ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್‌ ಹೇಳಿದ್ದು ಕೇಳಿ ಎಸ್‌ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?

ನಾನು ಅಣ್ಣಾವ್ರ ಮನೆಲ್ಲಿ ಕೂತಿರ್ತಾ ಇದ್ದೆ.. ಅವ್ರು ಪೇಪರ್‌ನೆಲ್ಲಾ ನೋಡ್ತಾರೆ. ಆವತ್ತು ಒಂದಿನ ಶುಕ್ರವಾರ ನಾನು ಡಿಸ್ಕಶನ್‌ಗೆ ಹೋದಾಗ ಅಣ್ಣಾವ್ರು ಏನ್ ಮಾಡಿದ್ರು ಅಂದ್ರೆ ಪೇಪರ್ ಹಿಡ್ಕೊಂಡು ನನ್ ಹತ್ರ ಬಂದ್ರು.. ಆವತ್ತು ಬಹುಶಃ ನಾಲ್ಕನೇ ವಾರ ಅಥವಾ ಐದನೇಯ ವಾರ ಅಂತ ಕಾಣಿಸುತ್ತೆ.. 

Kannada director s narayan says about vishnuvardhan and dr rajkumar relationship srb

ಕನ್ನಡದ ಯಶಸ್ವೀ ನಿರ್ದೇಶಕರಲ್ಲೊಬ್ಬರು ಎಸ್ ನಾರಾಯಣ್. ಅವರು ತಮ್ಮ ನಿರ್ದೇಶನದ 'ಸೂರ್ಯವಂಶ' ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದ್ದ ಸಮಯದಲ್ಲಿ ಡಾ ರಾಜ್‌ಕುಮಾರ್ (Dr Rajkumar) ಹಾಗು ನಟ ವಿಷ್ಣುವರ್ಧನ್ (Dr Vishnuvardhan) ನಡುವೆ ನಡೆದ ಘಟನೆಯೊಂದರ ಬಗ್ಗೆ ಹೇಳಿದ್ದಾರೆ. ಈ ಘಟನೆ ಬಗ್ಗೆ ತಿಳಿದರೆ ಎಂಥವರಿಗೂ ಅಚ್ಚರಿ ಎನಿಸುತ್ತದೆ. ಬೇರೆ ಯಾರೋ ಯಾಕೆ, ಸ್ವತಃ ಎಸ್ ನಾರಾಯಣ್ ತುಂಬಾ ಶಾಕ್‌ಗೆ ಒಳಗಾಗಿದ್ದರಂತೆ!

'ಸೂರ್ಯವಂಶ ಸಿನಿಮಾ ಮುಗಿತಾ ಇದ್ದಂಗೆ ಶುರುವಾಗಿದ್ಧೇ ಶಬ್ಧವೇದಿ. ಈ ವಿಷ್ಯ ಸಾಮಾನ್ಯ ಎಲ್ರಿಗೂ ಗೊತ್ತಿದೆ. ನಾನು ಶಬ್ಧವೇದಿ ಚಿತ್ರದ ಸ್ಕ್ರಿಪ್ಟ್‌ಗೆ ಕುಳಿತಿದ್ದಾಗ ಸೂರ್ಯವಂಶ ಚಿತ್ರದ ಪ್ರಚಂಡ ಯಶಸ್ಸನ್ನು ಖುಷಿಯಿಂದ ಅನುಭವಿಸ್ತಾ ಇದ್ದೆ. ಪ್ರತಿ ಶಕ್ರವಾರ ಆದ್ರೆ, ಕುಮಾರಸ್ವಾಮಿ (ಸೂರ್ಯವಂಶ ಚಿತ್ರದ ನಿರ್ಮಾಪಕರು ಹೆಚ್‌ಡಿ ಕುಮಾರಸ್ವಾಮಿ) ಅವ್ರು ಫುಲ್ ಫಲ್ ಪೇಜ್ ಜಾಹೀರಾತು ಕೊಡ್ತಾ ಇದ್ರು. ಗಿರಿಜಾ ಮೀಸೆ ಇರೋ ವಿಷ್ಣುವರ್ಧನ್ ಫೋಟೋ ಪೇಪರ್ ಪೇಜ್‌ ತುಂಬಾ ಇರೋದು.. 

ಭಾರತಿ ಬಿಟ್ಟು ಬೇರೆ ಸಹನಟಿ ಒಬ್ರನ್ನು ಮದ್ವೆ ಆಗಿದ್ರಾ ವಿಷ್ಣುವರ್ಧನ್?

