ಪ್ರವಾಸ ಮಾಡುತ್ತೇನೆಂದ ಬಿಎಸ್ ವೈ.
Karnataka By-Election Results 2026 LIVE ದಾವಣಗೆರೆ ದಕ್ಷಿಣ: ಅಜ್ಜನ ಗದ್ದುಗೆಗೆ ಮೊಮ್ಮಗನ ಲಗ್ಗೆ! ಕಾಂಗ್ರೆಸ್ ಗೆಲುವಿಗೆ ಕಾರಣವಾದ ಅಂಶಗಳಿವು
ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು 4,873 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಶಾಮನೂರು ಕುಟುಂಬದ ಮೇಲಿನ ಅನುಕಂಪ, ಲಿಂಗಾಯತ ಮತ್ತು ಕುರುಬ ಸಮುದಾಯದ ಬೆಂಬಲ ಹಾಗೂ ಪ್ರಚಾರ ತಂತ್ರಗಳು ಈ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ. ಈ ಫಲಿತಾಂಶವು ಕಾಂಗ್ರೆಸ್‌ಗೆ ಬಲ ನೀಡಿದ್ದು, ಬಿಜೆಪಿ ಆತ್ಮಪರಿಶೀಲನೆಗೆ ದಾರಿ ಮಾಡಿಕೊಟ್ಟಿದೆ.
Karnataka By-Election Results 2026 LIVE ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ದುರುಪಯೋಗವಾಗಿದೆ: ಡಿಕೆಶಿ
ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ,
ಯಾರ್ಯಾರು ಏನೇನು ಹೇಳಿದ್ರು ಗೊತ್ತಿಲ್ಲ. ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿದ್ರು. ಮಾಧ್ಯಮಗಳ ಮುಂದೆ ಏನು ಮಾತನಾಡಿದ್ರು ಬೇಕಿಲ್ಲ. ಮುಂದೆ ಪಕ್ಷದ ಬಗ್ಗೆ ನಾವು ಮಾತನಾಡ್ತೇವೆ. ದಾವಣಗೆರೆಯಲ್ಲಿ ಒಳ ಏಟು ಬಿದ್ದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ವ್ಯಕ್ತಿಗಳ ಅಭಿಪ್ರಾಯ ಬೇರೆ ಇರಬಹುದು. ಆದರೆ ಎಲ್ಲರೂ ಒಟ್ಟಾಗಿಯೇ ಇದ್ದಾರೆ. ನಮ್ಮ ಗ್ಯಾರೆಂಟಿಗಳಿಗೆ ಭಾಗ್ಯದ ಲಕ್ಷ್ಮೀ ಭಾರಮ್ಮ ಅಂತ ಬಂದಿದೆ. ಎಲ್ಲರಿಗೆ 2000 ಹಾಕಿದ್ದೆವು. ಗೃಹಲಕ್ಷ್ಮಿ,ಅನ್ನಭಾಗ್ಯ,ಸ್ತ್ರಿ ಶಕ್ತಿ ಎಲ್ಲ ಶಕ್ತಿ ತುಂಬಿದ್ದಾರೆ. 2028ಕ್ಕೆ ನಿಮಗೆ ಶಕ್ತಿ ಕೊಡ್ತೇವೆ ಅಂದಿದ್ದಾರೆ. ಒಂದೊಂದು ಎಲೆಕ್ಷನ್ ಒಂದೊಂದು ರೀತಿ ಇರುತ್ತೆ, ಎಂದರು.
