ಬಕ್ರೀದ್ ಕುರ್ಬಾನಿ: ಲಕ್ಷಕ್ಕೆ ಬಿಕರಿಯಾದ ಟಗರು, ಹೋತಗಳು ಇಲ್ಲಿವೆ ನೋಡಿ..
ಬಕ್ರೀದ್ ಹಬ್ಬದ ಸಂಭ್ರಮ ಆರಂಭವಾಗಿದ್ದು, ಕುರ್ಬಾನಿಗಾಗಿ ಟಗರು, ಮೇಕೆಗಳಿಗೆ ಭಾರಿ ಬೇಡಿಕೆಯಿತ್ತು. ಈ ವೇಳೆ 1 ಲಕ್ಷಕ್ಕೂ ಅಧಿಕ ಬೆಲೆ ಟಗರು, ಹೋತಗಳು ಮಾರಾಟವಾಗಿದೆ.
ಬೆಂಗಳೂರು (ಜೂ.28): ದೇಶಾದ್ಯಂತಬಕ್ರೀದ್ ಹಬ್ಬದ ಸಂಭ್ರಮ ಮನೆಮಾಡಿದೆ. ಸರ್ವಜನಾಂಗ ಶಾಂತಿಯ ತೋಟವಾದ ಕರ್ನಾಟಕದಲ್ಲಿಯೂ ಮುಸ್ಲಿಂ ಬಾಂಧವರು ಹಬ್ಬಕ್ಕಾಗಿ ಕುರಿ, ಆಡುಗಳನ್ನು ಖರೀದಿ ಮಾಡುವುದಕ್ಕೆ ಮುಂದಾಗಿದ್ದು, ಕಡಗ ತೊಟ್ಟ ಕುರಿ, ಕೋಳಿ ಹಾಗೂ ಮೇಕೆಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಆದ್ದರಿಂದ ಕೆಲವು ಕುರಿ ಮತ್ತು ಮೇಕೆಗಳು ಒಂದು ಲಕ್ಷಕ್ಕೂ ಅಧಿಕ ಬೆಲೆಗೆ ಬಿಕರಿಯಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ ನೋಡಿ...\
ತ್ಯಾಗ, ಬಲಿದಾನದ ಸಂಕೇತವಾಗಿ ಕುರಿಗಳನ್ನು ಕುರ್ಬಾನಿ ಮಾಡಿ ಅದರ ಮಾಂಸವನ್ನು ಬಡವರಿಗೆ ಹಂಚುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ಕುರಿಗಳಿಗೆ ಭರ್ಜರಿ ಬೇಡಿಕೆ ಎದುರಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಗ್ರಾಹಕರು ಕುರಿಗಳ ಮುಂದೆ ನಿಂತಿದ್ದಾರೆ. ರಾಜ್ಯಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ ಕಳೆದೊಂದು ವಾರದಿಂದಲೇ ಆರಂಭವಾಗಿದೆ, ಬಹುತೇಕವಾಗಿ ಗ್ರಾಮೀಣ, ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿ ಹೆಚ್ಚಾಗಿದೆ. ಹಗಲು, ರಾತ್ರಿಯೆನ್ನದೇ ಕುರಿ, ಆಡು, ಹೋತ, ಟಗರುಗಳನ್ನು ಖರೀದಿ ಮಾಡಲು ಮುಸ್ಲಿಂ ಸಮುದಾಯದವರು ಆಗಮಿಸುತ್ತಿದ್ದು, ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇನ್ನು ಕುರಿ, ಮೇಕೆ ಸಾಕಣೆ ಮಾಡಿದವರಿಗೂ ಈಗ ಭರ್ಜರಿ ಲಾಭವೂ ಆಗುತ್ತಿದೆ.
ಬಕ್ರೀದ್ ಪ್ರಾರ್ಥನೆ: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಾರಕ್ಕೆ ಮುನ್ನವೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕುರಿ, ಮೇಕೆ, ಹೋತ, ಟಗರುಗಳ ತರಹೇವಾರಿ ತಳಿಗಳು ಆಗಮಿಸಿದ್ದು, ವ್ಯಾಪಾರ ಗರಿಗೆದರಿದೆ. ಸುಮಾರು 7-8 ಕೆ.ಜಿ. ತೂಕದ ಸಾಮಾನ್ಯ ಕುರಿಯಿಂದ 70-80 ಕೆ.ಜಿ. ತೂಕದವರೆಗಿನ ಕುರಿಗಳು ಇಲ್ಲಿ ಮಾರಾಟಕ್ಕಿವೆ. ಕನಿಷ್ಠ ಸುಮಾರು 8 ಸಾವಿರ ರೂ.ನಿಂದ ಕುರಿಗಳು ಇಲ್ಲಿ ಲಭ್ಯವಿದೆ. ಬರೋಬ್ಬರಿ 1.20 ಲಕ್ಷ ರೂ. ಮೊತ್ತದ ಕುರಿಯೂ ಇಲ್ಲಿ ಬಿಕರಿಯಾಗಿದೆ.
ಬರ್‌ಬರಿ ತಳಿ ಮೇಕೆಗೆ 1 ಲಕ್ಷ ಬೆಲೆ: ಉತ್ತರ ಪ್ರದೇಶದ 'ಬರ್‌ಬರಿ' ತಳಿಯ ಮೇಕೆ ಗ್ರಾಹಕರ ಗಮನಸೆಳೆಯುತ್ತಿದೆ. ಉದ್ದುದ್ದ ಕಿವಿಯ, ಎತ್ತರ ದೇಹದ, ಕಟ್ಟುಮಸ್ತಾದ ಮೈಕಟ್ಟುಳ್ಳ 70 ಕೆ.ಜಿ. ಹೆಚ್ಚು ತೂಕದ ಮೇಕೆಗೆ 1.20 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ಇದರದ್ದೇ ಹೋಲಿಕೆಯ ಜಮುನಾಪುರಿ ತಳಿಗೂ ಅಂದಾಜು ಇದೇ ಬೆಲೆ ಇದೆ. ಕೆಲ ವ್ಯಾಪಾರಿಗಳು ಸಂಕ್ರಾಂತಿಯಲ್ಲಿ ಹಬ್ಬಕ್ಕೆ ಹಸುಗಳ ಸಿಂಗಾರ ಮಾಡಿದಂತೆ ಕುರಿ ಮೇಕೆಗಳಿಗೂ ಬಣ್ಣದ ಟೇಪುಗಳನ್ನು ಕಟ್ಟಿ ಅಲಂಕಾರ ಮಾಡಿದ್ದರು. ಸಿಂಗಾರಗೊಂಡಿದ್ದ ಕುರಿ - ಮೇಕೆಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.
Bakrid: ಸರ್ಕಾರದ ಪ್ರಾಣಿಬಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಮುಸ್ಲಿಂ ಸಮುದಾಯಕ್ಕೆ ಜಮಿಯತ್ ಮನವಿ
ವಿಜಯಪುರದಲ್ಲಿ ಲಕ್ಷಕ್ಕೆ ಬಿಕರಿಯಾದ ಹೋತ: ಬಕ್ರೀದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಮಾಂಸಕ್ಕೆ ಭಾರೀ ಡಿಮ್ಯಾಂಡ್ ಬರುತ್ತಿದೆ. ಸಹಜವಾಗಿ ಕುರಿ, ಕೋಳಿಗೆ ಭಾರೀ ಬೆಲೆ ಬರುತ್ತಿದೆ. ಬೆಳ್ಳಿ (Silver) ಕಡಗದ ಕುರಿಗಳಿಗೆ ಲಕ್ಷ ರೂ. ಬೆಲೆಯಾಗಿದೆ. ಮಹಾರಾಷ್ಟ್ರದಿಂದ ಕರೆ ತರಲಾದ ಹೋತವೊಂದಕ್ಕೆ ವಿಜಯಪುರದ ಮಾರುಕಟ್ಟೆಯಲ್ಲಿ 1 ಲಕ್ಷ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ. 25 ರಿಂದ 30 ಕೆಜಿ ತೂಕ ಹೊಂದಿರುವ ಈ ಹೋತದ ಕಾಲಿಗೆ ಬೆಳ್ಳಿ ಕಡಗವನ್ನ ಹಾಕಲಾಗಿದೆ. ಅಂದಾಜು 50 ಗ್ರಾಮಿನ ಬೆಳ್ಳಿ ಕಡಗ ಇದಾಗಿದ್ದು, ಹೋತ ಖರೀದಿಸುವವರಿಗೆ ಆ ಬೆಳ್ಳಿ ಕಡಗವೂ ಸಿಗುತ್ತದೆ. ಇನ್ನೇನು ಮಾರುಕಟ್ಟೆಗೆ ಬಂದ ಈ ಹೋತವನ್ನು ಗ್ರಾಹಕರೊಬ್ಬರು ಕುರ್ಬಾನಿಗಾಗಿ ಖರೀದಿಸಿ, ಕಡಗವನ್ನೂ ಪಡೆದಿದ್ದಾರೆ.