ನಾನು ಅಣ್ಣಾವ್ರ ಮನೆಲ್ಲಿ ಕೂತಿರ್ತಾ ಇದ್ದೆ.. ಅವ್ರು ಪೇಪರ್‌ನೆಲ್ಲಾ ನೋಡ್ತಾರೆ. ಆವತ್ತು ಒಂದಿನ ಶುಕ್ರವಾರ ನಾನು ಡಿಸ್ಕಶನ್‌ಗೆ ಹೋದಾಗ ಅಣ್ಣಾವ್ರು ಏನ್ ಮಾಡಿದ್ರು ಅಂದ್ರೆ ಪೇಪರ್ ಹಿಡ್ಕೊಂಡು ನನ್ ಹತ್ರ ಬಂದ್ರು.. ಆವತ್ತು ಬಹುಶಃ ನಾಲ್ಕನೇ ವಾರ ಅಥವಾ ಐದನೇಯ ವಾರ ಅಂತ ಕಾಣಿಸುತ್ತೆ.. ಪೇಪರ್ ಹಿಡಕೊಂಡು ಬಂದವ್ರು ನನ್ನ ಪಕ್ಕ ನಿಂತು, 'ನೋಡಿ, ಏನ್ ಚೆಂದ ಕಾಣಿಸುತ್ತೆ ಈ ಗಿರಿಜಾ ಮೀಸೆ.. ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತೆ ಅವ್ರಿಗೆ...' ಅಂದ್ರು..

ನೋಡಿ, ಅದಕ್ಕೇ ಹೇಳೋದು, ಪರಿಪೂರ್ಣ ಕಲಾವಿದರು. ಯಾವುದೇ ಕಲಾವಿದರು ಇನ್ನೊಬ್ಬ ಕಲಾವಿದರನ್ನು ಹೊಗಳೋದು ಇದ್ಯಲ್ಲ, ಅದಕ್ಕೆ ಒಂದು ಪ್ರತ್ಯೇಕವಾದ ಮನಸ್ಸಿರಬೇಕು. ಆ ಹೊಗಳಿಕೆ ನಂಗೆ ಇಷ್ಟ ಆಯ್ತು- ಅಣ್ಣಾ ಎಷ್ಟು ಚೆಂದ ಹೊಗಳ್ತಾರಲ್ಲ ಅಂತ.. ತುಂಬಾ ಖುಷಿ ಪಟ್ಟೆ ನಾನು.. ಇದಾಗಿ ಎರಡೇ ದಿನಕ್ಕೆ ವಿಷ್ಣು ಸರ್‌ನ ಭೇಟಿಯಾದಾಗ ನಾನು ಹೇಳ್ದೆ.. 'ಅಣ್ಣಾವ್ರು ನಿಮ್ ಮೀಸೆನಾ ತುಂಬಾ ಹೊಗಳ್ತಾ ಇದ್ರು ಅಂತ.. '. ಅದಕ್ಕೆ ವಿಷ್ಣು ಅವ್ರು 'ಹೌದಾ ಹೌದಾ.. ಅಂತ ಆನಂದ ಪಟ್ರು.. 

ವಿಷ್ಣುವರ್ಧನ್ ಅವ್ರು ಒಂದೆರಡು ಸಲ ಕೇಳಿದ್ರು ಮತ್ತೆ, 'ಹೌದಾ ಹೌದಾ' ಅಂತ.. ಸರಿ, ಮುಂದಿನ ವಾರ, ಮತ್ತೆ ಐದನೇಯ ವಾರದ್ದೋ ಏನೋ, ಬೇರೆ ತರದ್ದೇ ಗಿರಿಜಾ ಮೀಸೆ ಇರೋ ಸೂರ್ಯವಂಶ ಚಿತ್ರದ ವಿಷ್ಣುವರ್ಧನ್ ಆಡ್ ಬರುತ್ತೆ.. ಅದು ಇನ್ನೂ ಚೆನ್ನಾಗಿರುತ್ತೆ.. ಅದ್ನ ಅಣ್ಣಾವ್ರು ನೋಡ್ಬಿಟ್ಟು, ಹೇಳಿದ್ರು.. 'ಮೀಸೆ ಕೆಲವರಿಗೆ ಹೊಂದೋದೇ ಇಲ್ಲ.. ಮೀಸೆ, ಅದು ಅಂಟಿಸ್ತಿದ್ದಾಗೆ ಆರ್ಟಿಫೀಶಿಯಲ್ ಅನ್ಸುತ್ತೆ.. ನಮ್ಮಪ್ಪಾಜಿಗೆ ಮೀಸೆ ಕೂಡ್ರಿಸಿದರೆ, ಅದು ಮುಖದ ತುಂಬಾ ಇಷ್ಟು ದಪ್ಪ ಹರಡಿ ಅದು ತುಂಬಾ ಚೆನ್ನಾಗಿರೊದು.. 

