Viral Video: 'ನನ್ನ ಚಪ್ಪಲಿ ಸೈಜ್ 41..' ಪ್ರಖ್ಯಾತ ಹೀರೋಗೆ ಹೇಗೆ ಹೇಳಿದ್ಯಾಕೆ ನಟಿ ಖುಷ್ಭು ಸುಂದಂರ್!
ನಟಿ ಖುಷ್ಬೂ ಸುಂದರ್ IFFI 2024 ರಲ್ಲಿ ಸಿನಿಮಾ ಸೆಟ್‌ಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ತಮಗೆ ಎದುರಾದ ಒಂದು ಭಯಾನಕ ಘಟನೆಯನ್ನು ಬಿಚ್ಚಿಟ್ಟರು, ಹೊಸಬರಾಗಿದ್ದಾಗ ಹೀರೋ ಒಬ್ಬರು ಮಾಡಿದ್ದ ಅಸಭ್ಯ ವರ್ತನೆ ಬಗ್ಗೆ ಹೇಳಿದರು.
ಗೋವಾ (ನ.22):ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರು ಗೋವಾದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) 2024 ರಲ್ಲಿ ಸಿನಿಮಾದಲ್ಲಿ ಮಹಿಳಾ ಸುರಕ್ಷತೆಯ ಮಾಸ್ಟರ್ ಕ್ಲಾಸ್‌ನ ಭಾಗವಾಗಿದ್ದರು. ಗುಲ್ಟ್ ಪೋಸ್ಟ್ ಮಾಡಿದ ಕ್ಲಿಪ್‌ನಲ್ಲಿ ಖಷ್ಭು ಸುಂದರ್ ಅವರು ಸಿನಿಮಾ ಸೆಟ್‌ಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ಸೆಟ್‌ನಲ್ಲಿ ತಮಗೆ ಎದುರಾದ ಒಂದು ಭಯಾನಕ ಘಟನೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಖುಷ್ಬೂ ಅವರೊಂದಿಗೆ ಪ್ಯಾನೆಲ್‌ನಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ, ನಟಿ ಭೂಮಿ ಪಡ್ನೇಕರ್, ನಟಿ ಸುಹಾಸಿನಿ ಮಣಿರತ್ನಂ ಹಾಗೂ ವಾಣಿ ತ್ರಿಪಾಠಿ ಕೂಡ ಭಾಗವಹಿಸಿದ್ದರು.
ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಖುಷ್ಭೂಗೆ ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಅವರು, 'ಮಹಿಳೆಯರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಶೇರ್ ಆಟೋದಲ್ಲಿ ಹೋಗುವಾಗ, ಲೋಕಲ್ ಟ್ರೇನ್ ಕೊನೆಗೆ ವಿಮಾನದಲ್ಲಿ ಹೋಗುವಾಗಲೂ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಇದು ಎಲ್ಲೆಡೆ ಇದೆ. ಬರೀ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ. ಆದರೆ, ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರ ಬಗ್ಗೆ ಮಹಿಳೆಯರು ಕೂಡ ಮುಕ್ತವಾಗಿ ಮಾತನಾಡಬೇಕು. ಎಲ್ಲಿ ಮಾತನಾಡಬೇಕೋ ಅಲ್ಲಿಯೇ ಮಾತನಾಡಿ ಮುಗಿಸಬೇಕು. ನಿಮ್ಮ ಕೆರಿಯರ್ ಹಾಗೂ ಮುಂದಾಗುವ ಸವಾಲುಗಳ ಬಗ್ಗೆ ಆ ಹಂತದಲ್ಲಿ ಯೋಚಿಸಲು ಹೋಗಬಾರದು' ಎಂದಿದ್ದಾರೆ.
