Bengaluru-Mysuru Expressway: ವಿರೋಧದ ನಡುವೆಯೂ ಇಂದಿನಿಂದ ಬೆಂ-ಮೈ ಹೆದ್ದಾರಿ ಟೋಲ್‌ ಆರಂಭ!

ತೀವ್ರ ವಿರೋಧದ ನಡುವೆಯೂ ಬೆಂಗ​ಳೂರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಾ.14ರ ಮಂಗ​ಳ​ವಾರ ಬೆಳಗ್ಗೆ 8 ಗಂಟೆಯಿಂದ ಟೋಲ್‌ ವಸೂಲಿ ಆರಂಭವಾಗಲಿದೆ.

bengaluru mysuru highway toll starting from  today at bengaluru rav

ರಾಮನಗರ (ಮಾ.14) : ತೀವ್ರ ವಿರೋಧದ ನಡುವೆಯೂ ಬೆಂಗ​ಳೂರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಾ.14ರ ಮಂಗ​ಳ​ವಾರ ಬೆಳಗ್ಗೆ 8 ಗಂಟೆಯಿಂದ ಟೋಲ್‌ ವಸೂಲಿ ಆರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಭಾನುವಾರ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ್ದರು. ಈ ಹಿಂದೆ ಮಾಚ್‌ರ್‍ 1ರಿಂದಲೇ ಟೋಲ… ಸಂಗ್ರಹಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highways Authority of India) ಮುಂದಾಗಿತ್ತು. ಅದಕ್ಕೆ ಸಾಕಷ್ಟುವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹವನ್ನು ಮಾಚ್‌ರ್‍ 14ಕ್ಕೆ ಮುಂದೂಡಲಾಗಿತ್ತು. ಈ ಮಧ್ಯೆ, ಸೋಮವಾರ ಈ ಬಗ್ಗೆ ಆದೇಶ ಹೊರಡಿಸಿರುವ ಪ್ರಾಧಿಕಾರ, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಟೋಲ್‌ ಸಂಗ್ರಹ ಆರಂಭವಾಗಲಿರುವುದಾಗಿ ತಿಳಿಸಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಟೋಲ್‌ಗೆ ಪ್ರಕಾಶ್‌ ರಾಜ್‌ ವಿರೋಧ: ರಸ್ತೆ ಹಾಕ್ಸಿದ್‌ ನಮ್‌ ದುಡ್ಡು- ನಾವೇ ಟೋಲ್‌ ಕಟ್ಟಬೇಕು

ಬೆಂಗಳೂರಿನಿಂದ-ನಿಡಘಟ್ಟದವರೆಗೆ ಸುಮಾರು 56 ಕಿ.ಮೀ. ರಸ್ತೆಗೆ ನಾಳೆಯಿಂದ ಟೋಲ… ಸಂಗ್ರಹ ಆರಂಭವಾಗಲಿದ್ದು, ಟೋಲ… ದರ ಹೀಗಿದೆ.

ವಾಹನ ಮಾದರಿ ಏಕಮುಖ ಶುಲ್ಕ ದ್ವಿಮುಖ ಸಂಚಾರ ಸ್ಥಳೀಯ ವಾಹನಗಳಿಗೆ ತಿಂಗಳ ಪಾಸ್‌

  • ಕಾರು/ಜೀಪ್‌/ವ್ಯಾನ್‌ 135 205 70 4525
  • ಲಘು ವಾಣಿಜ್ಯ ವಾಹನ/ಮಿನಿಬಸ್‌ 220 330 110 7315
  • ಬಸ್‌/ಟ್ರಕ್‌ 460 690 230 15325
  • ಮೂರು ಅಕ್ಸೆಲ್‌ ವಾಹನ 500 750 250 16715
  • ಭಾರಿ ನಿರ್ಮಾಣ ವಾಹನ 720 1080 360 24030
  • ಅತಿ ಗಾತ್ರದ ವಾಹನ 880 1315 440 29255

 ಕಾರು, ಜೀಪು, ವ್ಯಾನುಗಳಿಗೆ

  • ಏಕಮುಖ ಸಂಚಾರಕ್ಕೆ 135ರು.
  •  ಅದೇ ದಿನ ಮರು ಸಂಚಾರಕ್ಕೆ 205ರು.
  •  ಸ್ಥಳೀಯ ವಾಹನಗಳಿಗೆ 70ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರು.

ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌.

  • ಏಕಮುಖ ಸಂಚಾರಕ್ಕೆ 220 ರು.
  •  ಅದೇ ದಿನ ಮರು ಸಂಚಾರಕ್ಕೆ 320 ರು.

ಸ್ಥಳೀಯ ವಾಹನಗಳಿಗೆ 110 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7,315 ರು.

  • * ಬಸ್‌ ಅಥವಾ ಟ್ರಕ್‌ (ಎರಡು ಆಕ್ಸೆಲ…)
  • - ಏಕಮುಖ ಸಂಚಾರಕ್ಕೆ 460 ರು.
  • ಅದೇ ದಿನ ಮರು ಸಂಚಾರಕ್ಕೆ 690ರು. ಸ್ಥಳೀಯ ವಾಹನಗಳಿಗೆ 230 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರು.

ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್‌)

  • ಏಕಮುಖ ಸಂಚಾರಕ್ಕೆ 500 ರು.
  • ಅದೇ ದಿನ ಮರು ಸಂಚಾರಕ್ಕೆ 750 ರು. ಸ್ಥಳೀಯ ವಾಹನಗಳಿಗೆ 250 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715ರು.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ,ಬಹು ಆಕ್ಸೆಲ… ವಾಹನ (6ರಿಂದ 8 ಆಕ್ಸೆಲ…)

- ಏಕಮುಖ ಸಂಚಾರಕ್ಕೆ 720 ರು.

- ಅದೇ ದಿನ ಮರು ಸಂಚಾರಕ್ಕೆ 1,080 ರು. ಸ್ಥಳೀಯ ವಾಹನಗಳಿಗೆ 360 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರು.

* ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ…)

- ಏಕಮುಖ ಸಂಚಾರಕ್ಕೆ 880 ರು.

- ಅದೇ ದಿನ ಮರು ಸಂಚಾರಕ್ಕೆ 1,315ರು. ಸ್ಥಳೀಯ ವಾಹನಗಳಿಗೆ 440ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರು.

ಕಾಂಗ್ರೆಸ್‌ ಪ್ರತಿಭಟನೆ:

ಈ ಮಧ್ಯೆ, ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. ಕಾಮಗಾರಿ ಪೂರ್ಣಗೊಳಿಸದೆ ಟೋಲ್‌ ಸಂಗ್ರಹ ಮಾಡಿದರೆ ಪ್ರತಿಭಟನೆ ಮಾಡುವುದಾಗಿ ಬಿಡದಿ ಬ್ಲಾಕ್‌ ಕಾಂಗ್ರೆಸ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios