Asianet Suvarna News Asianet Suvarna News

ಕಾರ್ಕಳ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಶಾಸಕ ಸುನಿಲ್ ಕುಮಾರ ಆಕ್ರೋಶ

ನೆನ್ನೆ ಕಾರ್ಕಳದಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವತಿ ಮೇಲೆ ಅತ್ಯಾಚಾರ ಘಟನೆ ನಡೆದಿದೆ ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Karkal MLA Sunil kumar spark about hindu girl gangraped by muslim group in karkal rav
Author
First Published Aug 24, 2024, 12:15 PM IST | Last Updated Aug 24, 2024, 12:15 PM IST

ಕಾರ್ಕಳ (ಆ.24): ನೆನ್ನೆ ಕಾರ್ಕಳದಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವತಿ ಮೇಲೆ ಅತ್ಯಾಚಾರ ಘಟನೆ ನಡೆದಿದೆ ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯನ್ನ ಪುಸಲಾಯಿತಿ ಸ್ಥಳಕ್ಕೆ ಕರೆಯಿಸಿಕೊಂಡು ಅಮಲು ಬರಿಸುವ ವಸ್ತು ಬೀಯರ್‌ನಲ್ಲಿ ಬೆರೆಸಿ ಕುಡಿಸಿ ಅತ್ಯಾಚಾರ ಮಾಡಿದ್ದಾನೆ. ಲವ್‌ ಜಿಹಾದ್‌ನಂತಹ ಪ್ರಕರಣ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಇಂತಹ ಘಟನೆ ನಡೆಯಲು ಕಾರಣ. ಈ ಬಗ್ಗೆ ಸರ್ಕಾರ ಎಚ್ಚರವಹಿಸಬೇಕು. ಯುವತಿಯರು ಕೂಡ ಇಂತಹ ಘಟನೆಗಳಿಂದ ಪಾಠ ಕಲಿಯಬೇಕು. ಎಚ್ಚರಿಕೆಯಿಂದ ಇರಬೇಕು ಎಂದರು.

ಕಾರ್ಕಳದ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಭುಗಿಲೆದ್ದ ಆಕ್ರೋಶ!

ಹಿಂದೂ ಯುವತಿಯರು ಆದಷ್ಟು ದೂರ ಇರಬೇಕು. ಮುಸ್ಲಿಂ ಯುವಕರ ಸ್ನೇಹ, ಪ್ರೀತಿ ವಿಚಾರದಲ್ಲಿ ಆಸೆ, ಆಮಿಷೆಗಳಿಗೆ ಒಳಗಾಗದೆ ತುಂಬಾ ಎಚ್ಚರಿಕೆಯಿಂದ ಇರಬೇಕು ಕಾನೂನು ಸುವ್ಯವಸ್ಥೆ ಹಾಳಾಗೋ ಜೊತೆಗೆ, ಇಂತ ಕೃತ್ಯಗಳನ್ನ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಇಂತಹ ಕೃತ್ಯಗಳು ಹೆಚ್ಚಲು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios