ಬಕ್ರೀದ್ ಹಬ್ಬದಂದು ಗೋಹತ್ಯೆ ತಡೆದಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಎಫ್‌ಐಆರ್ ದಾಖಲು!

ಬಕ್ರಿದ್ ಹಬ್ಬದ ದಿನ ಗೋ ಹತ್ಯೆ ತಡೆಯಲು ಹೋಗಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೇಹರಾಜ್ ಇನ್ನಾಮುಲ್ಲಾಖಾನ್ ರಿಂದ ಶಾಸಕ ಸಲಗರ ಸೇರಿದಂತೆ ಒಟ್ಟು 9 ಜನರ ವಿರುದ್ಧ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 

Accused of obstructing qurbani in Bakrid festival FIR against Basavakalyan MLA rav

ಬೀದರ್ (ಜು.6) : ಬಕ್ರಿದ್ ಹಬ್ಬದ ದಿನ ಗೋ ಹತ್ಯೆ ತಡೆಯಲು ಹೋಗಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೇಹರಾಜ್ ಇನ್ನಾಮುಲ್ಲಾಖಾನ್ ರಿಂದ ಶಾಸಕ ಸಲಗರ ಸೇರಿದಂತೆ ಒಟ್ಟು 9 ಜನರ ವಿರುದ್ಧ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 

ಬಸವಕಲ್ಯಾಣ ನಗರ(Basavakalyana)ದ ಹಿರೇಮಠ ಕಾಲೋನಿ(Hiremath colony)ಯಲ್ಲಿ ಬಕ್ರೀದ್ ಹಬ್ಬದ ದಿನದಂದು ಗೋವಧೆ ಮಾಡಿ ಹಬ್ಬಕ್ಕೆ ಕುರ್ಬಾನಿ(qurbani) ನೀಡುತ್ತಿದ್ದ ಸಂದರ್ಭದಲ್ಲಿ ಶಾಸಕ ಮನೆ ಮೇಲೆ ದಾಳಿ ಮಾಡಿ ಗೋಹತ್ಯೆ ತಡೆದಿದ್ದರು. 15-20 ಜನರ ಜೊತೆ ಆಗಮಿಸಿ ಮನೆಗೆ ನುಗ್ಗಿ ಶರಣು ಸಲಗರರಿಂದ(Sharanu salagar basavakalyana MLA) ಗಲಾಟೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

Video viral: ರೈತನೊಂದಿಗೆ ಕೈಜೋಡಿಸಿ ಒಂದು ಎಕರೆ ಬಿತ್ತನೆ ಮಾಡಿದ ಶಾಸಕ ಶರಣು ಸಲಗರ!

ನಿಮಗೆ ಮಾನಮಾರ್ಯಾದೆ ಇದೀಯಾ ಕುರ್ಬಾನಿ ಕೊಡುವುದಕ್ಕೆ ಎಂದು ಏರುದನಿಯಲ್ಲಿ ಮಾತನಾಡಿದ್ದಲ್ಲದೆ ಬಸವಕಲ್ಯಾಣದಲ್ಲಿ ಮುಸ್ಲಿಂರದು ಜಾಸ್ತಿ ಆಗಿದೆ ಇವರಿಗೆ ಪಾಠ ಕಲಿಸುತ್ತೇವೆಂದು ಜೋರಾಗಿ ಕಿರುಚಾಡುತ್ತಾ ಮನೆಯಲ್ಲಿದ್ದ ಮಹಿಳೆಯರು, ಮನೆ ಸದಸ್ಯರ ವಿರುದ್ಧ ದ್ವೇಷದ ಮಾತುಗಳು ಆಡಿದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಬಸವಕಲ್ಯಾಣ ನಗರ ಠಾಣೆಯಲ್ಲಿ ಶಾಸಕ ಸಲಗರ ವಿರುದ್ಧ ಪ್ರಕರಣ ದಾಖಲು

₹60 ಸಾವಿರ ಮೌಲ್ಯದ ಎತ್ತು, ಆಕಳು ಕದ್ದಿದ್ದ ಮೂವರ ಬಂಧನ

ಹುಮನಾಬಾದ:  ಜೂ.26ರಂದು ಧುಮ್ಮನಸೂರ ಗ್ರಾಮದ ಹೊಲದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎತ್ತು ಹಾಗೂ ಆಕಳನ್ನು ಕಳವು ಮಾಡಿದ್ದ 3 ಆರೋಪಿಗಳನ್ನು ಹುಮನಾಬಾದ ಪೊಲೀಸ್‌ ಠಾಣೆ ಸಿಬ್ಬಂದಿ ಬಂಧಿಸಿ, ಕಳುವಾಗಿದ್ದ ಎತ್ತು, ಆಕಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

ಹುಮನಾಬಾದ ತಾಲೂಕಿನ ಧುಮ್ಮನಸೂರ ಗ್ರಾಮದ ನಿವಾಸಿ ಜಗನ್ನಾಥ ತುಕಾರಾಮ ಮೇತ್ರೆ ಅವರ ಹೊಲದ ದನಗಳ ಕೊಟ್ಟಿಗೆಯಲ್ಲಿದ್ದ 40 ಸಾವಿರ ಮೌಲ್ಯದ ಎತ್ತು ಹಾಗೂ 20 ಸಾವಿರ ಮೌಲ್ಯದ ಆಕಳು ಕಳ್ಳತನ ಮಾಡಲಾಗಿದೆ ಎಂದು ಹುಮನಾಬಾದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. 

ಬಕ್ರೀದ್‌ ಕುರ್ಬಾನಿ: ಲಕ್ಷಕ್ಕೆ ಬಿಕರಿಯಾದ ಟಗರು, ಹೋತಗಳು ಇಲ್ಲಿವೆ ನೋಡಿ..

ದೂರಿನ ಹಿನ್ನಲೆ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ, ಎಎಸ್‌ಪಿ ಮಹೇಶ ಮೇಘಣ್ಣನವರ್‌, ಹುಮನಾಬಾದ ಹಿರಿಯ ಸಹಾಯಕ ಪೊಲೀಸ್‌ ಅಧೀಕ್ಷಕ ಶಿವಾಂಶು ರಜಪುತ್‌, ಹುಮನಾಬಾದ ಸಿಪಿಐ ಶರಣಬಸಪ್ಪಾ ಕೋಡ್ಲಾ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಜ್ಜರ್ಗಿ, ಪಿಎಸ್‌ಐ ಮಂಜನಗೌಡ ಪಾಟೀಲ್‌ ಸಿಬ್ಬಂದಿಗಳಾದ ಭಗವಾನ ಬಿರಾದಾರ, ಬಾಬುರಾಯ ಕೋರೆ, ಮಹೇಶಕುಮಾರ, ಶೀಲಸಾಗರ, ಬಸವಂತರೆಡ್ಡಿ, ಬಾಲಾಜಿ ಪಿಚರಾಟೆ, ಸೂರ್ಯಕಾಂತ ದಾಂಡೆಕರ್‌ ತಂಡವು ಆರೋಪಿ ಪತ್ತೆ ಕಾರ್ಯ ಚುರುಕುಗೊಳಿಸಿ, 4 ದಿವಸಗಳಲ್ಲಿಯೇ ಪ್ರಕರಣ ಭೇಧಿಸಿ, 3 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios