ಉದ್ಘಾಟನೆಯಾದ ಮೂರೇ ದಿನಕ್ಕೆ ಕಿತ್ತೋಯ್ತಾ ದಶಪಥ ಹೆದ್ದಾರಿ..? ಪ್ರತಾಪ್ ಸಿಂಹ ಹೇಳಿದ್ದು ಹೀಗೆ..
ರಸ್ತೆ ಹಾಳಾಗಿದೆ, ಗುಂಡಿ ಬಿದ್ದಿದೆ ಎಂಬ ಬಗ್ಗೆ ಪೋಸ್ಟ್‌ಗಳು ವೈರಲ್ ಆದ ಬೆನ್ನಲ್ಲೇ ಸ್ಥಳದಲ್ಲಿ ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ರಸ್ತೆಯಲ್ಲಿ ಬಿದ್ದಿರೋದು ಗುಂಡಿಯಲ್ಲ ಎಂದು ಕಂಡುಕೊಂಡಿದೆ. ರಸ್ತೆಯಲ್ಲಿ ಗರ್ಡರ್ ನಡುವಿನ ಎಕ್ಸ್‌ಟೆನ್ಷನ್ ಜಾಯಿಂಟ್ ಸಮಸ್ಯೆಯಿದ್ದ ಕಾರಣ ಎನ್‌ಎಚ್‌ಎಐ ದುರಸ್ಥಿ ಕಾರ್ಯ ನಡೆಸುತ್ತಿದೆ.
ಬೆಂಗಳೂರು (ಮಾರ್ಚ್ 15, 2023): ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ಮೋದಿ ಮಾರ್ಚ್ 12 ರಂದು ಲೋಕಾರ್ಪಣೆಗೊಳಿಸಿದ್ದರು. ಈ ಮೂಲಕ ಬೆಂಗಳೂರು - ಮೈಸೂರು ನಡುವಿನ ಪ್ರಯಾಣವನ್ನು 3 ಗಂಟೆಯಿಂದ ಕೇವಲ 75 ನಿಮಿಷಗಳಿಗೆ ಇಳಿಸುತ್ತದೆ. ಇನ್ನೊಂದೆಡೆ, ಈ ಹೆದ್ದಾರಿಗೆ ವಿಧಿಸಿರುವ ಟೋಲ್ ತುಂಬಾ ಹೆಚ್ಚಾಯ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದರ ಜತೆಗೆ ಟೋಲ್ ಸಂಗ್ರಹ ವೇಳೆ ಮೊದ ದಿನ ಕೆಲ ತಾಂತ್ರಿಕ ತೊಂದರೆಗಳು ಆಗಿದ್ದು, ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಕನ್ನಡ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ಈಗ ರಸ್ತೆ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಏಳುತ್ತಿದೆ.
ಉದ್ಘಾಟನೆಯಾದ ಮೂರೇ ದಿನಕ್ಕೆ ದಶಪಥ ರಸ್ತೆ ಡ್ಯಾಮೇಜ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಸಹ ವೈರಲ್ ಆಗುತ್ತಿದೆ. ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದ್ದ, ಸದ್ಯ ದುರಸ್ತಿ ಕಾರ್ಯ ನಡೆದಿದೆ ಎಂದು ವರದಿಯೂ ಆಗಿದೆ. ಹಾಗೆ, ಅರ್ಧ ಭಾಗದಲ್ಲಿ ವಾಹನಗಳು ಓಡಾದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಲಾರಿ ಪಲ್ಟಿಯಾಗಿದ್ದು, ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಸೇರಿದಂತೆ ಅನೇಕ ವಾಹನಗಳು ಸ್ಕಿಡ್ ಆಗಿದ್ದವು ಎಂದೂ ಹೇಳಲಾಗಿತ್ತು.
