Asianet Suvarna News Asianet Suvarna News

ಕಾರ್ಕಳದ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಭುಗಿಲೆದ್ದ ಆಕ್ರೋಶ!

ಕೊಲ್ಕತ್ತ ವೈದ್ಯೆಯ ಸಾಮೂಹಿಕ ಅತ್ಯಾಚಾರ ಬೆನ್ನಲ್ಲೇ ಉಡುಪಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನ ಪುಸಲಾಯಿಸಿ ನಿರ್ಜನ ಸ್ಥಳಕ್ಕೆ ಕರೆಸಿಕೊಂಡು ಅನ್ಯಕೋಮಿನ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

Hindu girl gang raped by muslim youths in karkal at udupi district rav
Author
First Published Aug 24, 2024, 10:43 AM IST | Last Updated Aug 24, 2024, 11:03 AM IST

ಉಡುಪಿ (ಆ.24): ಕೊಲ್ಕತ್ತ ವೈದ್ಯೆಯ ಸಾಮೂಹಿಕ ಅತ್ಯಾಚಾರ ಬೆನ್ನಲ್ಲೇ ಉಡುಪಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನ ಪುಸಲಾಯಿಸಿ ನಿರ್ಜನ ಸ್ಥಳಕ್ಕೆ ಕರೆಸಿಕೊಂಡು ಅನ್ಯಕೋಮಿನ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಹೇಳಿಕೆ ಆದರಿಸಿ ಓರ್ವನನ್ನು ಬಂಧಿಸಿದ ಪೊಲೀಸರು. ಬಂಧಿತ  ಆರೋಪಿ ಅಲ್ತಾಫ್ ಸಂತ್ರಸ್ತ ಯುವತಿಯನ್ನ ಇನ್ಸಟಾಗ್ರಾಮ್‌ನಲ್ಲಿ ಪರಿಚಯಸಿಕೊಂಡಿದ್ದ. ಪರಿಚಯ ಸಲುಗೆ ಬೆಳೆದು ಭೇಟಿ ಮಾಡುವಂತೆ ಯುವತಿಗೆ ಪುಸಲಾಯಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದ ಅಲ್ತಾಫ್. ಶುಕ್ರವಾರ ಮಧ್ಯಾಹ್ನ ಯುವತಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ತನ್ನ ಇಬ್ಬರು ಸ್ನೇಹಿತರ ನೆರವಿನಿಂದ ಬಿಯರ್ ಬಾಟಲಿ ಕೂಡ ತರಿಸಿಕೊಂಡಿರುವ ಆರೋಪಿ. ಯುವತಿಗೆ ಗೊತ್ತಾಗದಹಾಗೆ ಬಿಯರ್ ಬಾಟಲಿಯಲ್ಲಿ ಮಾದಕ ವಸ್ತು ಪದಾರ್ಥ ಬೆರೆಸಿ ಅತ್ಯಾಚಾರ ಮಾಡಲಾಗಿದೆ. ಸ್ನೇಹಿತರು ಸೇರಿ ಮೂವರು ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ.

ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಮೇಲೆ ಆಗಿರುವುದು ರೇಪ್‌, ಗ್ಯಾಂಗ್‌ರೇಪ್‌ ಅಲ್ಲ: ಕೋರ್ಟ್‌ಗೆ ತಿಳಿಸಿದ ಸಿಬಿಐ!

ಅತ್ಯಾಚಾರ ಬಳಿಕ ನಿತ್ರಾಣಗೊಂಡಿದ್ದ ಯುವತಿಯನ್ನ ಮನೆ ಸಮೀಪದಲ್ಲಿ ಬಿಟ್ಟು ಪರಾರಿಯಾಗಿದ್ದ ಆರೋಪಿಗಳು. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಕಾರ್ಯಕರ್ತರು ಜಮಾಯಿಸಿದ್ದಾರೆ. ಇದು ಸಾಮೂಹಿಕ ಅತ್ಯಾಚಾರವಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಠಾಣೆಗೆ ಹೋಗಿದ್ದ ಹಿಂದೂ ಕಾರ್ಯಕರ್ತರು. ಸದ್ಯ ಪೋಷಕರು ಹೇಳಿಕೆಯಂತೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. 

ಪೊಲೀಸರು ಹೇಳೋದೇನು?

ಹಿಂದೂ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕುಮಾರ ಮಾತನಾಡಿದ್ದು, ಕರ್ಕಾಳ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನ ಅಪಹರಿಸಿ ಅತ್ಯಾಚಾರ ಮಾಡಿರುವ ಬಗ್ಗೆ ದೂರು ಬಂದಿದೆ. ಯುವತಿಗೆ ಅರೋಪಿ ಮೂರು ತಿಂಗಳಿಂದ ಇನ್ಸ್‌ಟಗ್ರಾಮ್ ಮೂಲಕ ಪರಿಚಯವಿತ್ತು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಅಲ್ಲಿಂದ ಅಪಹರಿಸಿದ್ದ ಆರೋಪಿ ಮದ್ಯದಲ್ಲಿ ಏನನ್ನೋ ಬೆರೆಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ. ಸದ್ಯ ಸಂತ್ರಸ್ತೆ ಹೇಳಿಕೆ ಆಧರಿಸಿ ಆರೋಪಿ ಅಲ್ತಾಫ್‌ನನ್ನು ಬಂಧಿಸಲಾಗಿದೆ. ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನ ಸೀಜ್ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ್ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Latest Videos
Follow Us:
Download App:
  • android
  • ios