ಕೇರಳದಲ್ಲಿ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದರು. ಜನ ನಮಗೆ ಆಶೀರ್ವದಿಸಿದ್ದಾರೆ. ಅವರಿಗೆಅಭಿನಂದನೆಗಳು. ತಮಿಳುನಾಡಿನಲ್ಲಿ ನಮ್ಮ ಮೈತ್ರಿ ಪಕ್ಷ ಆಗದಿರಬಹುದು. ಆದರೆ ಬಿಜೆಪಿಯನ್ನ ದೂರವಿಟ್ಟಿದ್ದಾರೆ. ಅದಕ್ಕೆ ಅವರಿಗೂ ಅಭಿನಂದಿಸ್ತೇನೆ. ಜನರ ಭಾವನೆಗಳಿಗೆ ನಾವು ಸ್ಪಂದಿಸ್ತೇವೆ. ಬಿಜೆಪಿ ಕೇಂದ್ರದ ಅಧಿಕಾರವನ್ನು ಬಹಳ ದುರುಪಯೋಗ ಮಾಡಿಕೊಂಡಿದೆ. 2.50 ಲಕ್ಷ ಸೆಂಟ್ರಲ್ ಪೋರ್ಸ್ ಹಾಕಿದ್ದಾರೆ. ಹೆದರಿಸಿ ಬೆದರಿಸಿ ಅಲ್ಲಿ ಮತ ಹಾಕಿಸಿದ್ದಾರೆ.
ದಾವಣಗೆರೆ ಗೆಲುವು ಹಿನ್ನೆಲೆಯಲ್ಲಿ ಅಮಾನತು ಆದವರ ವಾಪಸ್ ಮಾಡ್ತೀರ ಎಂಬ ವಿಚಾರಕ್ಕೆ, ಅದು ಪಾರ್ಟಿ ಇಂಟರ್ನಲ್ ವಿಚಾರವೆಂದರು.
Karnataka By-Election Results 2026 LIVE ಬಾಗಲಕೋಟೆ, ದಾವಣಗೆರೆ ಮತದಾರರು ನಮ್ಮ ಕೈ ಹಿಡಿದ್ರು: ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ರಾಜ್ಯದಲ್ಲಿ ಇಬ್ಬರು ನಾಯಕರ ನಿಧನದ ಕಾರಣ ಉಪ ಚುನಾವಣೆ ನಡೆಯಿತು. ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸ್ತೇನೆ. ರಾಜ್ಯದ ಮೂಲೆ ಮೂಲೆಯಿಂದ ಮತದಾರರು ಬಂದು ಕೆಲಸ ಮಾಡಿದ್ರು. ಕೆಲಸ ಮಾಡಿದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸ್ತೇನೆ. ಮೂರು ಇವಿಎಂ ಸಮಸ್ಯೆ ಆಗಿದೆ, ವಿವಿ ಪ್ಯಾಟ್ ಎಣಿಕೆ ಮಾಡ್ತಾರೆ.
1500 ಓಟು ಎಣಿಸಬೇಕು. 4900 ಓಟು ಲೀಡ್ ನಲ್ಲಿ ಇದ್ದಾರೆ. ಗೆಲುವಿನ ಅಂತಿಮ ಸಂಖ್ಯೆ ಬರಬೇಕಷ್ಟೇ. ಬಾಗಲಕೋಟೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದೇವೆ. ದಾವಣಗೆರೆಯಲ್ಲಿ 19 ಸಾವಿರ ಓಟ್ ಶಿಫ್ಟ್ ಆಗಿದೆ. ನಾವು ಏನು ಲೆಕ್ಕಾಚಾರ ಗಮಿಸಿದ್ವಿ ಅದು ಆಗಿದೆ. ಚುನಾವಣೆಯಲ್ಲಿ ನಾವು ಎರಡು ಸೀಟ್ ಗೆದ್ದಿದ್ದೇವೆ. ವಿರೋಧ ಪಕ್ಷದವರು ಸಂಭ್ರಮದಲ್ಲಿ ಇದ್ದರು, ಟೀಕೆ ಮಾಡಿದ್ರು. ಆದರೆ ಜನ ನಮ್ಮ ಕೈ ಹಿಡಿದಿದ್ದಾರೆ
Karnataka By-Election Results 2026 LIVE ನಟ ವಿಜಯ್ ಮುಂದಿನ ನಡೆ ಏನು? ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ ತಮಿಳುನಾಡಲ್ಲಿ ಮುಂದೆ ಏನಾಗಬಹುದು?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಸುಮಾರು 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದೆ. ಸ್ಪಷ್ಟ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಕೆಲವೇ ಸ್ಥಾನಗಳ ಕೊರತೆಯಿಂದಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮೈತ್ರಿ ರಾಜಕೀಯ ಮತ್ತು ಸರ್ಕಾರ ರಚನೆಯ ಕಸರತ್ತುಗಳು ತೀವ್ರಗೊಂಡಿವೆ.