ಇದನ್ನು ಓದಿ: Bengaluru-Mysuru Expressway: ವಿರೋಧದ ನಡುವೆಯೂ ಇಂದಿನಿಂದ ಬೆಂ-ಮೈ ಹೆದ್ದಾರಿ ಟೋಲ್ ಆರಂಭ!
ಇನ್ನು, ರಸ್ತೆ ಹಾಳಾಗಿದೆ, ಗುಂಡಿ ಬಿದ್ದಿದೆ ಎಂಬ ಬಗ್ಗೆ ಪೋಸ್ಟ್‌ಗಳು ವೈರಲ್ ಆದ ಬೆನ್ನಲ್ಲೇ ಸ್ಥಳದಲ್ಲಿ ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ರಸ್ತೆಯಲ್ಲಿ ಬಿದ್ದಿರೋದು ಗುಂಡಿಯಲ್ಲ ಎಂದು ಕಂಡುಕೊಂಡಿದೆ. ರಸ್ತೆಯಲ್ಲಿ ಗರ್ಡರ್ ನಡುವಿನ ಎಕ್ಸ್‌ಟೆನ್ಷನ್ ಜಾಯಿಂಟ್ ಸಮಸ್ಯೆಯಿದ್ದ ಕಾರಣ ಎನ್‌ಎಚ್‌ಎಐ ದುರಸ್ಥಿ ಕಾರ್ಯ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ.
ರಾಮನಗರ - ಬಿಡದಿ ನಡುವಿನ ಫ್ಲೈಓವರ್ ಮೇಲ್ಬಾಗದಲ್ಲಿ ಕಳೆದ ಎರಡು ದಿನದಿಂದ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆ ಹೆವಿ ವೆಹಿಕಲ್ ಓಡಾಟದ ವೇಳೆ ಎಕ್ಸ್‌ಟೆನ್ಷನ್ ಹೆಚ್ಚು ತಗ್ಗುತ್ತಿತ್ತು. ಈ ಹಿನ್ನೆಲೆ ಗರ್ಡರ್‌ನ ಎರಡು ಕಡೆ ಹೊಸ ಕಬ್ಬಿಣದ ಪ್ಲೇಟ್ ಮತ್ತು ರಾಡ್‌ಗಳನ್ನು ಅಳವಡಿಕೆ ಮಾಡಿ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಜ್ಜೆ ಹಾಕಿದ ನಮೋ
ಸದ್ಯ ರಸ್ತೆಯಲ್ಲಿ ಒಂದು ಭಾಗದಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟು ದುರಸ್ಥಿ ಕಾರ್ಯ ಮಾಡಲಾಗುತ್ತಿದ್ದು, ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್ ಹಾಕಿ ಅಧಿಕಾರಿಗಳು ವಾಹನಗಳನ್ನ ಡೈವರ್ಟ್ ಮಾಡಿದ್ದಾರೆ. ಮುಂದಿನ 2 - 3 ದಿನದಲ್ಲಿ ಈ ದುರಸ್ಥಿ ಕಾರ್ಯ ಪೂರ್ಣವಾಗಲಿದ್ದು, ಗರ್ಡರ್ ನಡುವಿನ ಎಕ್ಸ್‌ಟೆನ್ಷನ್ ಜಾಯಿಂಟ್ ಸಮಸ್ಯೆ ಸರಿಯಾಗಲಿದೆ ಎಂದು ಹೇಳಲಾಗಿದೆ.
ಪ್ರತಾಪ್ ಸಿಂಹ ಟ್ವೀಟ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬೆನ್ನಲ್ಲೇ ಹಾಗೂ ರಸ್ತೆ ಕಿತ್ತುಹೋಗಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಮಾರ್ಚ್ 15, 2023 ಬುಧವಾರ ಟ್ವೀಟ್ ಮಾಡಿದ್ದಾರೆ. ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, ಎಕ್ಸ್‌ಪ್ಯಾನ್ಷನ್ ಜಾಯಿಂಟ್ ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!