Asianet Suvarna News Asianet Suvarna News

ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಜ್ಜೆ ಹಾಕಿದ ನಮೋ

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಪ್ರಧಾನಿ ಮೋದಿ ಒಂಟಿಯಾಗಿ ಹೆಜ್ಜೆ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಬಿಟ್ಟು ಏಕಾಂಗಿಯಾಗಿಯೇ ಪ್ರಧಾನಿ ಮೋದಿ ಹೆಜ್ಜೆ ಹಾಕಿದ್ದು ಗಮನ ಸೆಳೆದಿದೆ.

modi in karnataka pm inaugurated bengaluru mysuru express way at mandya hanakere bridge ash
Author
First Published Mar 12, 2023, 1:03 PM IST

ಮಂಡ್ಯ (ಮಾರ್ಚ್‌ 12, 2023): ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಮಂಡ್ಯದಲ್ಲಿ ದಶಪಥ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಿದ್ರು. 1.8 ಕಿ.ಮೀ. ದೂರದ ರೋಡ್‌ಶೋ ಬಳಿಕ ಮಂಡ್ಯ ಬಳಿಯ ಹನಕೆರೆ ಹೆದ್ದಾರಿಯ ಬ್ರಿಡ್ಜ್‌ಗೆ ಆಗಮಿಸಿದ ಪ್ರಧಾನಿ ಮೋದಿ ಕಾರಿನಿಂದ ಕೆಳಗಿಳಿದು ಅಭಿಮಾನಿಗಳತ್ತ ಕೈ ಬೀಸಿದ್ದರು ಹಾಗೂ ಜಾನಪದ ಕಲಾ ತಂಡಗಳತ್ತ ತೆರಳಿದ್ದರು.

ನಂತರ, ನೂತನ ದಶಪಥ ಹೆದ್ದಾರಿ ಪ್ರವೇಶಿಸಿದ ಪ್ರಧಾನಿ ಹನಕೆರೆ ಸೇತುವೆ ಬಳಿ ಕಾರಿನಿಂದ ಕೆಳಗಿಳಿದು ಅಭಿಮಾನಿಗಳತ್ತ ಕೈ ಬೀಸಿದ್ದರು ಹಾಗೂ ಜಾನಪದ ಕಲಾ ತಂಡಗಳತ್ತ ತೆರಳಿದ್ದರು. ಈ ಮೂಲಕ ಬೆಂಗಳೂರು - ಮೈಸೂರು ಹೆದ್ದಾರಿಗೆ ಅಧಿಕೃತ ಚಾಲನೆಯನ್ನೂ ಕೊಟ್ರು. ಈ ವೇಳೆ ರೆಡ್‌ ಕಾರ್ಪೆಟ್‌ ಹಾಕಿ ಪ್ರಧಾನಿ ಮೋದಿಗೆ ಸ್ವಾಗತ ನೀಡಲಾಗಿದ್ದು, ಹಾಗೂ  ಜಾನಪದ ಕಲಾತಂಡಗಳು ಸಹ ಮೋದಿಗೆ ಸ್ವಾಗತ ಕೋರಿದೆ. 

ಇದನ್ನು ಓದಿ: PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!

ಈ ಮಧ್ಯೆ, ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಪ್ರಧಾನಿ ಮೋದಿ ಒಂಟಿಯಾಗಿ ಹೆಜ್ಜೆ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಬಿಟ್ಟು ಏಕಾಂಗಿಯಾಗಿಯೇ ಪ್ರಧಾನಿ ಮೋದಿ ಹೆಜ್ಜೆ ಹಾಕಿದ್ದು ಗಮನ ಸೆಳೆದಿದೆ.

ಮಂಡ್ಯದ ಜಾನಪದ ಕಲಾ ತಂಡದೆದರು ಮೋದಿ ಸುಮಾರು 50 ಮೀಟರ್‌ಗಳಷ್ಟು ದೂರ ಹೆಜ್ಜೆ‌ ಹಾಕಿದ್ದು, ನಂತರ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯ ಸಮಾವೇಶ ಸ್ಥಳಕ್ಕೆ ಮೋದಿ ತೆರಳಿದ್ದಾರೆ. ಸಮಾವೇಶದ ವೇದಿಕೆ ಏರುವ ಮುನ್ನ ಗೆಜ್ಜಲಗೆರೆ ಬಳಿ ಕಾಮಗಾರಿ ಗ್ಯಾಲರಿಯನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಹ ಹಾಜರಿದ್ದರು. 

ಇದನ್ನೂ ಓದಿ: PM Modi In Karnataka: 44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ!

ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಂಡ್ಯ ನಗರದಲ್ಲಿ ಅದ್ಧೂರಿ ರೋಡ್‌ ಶೋ ನಡೆಸಿದ್ರು. ಮಂಡ್ಯದ ಐ.ಬಿ. ಸರ್ಕಲ್‌ನಿಂದ ನಂದಾ ವೃತ್ತದವರೆಗೆ ಈ ರೋಡ್‌ ಶೋ ನಡೆದಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ಸೇರಿತ್ತು. ಪ್ರಧಾನಿ ಮೋದಿ ಕಾರಿನ ಹೊರಗೆ ನಿಂತುಕೊಂಡು ಜನರತ್ತ ಕೈಬೀಸಿದ್ದು, ಜನರು ಮೋದಿ ಮೋದಿ ಘೋಷಣೆ ಮಾಡಿದ್ದರು. ಜತೆಗೆ ಜೈ ಶ್ರೀರಾಮ್‌ ಹಾಗೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನೂ ಮೊಳಗಿಸಿದ್ದರು. ಮೋದಿಯತ್ತ ಜನರು ಹೂಗಳನ್ನು ಎರಚುತ್ತಿದ್ದು, ಪ್ರಧಾನಿಯ ತಲೆ ಮೇಲೆ ಹಾಗೂ ಕಾರಿನ ತುಂಬಾ ಹೂ ಮಳೆ ಬೀಳುತ್ತಿತ್ತು. 

ದಳಪತಿಗಳ ಭದ್ರಕೋಟೆ ಎಂದೇ ಹೆಸರಾದ ಜೆಡಿಎಸ್‌ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಮೋದಿ ಭೇಟಿ ಕೊಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಕೆ.ಆರ್‌. ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮೂಲಕ ಈ ಹೆಜ್ಜೆ ಇಟ್ಟಿದೆ. ಜತೆಗೆ, ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದು, ಈ ಹಿನ್ನೆಲೆ ಬಿಜೆಪಿಗೆ ಮತ್ತಷ್ಟು ಬಲ ಸಿಗುವ ವಿಶ್ವಾಸದಲ್ಲಿದೆ ಬಿಜೆಪಿ. ಇದಕ್ಕೆ ತಕ್ಕಂತೆ ಮೋದಿ ರೋಡ್‌ಶೋದಲ್ಲಿ ಜನಸಾಗರವೂ ಸೇರಿದ್ದು, ಹೆಚ್ಚಿನ ಜನರು ಮೋದಿ ಪರ ಘೋಷಣೆ ಮಾಡುತ್ತಿದ್ದಾರೆ.  
ಇದನ್ನೂ ಓದಿ: PM Modi In Karnataka: ಸುಮಲತಾರನ್ನು ಸ್ವಾಗತಿಸಿದ ಪ್ರತಾಪ್‌ ಸಿಂಹ, ಪೊಲೀಸರ ಜೊತೆ ಕಾರ್ಯಕರ್ತರ ಕಿರಿಕ್‌!

Follow Us:
Download App:
  • android
  • ios