ತಿಂಗಳ ಬಳಿಕ ಡಿವೋರ್ಸ್‌ಗೆ ಪಕ್ಕಾ ಕಾರಣ ಬಿಚ್ಚಿಟ್ಟ ಚಂದನ್‌ ಶೆಟ್ಟಿ, Loversಗೆ ಇದು ಹೊಸ ಲೆಸನ್ ಆಗಬಹುದೇ?

ನಮ್ಮ ಅಪ್ಪ ಆ ಗಿರಿಜಾ ಮೀಸೆ ಹೊತ್ತು ಭೀಮನ ಪಾರ್ಟು ಮಾಡೋರು. ಗದೆ ಹಿಡ್ಕೊಂಡು ಧುರ್ಯೋಧನನ ಪಾರ್ಟ್‌ ಮಾಡೋರು.. ಆ ಮೀಸೆನೇ ಅವ್ರ ಮುಖಕ್ಕೆ ಒಂದು ಕಳೆ. ನೋಡಿ, ಅದಾದ್ಮೇಲೆ ನಾನು ನೋಡಿದ್ದು ಇದೇ, ಈ ಮೀಸೆ ನೋಡಿ ಎಷ್ಟು ಮಜಬೂತಾಗಿದೆ' ಅಂದ್ರು. ನಂಗೆ ಅಣ್ಣಾವ್ರ ಮಾತು ಕೇಳಿ ತುಂಬಾ ರೋಮಾಂಚನ ಆಗೋಯ್ತು.. ನಾನು ಅಣ್ಣಾವ್ರಿಗೆ ರಿಕ್ವೆಸ್ಟ್ ಮಾಡಿದೆ, 'ಅಣ್ಣಾ, ಇದು ಇಷ್ಟು ಚೆನ್ನಾಗಿದೆ. ನೀವೇ ಒಂದ್ ಬಾರಿ ಹೇಳ್ಬಿಡಿ, ತುಂಬಾ ಖುಷಿ ಪಡ್ತಾರೆ..' ಅಂತ. 

'ಯಾರಿಗೆ?' ಅಂದ್ರು.. ..ನಾನು 'ವಿಷ್ಣು ಸರ್‌ಗೆ.. ಅಂದೆ. ಆಗ ಅಣ್ಣ 'ಹೂ, ಹೇಳಿದ್ರಾಯ್ತು..' ಅಂದ್ರು. ಅಲ್ಲಿಂದಾನೆ ತಕ್ಷಣ ವಿಷ್ಣು ಸರ್‌ಗೆ ಪೋನ್ ಮಾಡಿದೆ, ಅಣ್ಣವ್ರಿಗೆ ಕೊಟ್ಟೆ..  ಫೋನಿನಲ್ಲಿ ಅಣ್ಣಾವ್ರು ವಿಷ್ಣು ಸರ್‌ ಜತೆ ತುಂಬಾ ಮಾಡತಾಡಿದ್ರು. ಈ ಮೀಸೆ ಬಗ್ಗೆ ಎಷ್ಟು ಹೊಗಳಿದ್ದರು ಅಂದ್ರೆ, ಪಕ್ಕದಲ್ಲಿದ್ದ ನಾನು ಭಾವುಕನಾಗ್ಬಿಟ್ಟೆ.. ಎಷ್ಟು ಚೆನ್ನಾಗಿ ಹೊಗಳಿದ್ರು.. ಆ ಕಡೆಯಿಂದ ವಿ‍ಷ್ಣು ಸರ್ ಅಣ್ಣಾ ಜತೆ ಏನ್ ಮಾತಾಡಿದ್ರೋ ಗೊತ್ತಿಲ್ಲ, ತುಂಬಾ ಹೊತ್ತು ಮಾತಾಡಿದ್ರು.. 

ಕ್ಯಾಮೆರಾ ಎದುರೇ ಕಿತ್ತಾಡ್ಕೊಂಡ ಗಾಯತ್ರಿ-ಅನಂತ್‌ ನಾಗ್, ಬೆಂಕಿಗೆ ತುಪ್ಪ ಸುರಿದಿದ್ಯಾಕೆ ರಮೇಶ್ ಅರವಿಂದ್..?!