Karnataka By-Election Results 2026 LIVE 'ರಾಹುಲ್, ಪ್ರಿಯಾಂಕಾ ಗಾಂಧಿ ಜನಪ್ರಿಯತೆಗೆ ಕೇರಳಂ ಗೆಲವು ಕಾರಣ'
ಕೇರಳದಲ್ಲಿ ಯುಡಿಎಫ್ ಗೆಲವು ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿ ಭೋಸರಾಜ್ ಹೇಳಿಕೆ.
ಅಲ್ಲಿ ಗೆಲ್ಲುವುದು ನಮ್ಮ ನಿರೀಕ್ಷೆ ಇತ್ತು. ಚುನಾವಣೆಗೂ ಮುನ್ನ ಜನಾಭಿಪ್ರಾಯವೂ ಹಾಗೆ ಇತ್ತು. ಅಲ್ಲಿನ ಮುಖ್ಯಮಂತ್ರಿ ವಿರುದ್ಧವೂ ಜನಾಭಿಪ್ರಾಯವಿತ್ತು. ಆರು ತಿಂಗಳಿಂದ ಎಲ್ಲಾ ಯೋಜನೆ ರೂಪಿಸಿದ್ದೆವು. ಆಡಳಿತ ವಿರೋಧಿ ಅಲೆ ಅಲ್ಲಿ ಇತ್ತು.ಈ ಎಲ್ಲಾ ಕಾರಣಗಳಿಂದ ನಾವು ಸಾಕಷ್ಟು ಕೆಲಸ ಮಾಡಿದ್ದೆವು.. ಅದರಂತೆ ಅಲ್ಲಿ ನಾವು ಗೆದ್ದಿದ್ದೇವೆ. ನಾನು ಕೂಡ ಎರಡು ಜಿಲ್ಲೆಗಳ ಜವಾಬ್ದಾರಿ ಹೊತ್ತಿದ್ದೆ. ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದೆ. ಉಳಿದ ರಾಜ್ಯಗಳಲ್ಲಿ ನಾವು ಪಾರ್ಟ್‌ನರ್ ಅಷ್ಟೇ.
Karnataka By-Election Results 2026 LIVE ದಾವಣಗೆರೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಸಮರ್ಥ್ ಗೆಲುವಿಗೆ ಕಾರಣಗಳು
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವು,
ಗೆಲುವಿಗೆ ಕಾರಣವಾದ ಅಂಶಗಳು.. ಶಾಮನೂರು ಸಾವಿನ ಅನುಕಂಪ ಕೈಹಿಡಿದಿದೆ.
ಲಿಂಗಾಯತ ಸಮುದಾಯದ ಮತಗಳು ಬಂದಿವೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಾಲು ಹೆಚ್ಚು.
ಕುರುಬ ಸಮುದಾಯದ ಮತಗಳ ಚಲಾವಣೆಯಲ್ಲಿ ವ್ಯತ್ಯಾಸ ಆಗದಿರುವುದು.
ಯುವಕರನ್ನು ಹೊರತುಪಡಿಸಿ ಶೇಕಡಾ 70 ರಷ್ಟು ಸಾಂಪ್ರದಾಯಿಕ ಮುಸ್ಲಿಂ ಸಮುದಾಯದ ಮತಗಳು ಕೈಹಿಡಿದಿರುವುದು..
ಸಿಎಂ - ಡಿಸಿಎಂ ಕ್ಷೇತ್ರದ ಗೆಲುವಿಗೆ ಪ್ರಚಾರ ಮತ್ತು ರಣತಂತ್ರ ಯಶಸ್ವಿ
ಪ್ರಬಲ ಮುಸ್ಲಿಂ ಅಭ್ಯರ್ಥಿಯಾಗಿದ್ದ ಸಾದಿಕ್ ಫೈಲ್ವಾನ್ ಕಣದಿಂದ ಹಿಂದೆ ಸರಿದಿರುವುದು..