ಈ ವೇಳೆ ಆಗಿನ್ನೂ ಸಿನಿಮಾ ರಂಗಕ್ಕೆ ಕಾಲಿಟ್ಟ ಹಂತದಲ್ಲಿ ತಮಗೆ ಸಿನಿಮಾ ಹೀರೋ ಒಬ್ಬರಿಂದಲೇ ಎದುರಾದ ಪ್ರಸಂಗವನ್ನು ಅವರು ನೆನಪಿಸಿಕೊಂಡಿದ್ದಾರೆ. 'ಹೀರೋ ಒಮ್ಮೆ ನನಗೆ ಕೇಳಿದ್ದ. ನನಗೆ 'ಮುಜೇ ಕಹಿ ಸೈಕಲ್ ಗ್ಯಾಪ್ ಮೇ ಚಾನ್ಸ್ ಮಿಲ್ ಜಾಯೇಗಾ ಕ್ಯಾ? (ಯಾರ ಗಮನಕ್ಕೂ ಬರದಂತೆ ನನಗೊಂದು ಚಾನ್ಸ್ ಕೊಡ್ತೀಯಾ) ಎಂದು ಕೇಳಿದ್ದ. ತಕ್ಷಣವೇ ನಾನು ಕಾಲಲ್ಲಿದ್ದ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು, ನಾನು 41ನೇ ನಂಬರ್ ಸೈಜ್ ಹಾಕುತ್ತೇನೆ ಎಂದಿದ್ದೆ. ನಿನಗೆ ನಾನು ಇಲ್ಲೇ ಇದರಲ್ಲಿ ಕೆನ್ನೆಗೆ ಬಾರಿಸಬೇಕು ಅಂತೀಯಾ ಅಥವಾ ಇಡೀ ಯುನಿಟ್‌ನ ಎದುರು ಬಾರಿಸಬೇಕು ಅಂದುಕೊಳ್ತೀಯಾ ಎಂದು ಪ್ರಶ್ನೆ ಮಾಡಿದ್ದೆ. ಆ ಹಂತದಲ್ಲಿ ನಾನು ಹೊಸಬಳು ಎಂದು ಒಂದು ಕ್ಷಣವೂ ಯೋಚನೆ ಮಾಡಿರಲಿಲ್ಲ. ನನ್ನ ಕೆರಿಯರ್ ಏನಾಗಬಹುದು ಎಂದೂ ಚಿಂತಿಸಿರಲಿಲ್ಲ. ನನ್ನ ಮರ್ಯಾದೆಗಿಂತ ದೊಡ್ಡದು ಯಾವುದೂ ಅಲ್ಲ ಎಂದು ಆ ಕ್ಷಣ ಯೋಚಿಸಿದ್ದೆ. ಮೊದಲಿಗೆ ನೀವು ನಿಮ್ಮನ್ನು ಗೌರವಿಸಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರವೇ ಬೇರೆಯವರು ನಿಮಗೆ ಗೌರವ ನೀಡುತ್ತಾರೆ' ಎಂದು ಖುಷ್ಭೂ ಹೇಳಿದ್ದಾರೆ.
ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್ ಮಾಡ್ತಿದ್ದೀರಾ' ಅನ್ನೋದಾ?
ಖುಷ್ಬು ಅವರು 1980 ರಲ್ಲಿ ಬಾಲ ಕಲಾವಿದೆಯಾಗಿ ಮತ್ತು 1985 ರಲ್ಲಿ ನಾಯಕ ನಟಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದಾಗಿನಿಂದ ಹಲವಾರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ತಮ್ಮ ಪತಿ ಸುಂದರ್ ಸಿ ಅವರ ಚಿತ್ರ ಅರಣ್ಮನೈ 4 ನಲ್ಲಿ ಸಹ-ನಿರ್ಮಾಣ ಮಾಡಿದರು ಮತ್ತು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಕೆಜಿಎಫ್-2 ಸ್ಟೋರಿ ಕಾಪಿ ಮಾಡಿದ ಪುಷ್ಪ-2; ಇಷ್ಟೆಲ್ಲಾ ಕಾಕತಾಳೀಯ ಇರೋಕೆ ಹೇಗೆ ಸಾಧ್ಯ?