ಖ್ಯಾತ ನಿರ್ದೇಶಕ ಎಸ್. ನಾರಾಯಣ್, ಅವರ ಪುತ್ರ ಪವನ್ ಮತ್ತು ಪತ್ನಿ ಭಾಗ್ಯಲಕ್ಷ್ಮಿ ವಿರುದ್ಧ ಸೊಸೆ ಪವಿತ್ರಾ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ. ಮದುವೆಯ ನಂತರ ಹೆಚ್ಚಿನ ಹಣಕ್ಕೆ ಪೀಡಿಸಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಸೆ.11): ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಎಸ್. ನಾರಾಯಣ್ ಎ2 ಆರೋಪಿಯಾಗಿದ್ದು, ಅವರ ಪುತ್ರ ಪವನ್ ಮತ್ತು ಪತ್ನಿ ಭಾಗ್ಯಲಕ್ಷ್ಮಿ ವಿರುದ್ಧವೂ ದೂರು ದಾಖಲಾಗಿದೆ. ಎಸ್. ನಾರಾಯಣ್ ಪುತ್ರ ಪವನ್‌ನ ಪತ್ನಿ ಪವಿತ್ರಾ ಈ ದೂರನ್ನು ಸಲ್ಲಿಸಿದ್ದಾರೆ.

ಘಟನೆ ವಿವರ: ರಾಯಲ್ ದಂಪತಿ ಡಿವೋರ್ಸ್‌ಗೆ ಕಾರಣವಾಯಿತು ನೆಹರೂ ಆರ್ಡರ್ ಮಾಡಿದ್ದ ರೋಲ್ಸ್ ರಾಯ್ಸ್ : 2.25 ಕೋಟಿ ರೂ ಪರಿಹಾರಕ್ಕೆ ಆದೇಶ

ಎಸ್‌ ನಾರಾಯಣ ವಿರುದ್ಧ ಎಫ್‌ಐಆರ್, ಸೊಸೆಗೆ ವರದಕ್ಷಿಣೆ ಕಿರುಕುಳ?

2021ರಲ್ಲಿ ಎಸ್ ನಾರಾಯಣ್‌ರ ಪುತ್ರ ಪವನ್ ಮತ್ತು ಪವಿತ್ರಾ ಮದುವೆಯಾಗಿದ್ದರು. ಮದುವೆ ವೇಳೆ ₹1 ಲಕ್ಷ ಮೌಲ್ಯದ ಉಂಗುರ ಸೇರಿದಂತೆ ಮದುವೆ ಖರ್ಚನ್ನು ಪವಿತ್ರಾ ಕುಟುಂಬ ಭರಿಸಿತ್ತು. ಆದರೆ, ಮದುವೆಯ ಬಳಿಕ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಲಾಗಿದೆ ಎಂದು ಪವಿತ್ರಾ ಆರೋಪಿಸಿದ್ದಾರೆ. ಓದಿರದ ಕಾರಣ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಪವನ್‌ಗೆ ಪವಿತ್ರಾ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ಈ ನಡುವೆ ಪತಿ ಪವನ್ ಕೈಯಲ್ಲಿ ಕಾಸು ಇಲ್ದಿದ್ರೂ ತನ್ನ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಆಫ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಿದರು. ಅದಕ್ಕಾಗಿ ಮತ್ತೆ ಪತ್ನಿ ಪವಿತ್ರಾ ಬಳಿ ಹಣಕ್ಕೆ ಒತ್ತಾಯ ಮಾಡಿದ್ದರು.

ಕಲಾ ಸಾಮ್ರಾಟ್ ಟೀಂ ಅಕಾಡಮಿ ನಷ್ಟ:

ಪವನ್ ತನ್ನ ಕಲಾ ಸಾಮ್ರಾಟ್ ಟೀಂ ಅಕಾಡಮಿ ಎಂಬ ಫಿಲ್ಮ್ ಇನ್‌ಸ್ಟಿಟ್ಯೂಟ್ ಪ್ರಾರಂಭಕ್ಕೆ ಪವಿತ್ರಾ ಬಳಿ ಹಣ ಕೇಳಿದ್ದರು. ಈ ವೇಳೆ ಪವಿತ್ರಾ ತಮ್ಮ ತಾಯಿಯ ಒಡವೆಯನ್ನು ಕೊಟ್ಟಿದ್ದರು. ಆದರೆ, ಇನ್‌ಸ್ಟಿಟ್ಯೂಟ್ ಲಾಸ್ ಆಗಿ ಮುಚ್ಚಿತು. ಆ ಬಳಿಕ ಪವಿತ್ರಾ ಮತ್ತೆ ₹10 ಲಕ್ಷ ಸಾಲ ಮಾಡಿ ಪವನ್‌ಗೆ ನೀಡಿದ್ದರು. ಇಷ್ಟೆಲ್ಲ ಹಣ ನೀಡಿದರೂ ಸಹ ಹಣ ತರುವಂತೆ ಪೀಡಿಸಿದ್ದಾರೆ. ಪತಿ ಜೊತೆಗೆ ಮಾವ ಎಸ್. ನಾರಾಯಣ್, ಅತ್ತೆ ಭಾಗ್ಯಲಕ್ಷ್ಮಿ ಮೂವರು ಪವಿತ್ರಾ ಮೇಲೆ ಹಲ್ಲೆ ಮಾಡಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಲಾಗಿದೆ.

ಪವಿತ್ರಾಳನ್ನ ಹೊರಹಾಕಿದ್ದ ಎಸ್‌ ನಾರಾಯಣ ಕುಟುಂಬ:

ಜಗಳದ ಬಳಿಕ ನನ್ನನ್ನ ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರಾ ಆರೋಪಿಸಿದ್ದಾರೆ. 'ನನಗೆ ಮತ್ತು ನನ್ನ ಮಗನಿಗೆ ಯಾವುದೇ ತೊಂದರೆಯಾದರೆ ಇವರುಗಳೇ ಕಾರಣ' ಎಂದು ಎಸ್. ನಾರಾಯಣ್, ಭಾಗ್ಯಲಕ್ಷ್ಮಿ ಮತ್ತು ಪವನ್ ವಿರುದ್ಧ ಆರೋಪಿಸಿ ಕಾನೂನು ಕ್ರಮಕ್ಕೆ ಪೊಲೀಸರಿಗೆ ಪವಿತ್ರಾ ದೂರು ನೀಡಿದ್ದಾರೆ.

ಇದನ್ನೂ ಓದಿ: ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಬಿದ್ದ, ಪ್ರಶ್ನೆ ಮಾಡಿದ್ದಕ್ಕೆ ವರದಕ್ಷಿಣೆ ಕಿರುಕುಳ ಕೊಟ್ಟ!

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲು:

ವರದಕ್ಷಿಣೆ ಆರೋಪದಡಿ ಎಸ್‌ ನಾರಾಯಣ ಕುಟುಂಬದ ವಿರುದ್ಧ ಪವಿತ್ರಾ ದೂರು ನೀಡಿದ್ದು. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಕನ್ನಡ ಚಿತ್ರರಂಗದಲ್ಲಿ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.