Karnataka By-Election Results 2026 LIVE ದಾವಣಗೆರೆಯಲ್ಲಿ ಕೈ ಅಭ್ಯರ್ಥಿಗೆ ಗೆಲವು: ಕಣ್ಣೀರು ಹಾಕಿದ ಬಿಜೆಪಿ ಕಾರ್ಯಕರ್ತರು
ಬಿಜೆಪಿ ಅಭ್ಯರ್ಥಿಯ ಬೆಂಬಲಿಗರಿಂದ ಕಣ್ಣೀರು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಗಂಗಾಧರ ಸುವರ್ಣ ನ್ಯೂಸ್ ಗೆ ಹೇಳಿಕೆ. ಮೋಸ ಹಣಬಲದಿಂದ ಗೆಲುವು ಸಾಧಿಸಿದ್ದಾರೆ ಎಂದು ಕಣ್ಣೀರು ಹಾಕಿದ ಗಂಗಾಧರಪ್ಪ. 2028ಕ್ಕೆ ಮತ್ತೊಮ್ಮೆ ಶ್ರೀನಿವಾಸ್ ದಾಸ್ ಕರಿಯಪ್ಪನವರನ್ನು ನಿಲ್ಲಿಸಿ ಗೆಲ್ಲಿಸಿ ಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಶಪಥ ಮಾಡಿದ ಬಿಜೆಪಿ ಕಾರ್ಯಕರ್ತ.
ಕಡೆಯ ಸುತ್ತಿನ ಮತದಾನ ಮುಗಿದಿದ್ದು, ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೂರನೇ ಕುಡಿ ಸಮರ್ಥ್ ಶ್ಯಾಮನೂರ್ ಅವರಿಗೆ ವಿಜಯಲಕ್ಷಿ ಒಲಿದಿದ್ದಾಳೆ. 21ನೇ ಸುತ್ತಿನ ಮುಕ್ತಾಯಕ್ಕೆ ಕಾಂಗ್ರೆಸ್‌ಗೆ 4865 ಮತಗಳ ಮುನ್ನಡೆ ಸಾದಿಸಿದ್ದು, ಶ್ರೀನಿವಾಸ್ ದಾಸ್ ಕರಿಯಪ್ಪ ಬಿಜೆಪಿ - 63746, ಸಮರ್ಥ ಶಾಮನೂರು ಕಾಂಗ್ರೆಸ್ - 68611, ಅಪ್ಸರ್ ಕೊಡ್ಲಿಪೇಟೆ ಎಸ್ ಡಿ ಪಿ ಐ 18785 ಮತಗಳಿಸಿದ್ದಾರೆ.
Karnataka By-Election Results 2026 LIVE ಕಾಂಗ್ರೆಸ್‌ಗೆ ಅಡ್ರಸ್ ಇಲ್ಲದಂತಾಗಿದೆ: ಜಗದೀಶ ಶೆಟ್ಟರ್
ಹುಬ್ಬಳ್ಳಿ: ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ. ಮೋದಿ ಬಗೆಗಿನ ಟೀಕೆ, ಮಹಿಳಾ ಮೀಸಲಾತಿ ವಿರೋಧಕ್ಕೆ ಕಾಂಗ್ರೆಸ್‌ಗೆ ಜನತೆಯಿಂದ ತಕ್ಕ ಉತ್ತರ ಕಾಂಗ್ರೆಸ್ಸಿಗರೇ ನಿಮ್ಮ ಅಡ್ರೆಸ್ ಎಲ್ಲಿದೆ ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗುತ್ತಿದೆ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಸಿಕ್ಕಿದೆ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸುತ್ತಿದೆ. ಮಮತಾ ಬ್ಯಾನರ್ಜಿ ದುರಾಡಳಿತಕ್ಕೆ ಜನತೆ ತಕ್ಕ ಉತ್ತರ ಕೊಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ .ಅಸ್ಸಾಂಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಪಾಂಡಿಚೆರಿಯಲ್ಲಿಯೂ ಗೆಲುವು ಸಾಧಿಸಿದೆ. ಕೇರಳದಲ್ಲಿ ನಮ್ಮ ಪಕ್ಷ ಖಾತೆ ತೆರೆದಿದೆ. ಟಿವಿಕೆ ಕಾರಣಕ್ಕಾಗಿ ತಮಿಳುನಾಡಿನಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಒಟ್ಟಾರೆ ಫಲಿತಾಂಶ ಬಿಜೆಪಿಗೆ ಸಮಾಧಾನ ತಂದಿದೆ. ಈ ಗೆಲುವಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರಣತಂತ್ರ ಕಾರಣ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚೋದು ಖಚಿತ.
Karnataka By-Election Results 2026 LIVE ಪಶ್ಚಿಮ ಬಂಗಾಳ, ಅಸ್ಸಾನಲ್ಲಿ ಗೆದ್ದಿದ್ದಕ್ಕೆ ಕರ್ನಾಟಕದಲ್ಲಿ ಬಿಜೆಪಿ ಸಂಭ್ರಮ
ಪಶ್ಚಿಮ ಬಂಗಾಳ, ಆಸ್ಸಾಂ ಮತ್ತು ಪುದುಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಣೆ. ವಿಜಯೋತ್ಸವದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿ.
Karnataka By-Election Results 2026 LIVE ಆಂಧ್ರ, ತಮಿಳುನಾಡಲ್ಲಿ ಸಿನಿಮಾ ನಟರಿಗೆ ವೋಟು ಗ್ಯಾರಂಚಿ: ಕೆ.ಎಂ.ಶಿವಲಿಂಗೇ ಗೌಡ
ಹಾಸನ: ಇಂದು ಪಂಚರಾಜ್ಯ ಹಾಗೂ ಉಪಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಹಾಸನದ ಅರಸೀಕೆರೆಯ ಹಾರನಹಳ್ಳಿಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ,
ನಾನೂ ದಾವಣಗೆರೆಯಲ್ಲಿ 10 ದಿನ ಪ್ರಚಾರಕ್ಕೆ ಹೋಗಿದ್ದೆ. ಇವತ್ತು ಗೆದ್ದಿದ್ದೇವೆ. ತಮಿಳುನಾಡು, ಆಂದ್ರದಲ್ಲಿ ಫಿಲಂ ಸ್ಟಾರ್ ಗಳಿಗೆ ವೋಟ್ ಹಾಕ್ತಾರೆ, ಅನ್ನೋದಕ್ಕೆ ವಿಜಯ್‌ಗೆ ವೋಟ್ ಹಾಕಿದ್ದಾರೆ. ಅವನಿಗೆ ಜನ ಸೇರ್ತಿದ್ದನ್ನು ನೋಡಿ ನಾವು ಆಗಲೇ ಅಸೆಸ್ ಮಾಡಿದ್ವಿ. ತಮಿಳಿನಾಡಿನಲ್ಲಿ ನಮ್ಮ ಕಾಂಗ್ರೆಸ್ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ವಿರೋಧಿ ಪಕ್ಷವನ್ನು ತೆಗೆಯಬೇಕು ಅಂತಾ ಐದು ವರ್ಷ ಮಮತಾ ಬ್ಯಾನರ್ಜಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಇವತ್ತು ಫಲಿತಾಂಶ ಬಂದಿದೆ. ಇದು ಬಹುದಿನ ಉಳಿಯೋದಿಲ್ಲ, ಆವಮ್ಮನ ರಾಜಕಾರಣದ ಎದುರು ನಿಲ್ಲಲ್ಲು ಆಗುವುದಿಲ್ಲ. ತಾತ್ಕಾಲಿಕವಾಗಿ ಬಂದಿದೆ, ಮಮತಾ ಬ್ಯಾನರ್ಜಿನೇ ಈ ದೇಶಕ್ಕೆ, ಆ ರಾಜ್ಯಕ್ಕೆ ನಾಯಕರು. ಒಂದೊಂದು ಚುನಾವಣಾ ಒಂದು ಫ್ಯಾಕ್ಟರ್ ಮೇಲೆ ಹೋಗುತ್ತೆ. ಅವರ ಬೆಂಬಲಗರ 90 ಸಾವಿರ ವೋಟರ್ಸ್ ತೆಗೆದ್ರು. ಬಾಂಗ್ಲಾದಿಂದ ಬಂದ ಮತದಾರರನ್ನು ತೆಗೆದುಹಾಕಿದ್ರು ಈತನ ಏನೇನೋ ಇದೆ. ಒಂದೊಂದು ಸಾರಿ ತಾತ್ಕಾಲಿಕ ಅರೆಂಜ್ ಮೆಟ್ಸ್ ಆಗಿರುತ್ತೆ, ಅದು ಪರ್ಮನೆಂಟ್ ಅಲ್ಲ. ಒಂದು ಬದಲಾವಣೆ ಬಯಸಿದ್ದಾರೆ ಅಂತಾ ಕಾಣುತ್ತೆ. ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ಹಿನ್ನಡೆ ವಿಚಾರ. ಮುಸ್ಲಿಂ ನಾಯಕರ ಹಿನ್ನಡೆ ಏನೂ ಇಲ್ಲ. ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ.
Karnataka By-Election Results 2026 LIVE ದಾವಣಗೆರೆ: ನಾಲ್ಕು ಬೂತ್‌ಗಳಲ್ಲಿ ಮತ ಎಣಿಕೆಯಲ್ಲಿ ವ್ಯತ್ಯಯ
ವಿವಿ ಪ್ಯಾಟ್ ಮ್ಯಾಚ್ ಪ್ರಕ್ರಿಯೆ ದಾವಣಗೆರೆಯ ನಾಲ್ಕು ಬೂತ್‌ಗಳ ಮತ ಎಣಿಕೆಯಲ್ಲಿ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರ್ ಮತಗಳ ಅಂತರ ಕುಸಿದರೂ, ಗೆಲ್ಲುವ ವಿಶ್ವಾಸವಿದೆ. ಆದರೆ, ಬಿಜೆಪಿಯ ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು ಬಿಜೆಪಿಯೇ ದಾವಣಗೆರೆಯಲ್ಲಿ ಗೆಲ್ಲೋದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕೊನೆಯ ಎರಡು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ.
Karnataka By-Election Results 2026 LIVE ಪಶ್ಚಿಮ ಬಂಗಾಳದಲ್ಲಿ ಮೋದಿ ನಾಯಕತ್ವಕ್ಕೆ ಗೆಲವು: ವಿಜಯೇಂದ್ರ
ವಿಜಯೇಂದ್ರ, ಅಶೋಕ್, ಸಚಲವಾದಿ, ಸಿಟಿ ರವಿ ಪತ್ರಿಕಾಗೋಷ್ಠಿ....
ವಿಜಯೇಂದ್ರ ಹೇಳಿಕೆ, ಪಶ್ಚಿಮ ಬಂಗಾಳದಲ್ಲಿ ಮೋದಿ ನಾಯಕತ್ವಕ್ಕೆ ಗೆಲುವಾಗಿದೆ. ಹಿಂದು ರಕ್ಷಣೆ ಮಾಡುವ ಸರ್ಕಾರ ಅಲ್ಲಿ ಬಂದಿದೆ. ಅಭೂತಪೂರ್ವ ಗೆಲುವು ಆಗಿದೆ. ನಾವು ನಿರೀಕ್ಷೆ ಮಾಡಿರಲಿಲ್ಲ ಇಷ್ಟು ದೊಡ್ಡ ಗೆಲುವು. ಮೋದಿ ನಾಯಕತ್ವಕ್ಕೆ ಶಕ್ತಿ ತುಂಬಿದಂತಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಮೊದಲ ಚುನಾವಣೆ ಗೆಲುವಾಗಿದೆ ಅಮಿತ್ ಶಾ ಅವರ ಚಾಣಾಕ್ಷ ನಡೆ ಕೂಡ ಗೆಲುವಿಗೆ ಕಾರಣವಾಗಿದೆ ಅಲ್ಲಿನ ಜನರಿಗೆ ದೊಡ್ಡ ನಮಸ್ಕಾರ ಹಾಕಬೇಕಿದೆ. ದಬ್ಬಾಳಿಕೆ ಆಡಳಿತ ಮುಕ್ತಾಯ ಆಗಿದೆ.