ಸೂರ್ಯವಂಶ ಸಿನಿಮಾ ಬಗ್ಗೆ, ಆ ಗಿರಿಜಾ ಮೀಸೆ ಬಗ್ಗೆಮಾತಾಡಿದ್ರು, ಆಮೇಲೆ ಅವ್ರ ಕುಶಲೋಪರಿ ಬಗ್ಗೆ ಕೇಳಿದ್ರು ಈ ಕಡೆಯಿಂದ.. ಆ ಕಡೆಯಿಂದ ವಿಷ್ಣು ಸರ್ ಕೂಡ ತುಂಬಾನೇ ಮಾತಾಡಿದ್ರು.. ಚೆನ್ನಾಗಿತ್ತು ಆವತ್ತು. ಅದಾದ ನಂತ್ರ ಒಂದ್ ವಾರ ಆದ್ಮೇಲೆ ನಂಗೆ ವಿಷ್ಣು ಸರ್ ಸಿಕ್ಕಾಗ, ವಿಷ್ಣು ಸರ್ ಹಾಗೇ ಬಂದು ನನ್ನ ತಬ್ಕೊಂಡ್ರು.. ಆ ಆಲಿಂಗನದಲ್ಲಿ ಏನೇನೋ ಮಾತುಗಳಿದ್ವು.. ವಿಷ್ಣು ಸರ್ ಬೇರೇನೂ ಮಾತಾಡ್ಲಿಲ್ಲ. ಆದ್ರೆ ನಂಗೆ ಆ ಮಾತುಗಳು ಕಿವಿಗೆ ಬೀಳೋ ತರ ಇದ್ವು.. ಅವ್ರು ಒಂದೇ ಮಾತು ಹೇಳಿದ್ದು, ತುಂಬಾ ಥ್ಯಾಂಕ್ಸ್‌ ಸರ್.. ಅಂತ ಹೇಳಿದ್ರು. 

ನಂಗೆ ಎಷ್ಟು ಆನಂದ ಆಯ್ತು ಅಂದ್ರೆ, ಇಂಥ ಒಂದು  ಸುಂದರವಾದ ಘಳಿಗೆಗಳು ಮತ್ತೆಮತ್ತೆ ಚಿತ್ರರಂಗದಲ್ಲಿ ಬರಬೇಕು, ಬರ್ತಾನೇ ಇರಬೇಕು.. ನೋಡಿ, ಆ ಮನಸ್ಸಿಗೆ ಅಂದ್ರೆ, ವಿಷ್ಣುವರ್ಧನ್ ಅವ್ರ ಮನಸ್ಸಿಗೆ, ಸಿನಿಮಾ ಮಾಡಿದ ಸಂತೋಷಕ್ಕಿಂತಲೂ, ಆ ಸಿನಿಮಾ ಯಶಸ್ಸನ್ನು ಗಳಿಸಿದ ಸಂತೋಷಕ್ಕಿಂತಲೂ ಅಣ್ಣಾವ್ರ ಆ ಒಂದು ಹೊಗಳಿಕೆ ಸಿಕ್ತಲ್ಲಾ, ಅದು ಅದ್ಭುತ ಅನ್ನಿಸತ್ತು.. ಅದನ್ನ ಅವ್ರು ಮರೆಯಲಿಕ್ಕೇ ಸಾಧ್ಯ ಇರಲಿಲ್ಲ. ಸುಮಾರು ನೂರು ಸಲ ಆ ಘಟನೆ ಬಗ್ಗೆ ನನ್ನತ್ರ ಮಾತಾಡಿದಾರೆ..ಎಷ್ಟು ಚೆಂದ ಇದೂ.. ಎಂದಿದ್ದಾರೆ ಎಸ್ ನಾರಾಯಣ್.

ಶಿವರಾಜ್‌ಕುಮಾರ್‌ಗೆ ವಿಷ್ಣುವರ್ಧನ್‌ ಕೊಟ್ಟಿದ್ರು ಗಿಫ್ಟ್‌, ವಿಷ್ಣು ದಾದಾಗೆ ಅದ್ನ ಕೊಟ್ಟಿದ್ಯಾರು ಗೊತ್ತಾ? 

ಅಂದಹಾಗೆ, ಡಾ ವಿಷ್ಣುವರ್ಧನ್‌ ಅವರಿಗೆ ಸೂರ್ಯವಂಶ ಹಾಗು ಡಾ ರಾಜ್‌ಕುಮಾರ್ ಅವರಿಗೆ ಶಬ್ಧವೇಧಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ಎಸ್ ನಾರಾಯಣ್. ನಟ ವಿಷ್ಣುವರ್ಧನ್, ವಿಜಯಲಕ್ಷ್ಮೀ, ಇಶಾ ಕೊಪ್ಪೀಕರ್ ಮುಖ್ಯ ಭೂಮಿಕೆಯ ಸೂರ್ಯವಂಶ  ಚಿತ್ರವನ್ನು ಹೆಚ್‌ಡಿ ಕುಮಾರಸ್ವಾಮಿ ನಿರ್ಮಿಸಿದ್ದಾರೆ. ಈ ಚಿತ್ರವು 2000ನಲ್ಲಿ ತೆರೆಗೆ ಬಂದು ಅಭೂತಪೂರ್ವ ಯಶಸ್ಸು ದಾಖಲಿಸಿದೆ.   

Latest Videos
Follow Us:
Download App:
  • android
  • ios