ಕೇಂದ್ರ ಸರ್ಕಾರಿ ನೌಕರನ ಹನಿಟ್ರ್ಯಾಪ್ ಮಾಡಿದ ತಬಸುಮ್ ಗ್ಯಾಂಗ್: 2.5 ಕೋಟಿ ವಸೂಲಿ!
ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ನೌಕರನೊಬ್ಬ ಜಿಮ್‌ನಲ್ಲಿ ಪರಿಚಯವಾದ ಮಹಿಳೆ ಮತ್ತು ಆಕೆಯ ಸಹಚರರಿಂದ ಹನಿಟ್ರ್ಯಾಪ್‌ಗೆ ಒಳಗಾಗಿ 2.5 ಕೋಟಿ ರೂ. ಕಳೆದುಕೊಂಡಿದ್ದಾರೆ. ಖಾಸಗಿ ವಿಡಿಯೋಗಳನ್ನು ಬಳಸಿ ಬೆದರಿಸಿ ಹಣ ಪಡೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ನ.22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿರುವ ಕೇಂದ್ರ ಸರ್ಕಾರಿ ನೌಕರನನ್ನು ಜಿಮ್‌ನಲ್ಲಿ ಪರಿಚಯ ಮಾಡಿಕೊಂಡ ಮಹಿಳೆ ತಬಸುಮ್ ಮತ್ತು ಸಹಚರರು, ಅಧಿಕಾರಿಯನ್ನು ಹನಿಟ್ರ್ಯಾಪ್ ಮಾಡಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು 2.5 ಕೋಟಿ ರೂ.ಗೆ ಪಡೆದು, ಇದೀಗ ಮತ್ತಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ. ನಾಲ್ವರು ಮೂವರ ಗ್ಯಾಂಗ್ ಜಿಮ್‌ನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯನ್ನು ಹನಿಟ್ರ್ಯಾಪ್ ಮಾಡಿ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮಾಡಿದ್ದರು. ಕೇಂದ್ರ ಸರ್ಕಾರಿ ನೌಕರರನನ್ನು ಹನಿ ಟ್ರಾಪ್ ಮಾಡಿ ಬರೋಬ್ಬರಿ 2.5 ಕೋಟಿ ರೂ.ಗೆ ಪೀಕಿದ್ದರು. ಇದರ ಬೆನ್ನಲ್ಲಿಯೇ ಮತ್ತಷ್ಟು ಹಣವನ್ನು ಕೊಡುವಂತೆ ಡಿಮ್ಯಾಂಡ್ ಮಾಡಿದಾಗ ತನ್ನ ಜೀವಮಾನವಿಡೀ ದುಡಿದು ಸಂಪಾದಿಸಿದ ಹಣವನ್ನು ಇವರು ಕೇಳುತ್ತಿದ್ದಾರೆ ಎಂದು, ಭಯಭೀತರಾದ ಅಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಬಸುಮ್ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು ಆಗಿದ್ದಾರೆ. ಹನಿಟ್ರ್ಯಾಪ್‌ಗೆ ಒಳಗಾಗಿರುವ ಸಂತ್ರಸ್ತ ಕೇಂದ್ರ ಸರ್ಕಾರದ ನೌಕರ ಬೆಂಗಳೂರಿನ ಆರ್.ಟಿ. ನಗರದ ಖಾಸಗಿ ಜಿಮ್‌ವೊಂದಕ್ಕೆ ಹೋಗಿದ್ದರು. ಅಲ್ಲಿ ಜಿಮ್‌ಗೆ ಬರುತ್ತಿದ್ದ ತಬಸುಮ್ ಅವರನ್ನು ಪರಿಚಯ ಮಾಡಿಕೊಂಡು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು 48 ವರ್ಷದ ಈ ಕೇಂದ್ರ ಸರ್ಕಾರದ ನೌಕರ ಕೋಟಿ ಕುಳ ಎಂಬುದನ್ನು ಅರಿತ ತಬಸುಮ್ ಆತನಿಗ ಗಾಳ ಹಾಕಿದ್ದಾರೆ.
ಇದನ್ನೂ ಓದಿ: ಹಾಸನ: ಅತ್ತೆ-ಸೊಸೆ ಜಗಳದಲ್ಲಿ ಅಮಾಯಕ ವ್ಯಕ್ತಿ ಬಲಿ, ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ನೌಕರನನ್ನು ಆರಂಭದಲ್ಲಿ ಜಿಮ್‌ನಲ್ಲಿ ಮಾತನಾಡಿಸುತ್ತಿದ್ದ ತಬಸುಮ್, ನಂತರ ಫೋನ್ ನಂಬರ್ ಪಡೆದು ಚಾಟಿಂಗ್ ಮಾಡಲಾರಂಭಿಸಿದ್ದಾರೆ. ನಂತರ, ಟೀ, ತಿಂಡಿ ಎನ್ನುತ್ತಾ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ತನ್ನ ಪರಿಚಯದ ಬಗ್ಗೆ ಹೇಳಿಕೊಳ್ಳುತ್ತಾ ತಾನೊಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು, ಅದಕ್ಕೆ ಒಂದಷ್ಟು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದೇ ನೆಪವನ್ನಿಟ್ಟುಕೊಂಡು 2021ರಿಂದ ನಿರಂತರವಾಗಿ ಸ್ಬಲ್ಪ ಸ್ವಲ್ಪವೇ ಹಣವನ್ನು ಪಡೆದುಕೊಂಡಿದ್ದಾಳೆ. ಇದಾದ ನಂತರ ಚಿನ್ನದ ಮೊಟ್ಟಿ ಇಡುವ ಕೋಳಿ ಇದು ಎಂದುಕೊಂಡು ಅದರ ಹೊಟ್ಟೆ ಕೊಯ್ಯಲು ಮುಂದಾದ ತಬಸುಮ್ ಮೂವರ ಗ್ಯಾಂಗ್ ಕಟ್ಟಿಕೊಂಡು ಯೋಜನೆ ರೂಪಿಸಿದ್ದಾರೆ.
ತಬಸುಮ್ ಗ್ಯಾಂಗ್‌ನಿಂದ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದು, ಅದರಂತೆ ನೌಕರರನ ಜೊತೆಗೆ ತಬಸುಮ್ ತೀರಾ ಆಪ್ತಳಂತೆ ನಡೆದುಕೊಂಡಿದ್ದಾಳೆ. ಆಗ ನೌಕರನ ಕೆಲವೊಂದು ಖಾಸಗಿ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ. ನಂತರ ಅವರ ಖಾಸಗಿ ಫೊಟೋಗಳನ್ನು ವಾಟ್ಸಾಪ್‌ಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಹಂತ ಹಂತವಾಗಿ ಆರೋಪಿಗಳು ನಾನು ಪೊಲೀಸ್, ನಾನು ವಕೀಲ ನಿಮ್ಮ ಜೀವನವನ್ನೇ ಹಾಳು ಮಾಡುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಿ ಬರೋಬ್ಬರಿ 2.5 ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇದರ ನಂತರವೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸಿಸಿಬಿಗೆ ದೂರು ನೀಡಿದ್ದಾರೆ. ಇವರ ದೂರಿನ ಅನ್ವಯ ಪಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಎಲ್ಲವೂ ಚೆನ್ನಾಗಿತ್ತು, ಆದ್ರೆ ಪಾರ್ಸಲ್‌ನಲ್ಲಿ ಬಂದ ಹೇರ್ ಡ್ರೈಯರ್‌ನಿಂದ ನನ್ನ ಕೈಗಳೇ ಕಟ್ ಆಯ್ತು!