ದರ್ಶನ್‌ರದ್ದು ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ. ಸ್ವಲ್ಪ ಸಿಡುಕು ಮನೋಭಾವ ಹೊಂದಿದ್ದಾರೆ. ಸಹಜವಾಗಿಯೇ ರಫ್ ಅಂಡ್ ಟಫ್ ಆಗಿ ವರ್ತಿಸುತ್ತಿದ್ದರು. ಆದರೆ ಕೊಲೆಗಡುಕ ಅಲ್ಲ: ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ 

ಬೆಂಗಳೂರು(ಜೂ.22): 'ನಟ ದರ್ಶನ್ ಅವರದ್ದು ಸಿಡುಕು ಹಾಗೂ ಒರಟು ಸ್ವಭಾವ ನಿಜ. ಆದರೆ ಆತ ಕೊಲೆಗಡುಕ ಅಲ್ಲ' ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ದರ್ಶನ್‌ರದ್ದು ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ. ಸ್ವಲ್ಪ ಸಿಡುಕು ಮನೋಭಾವ ಹೊಂದಿದ್ದಾರೆ. ಸಹಜವಾ ಗಿಯೇ ರಫ್ ಅಂಡ್ ಟಫ್ ಆಗಿ ವರ್ತಿಸುತ್ತಿದ್ದರು. ಆದರೆ ಕೊಲೆಗಡುಕ ಅಲ್ಲ ಎಂದು ಹೇಳಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ದರ್ಶನ್‌ ಪರಪ್ಪನ ಅಗ್ರಹಾರ ಜೈಲಿಗೆ?

ಹತ್ಯೆ ಖಂಡನೀಯ. ಆದರೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು ಎಂಬುದು ತನಿಖೆಯಿಂದ ಅಷ್ಟೇ ಬಹಿರಂಗವಾಗಬೇಕು. ನನಗೂ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ನಿತ್ಯ ಮಾಧ್ಯಮಗಳಲ್ಲಿ ತೋರಿಸುವಷ್ಟೇ ನನಗೂ ಗೊತ್ತಿದೆ. ದರ್ಶನ್ ಮಾಡಿದ್ದಾ ರೆಯೇ ಅಥವಾ ಜೊತೆಗೆ ಇರುವವರು ಹತ್ಯೆ ಮಾಡಿ ಅದು ಇವರಿಗೂ ಸುತ್ತಿಕೊಂ ಡಿತೇ ಎಂಬುದು ಇನ್ನಷ್ಟೇ ತಿಳಿಯಬೇಕು. ನನಗೆ ಗೊತ್ತಿರುವಂತೆ ಕೊಲೆ ಮಾಡುವ ವ್ಯಕ್ತಿತ್ವ ಅವರದ್ದಲ್ಲ. ನಿಮ್ಮ (ಮಾಧ್ಯಮಗಳ) ಮೇಲೂ ಹಲವು ಬಾರಿ ರೇಗಾಡಿದ್ದಾರೆ. ಅಷ್ಟೇ ಹೊರತು ಕೊಲೆ ಮಾಡುವಂತಹ ಕಟುಕ ಸಮರ್ಥಿಸಿಕೊಂಡರು.