ಕೈಗಳಿಗಲ್ಲ, ಇದು ಕೈಬೆರಳಿಗೆ ಧರಿಸುವ ವಾಚ್; ಕ್ಯಾಸಿಯೋ ರಿಂಗ್ ವಾಚ್ ಡಿಸೆಂಬರ್‌ನಲ್ಲಿ ರಿಲೀಸ್!
ಕ್ಯಾಸಿಯೋ ಕಂಪನಿಯು ಬೆರಳಿಗೆ ಧರಿಸಬಹುದಾದ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಡಿಸೆಂಬರ್‌ನಲ್ಲಿ ಜಪಾನ್‌ನಲ್ಲಿ ಲಭ್ಯವಾಗಲಿದ್ದು, ಸುಮಾರು 10 ಸಾವಿರ ರೂಪಾಯಿ ಬೆಲೆ ಇರಬಹುದು.
ಮೊಬೈಲ್‌ವೊಂದು ಕೈಯಲ್ಲಿದ್ದರೆ ಸಾಕು, ಇಂದು ಎಲ್ಲವೂ ಕಾಲಬುಡಕ್ಕೆ ಬರುತ್ತದೆ. ಮೊಬೈಲ್‌ಗಳು ಬಂದ ಬಳಿಕ ದೊಡ್ಡ ಬೇಡಿಕೆ ಇಳಿದಿದ್ದು ವಾಚ್‌ಗಳಿಗೆ. ಈಗ ವಿಶ್ವದ ಪ್ರಮುಖ ವಾಚ್ ಕಂಪನಿಗಳು ಅದರಲ್ಲೂ ಹೊಸತನ ತರುತ್ತಿದ್ದಾರೆ.
ವಿಶ್ವಪ್ರಸಿದ್ಧ ವಾಚ್ ಕಂಪನಿ ಕ್ಯಾಸಿಯೋ ಈಗ ಕೈಗಳ ಬದಲಾಗಿ ಕೈಬೆರಳಿಗೆ ಧರಿಸುವಂಥ ಸ್ಮಾರ್ಟ್ ವಾಚ್‌ಅನ್ನು ಅನಾವರಣ ಮಾಡಿದೆ. ಮುಂದಿನ ತಿಂಗಳು ಕಂಪನಿಗೆ 50 ವರ್ಷವಾಗುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ. ಇಲ್ಲಿಯವರೆಗೂ ಕೈಯಲ್ಲಿ ವಾಚ್ ಕಟ್ಟಿಕೊಂಡ ಸಮಯ ನೋಡುತ್ತಿದ್ದ ಜನರು ಇನ್ನು ಮುಂದೆ ಕೈಬೆರಳಿನಲ್ಲೇ ಸಮಯ ನೋಡಬಹುದು.
ಈಗಾಗಲೇ ಕ್ಯಾಸಿಯೋ CRW 001 1JR ಸರಣಿಯ ಸ್ಮಾರ್ಟ್ ರಿಂಗ್ ವಾಚ್‌ಅನ್ನು ಅನಾವರಣ ಮಾಡಿದೆ. ನಿಮ್ಮ ಬೆರಳುಗಳು ಎಷ್ಟು ದಪ್ಪ ಇದೆ ಅನ್ನೋದರ ಆದಾರದ ಮೇಲೆ ಈ ವಾಚ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಟೈಮ್, ಡಿಜಿಟಲ್ ಸ್ಕ್ರೀನ್, ಅಲಾರಂ ಸೇರಿದಂತೆ ಹಲವು ಸ್ಪೆಷಾಲಿಟಿ ಹೊಂದಿರುವ ಈ ವಾಚ್‌ನ ಬ್ಯಾಟರಿ 2 ವರ್ಷ ಬಾಳಿಕೆ ಬರುತ್ತದೆ.
ಡಿಸೆಂಬರ್‌ನಲ್ಲಿ ಈ ವಾಚ್ ಜಪಾನ್‌ನಲ್ಲಿ ಲಭ್ಯವಾಗಲಿದೆ. ಅಂದಾಜು 10 ಸಾವಿರ ರೂಪಾಯಿ, 129 ಯುಎಸ್ ಡಾಲರ್ ಬೆಲೆ ಇದಕ್ಕೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ಹಲವು ವೈಶಿಷ್ಟ್ಯಗಳನ್ನು ಅತ್ಯಂತ ಕಾಂಪ್ಯಾಕ್ಟ್ ಆಗಿ ಮಾಡಲಾಗಿದೆ.
ಈ ವಾಚು ಕೇವಲ ಒಂದು ಇಂಚು ಸುತ್ತಳತೆ ಹೊಂದಿದೆ. ಅದರೊಂದಿಗೆ ಆರು ವಿಭಾಗದ ಸ್ಕ್ರೀನ್ ಇದರಲ್ಲಿ ಇರಲಿದ್ದು,ಗಂಟೆ, ನಿಮಿಷ ಮತ್ತು ಸೆಕೆಂಡ್‌ಗಳನ್ನು ಬಿತ್ತರ ಮಾಡಲಿದೆ. ಮೂರು ಬಟನ್‌ಗಳು ಕೂಡ ಈ ವಾಚ್‌ಗೆ ಇರಲಿದೆ.
ಒಂದೇ ಒಂದು ಸಮಸ್ಯೆ ಏನೆಂದರೆ, ಈ ವಾಚ್‌ಗಳು ಸದ್ಯ ಜಪಾನ್ ಹೊರತಾಗಿ ವಿಶ್ವದ ಬೇರೆ ಎಲ್ಲೂ ಲಭ್ಯವಿರೋದಿಲ್ಲ. ಕ್ಯಾಸಿಯೊ CRW-001-1JR ಅನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ ಮತ್ತು ಇದು ವಾಟರ್‌ಪ್ರೂಫ್ ವಾಚ್ ಆಗಿದೆ.