Karnataka By-Election Results 2026 LIVE ತ್ರಿಶಾಳಿಂದಲೇ ವಿಜಯ್ ಸಂಸಾರದಲ್ಲಿ ಬಿರುಕು; Thalapathy Vijay ಗೆಲ್ಲುತ್ತಲೇ ದಳಪತಿ ಮನೆಗೆ ಬಂದ ನಟಿ!
Thalapathy Vijay Victory: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರ ನೀಲಾಂಕರೈ ನಿವಾಸಕ್ಕೆ ನಟಿ ತ್ರಿಶಾ ಭೇಟಿ ನೀಡಿದ್ದಾರೆ. ಅವರು ಅಲ್ಲಿಗೆ ಏಕೆ ಹೋಗಿದ್ದಾರೆ ಎಂಬುದರ ಕುರಿತು ವಿವರವಾಗಿ ನೋಡೋಣ.
Karnataka By-Election Results 2026 LIVE ತಿರುಪತಿಯಲ್ಲಿ ಪೂಜೆ ಮಾಡಿಸ್ಕೊಂಡು ವಿಜಯ್ ಮನೆಗೆ ತ್ರಿಷಾ ಆಗಮನ
ಟಿವಿಕೆ ಸಂಸ್ಥಾಪಕ ವಿಜಯ್ ಜೊತೆ ನಟಿ ತ್ರಿಷಾ ಸಂಬಂಧದ ಕುರಿತು ಚುನಾವಣೆ ವೇಳೆಯಲ್ಲಿ ಹಲವು ಊಹಾಪೋಹಗಳು ಎದ್ದಿದ್ದವು. ಚುನಾವಣೆ ವೇಳೆಯಲ್ಲಿಯೇ ವಿಜಯ್ ಪತ್ನಿ ಸಂಗೀತಾ ಡಿವೋರ್ಸಿಗೆ ಅಪ್ಲೈ ಮಾಡಿದ್ದು, ಚುನಾವಣಾ ಗಿಮಿಕ್ ಎಂದೇ ಹೇಳಲಾಗಿತ್ತು. ಅಲ್ಲದೇ ವಿಜಯ್ ಜನಪ್ರಿಯತೆ ಕುಗ್ಗಿಸಲು ಡಿಎಂಕೆ ಮಾಡುತ್ತಿರುವ ಕುತಂತವೆಂದೂ ಹೇಳಲಾಗುತ್ತಿತ್ತು. ಆದರೆ, ಯಾವುದಕ್ಕೂ ಅಂಜದ ಈ ಜೋಡಿ, ಒಂದೇ ತರದ ಬಟ್ಟೆ ಹಾಕ್ಕೊಂಡು ಮದ್ವೆಯೊಂದರಲ್ಲಿ ಪಾಲ್ಗೊಂಡಿತ್ತು. ಇದೀಗ ವಿಜಯ್‌ಗೆ ವಿಜಯಲಕ್ಷ್ಮಿ ಒಲಿದ ಬೆನ್ನಲ್ಲೇ, ತಿರುಪತಿಯಲ್ಲಿ ಪೂಜೆ ಮಾಡಿಸಿಕೊಂಡು ಬಂದ ತ್ರಿಷಾ ಪ್ರಸಾದದೊಂದಿಗೆ ನೇರವಾಗಿ ವಿಜಯ್ ಮನೆಗೆ ಆಗಮಿಸಿದ್ದಾರೆ. 
Karnataka By-Election Results 2026 LIVE 5 States Assembly Election Results 2026 - 'ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಲ ಬಿಚ್ಚಲು ಸಾಧ್ಯವಿಲ್ಲ' ತಮಿಳುನಾಡು, ಬಂಗಾಳ ಫಲಿತಾಂಶದ ಬಗ್ಗೆ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ!
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.