ಜೋಹಾನ್ಸ್‌ಬರ್ಗ್(ಜು.17): ಸೌತ್ ಆಫ್ರಿಕಾ ಮಾಜಿ ಫುಟ್ಬಾಲ್ ಪಟು ಮಾರ್ಕ್ ಬ್ಯಾಚ್ಲರ್‌ಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 49ರ ಹರೆಯದ  ಮಾರ್ಕ್ ಬ್ಯಾಚ್ಲೆರ್ ಸೌತ್ಆಫ್ರಿಕಾದ ಒರ್ಲಾಂಡೋ ಪೈರೇಟ್ಸ್ ಹಾಗೂ ಕೈಝರ್ ಚೀಫ್ ತಂಡದ ಪರ ಆಡಿ ವಿಶ್ವದ ಗಮನಸೆಳೆದಿದ್ದರು.

ಇದನ್ನೂ ಓದಿ: ಅತ್ಯಾಚಾರ ಆರೋಪದ ಬೆನ್ನಲ್ಲೇ ಟೂರ್ನಿಯಿಂದ ಹೊರಬಿದ್ದ ನೇಯ್ಮಾರ್!

ಮಾರ್ಕ್ ತಮ್ಮ ಕಾರಿನಲ್ಲಿ ಮನೆಗೆ ಹಿಂತಿರುಗುವ ವೇಳೆ, ಬೈಕ್‌ನಲ್ಲಿ ಬಂದ 2 ದುಷ್ಕರ್ಮಿಗಳು ಮನೆ ಮುಂಭಾಗದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಿಸಿಟಿ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ಯಾರಾ ಒಲಿಂಪಿಕ್ ಅಥ್ಲೀಟ್, ಬ್ಲೇಡ್ ರನ್ನರ್ ಎಂದೇ ಖ್ಯಾತಿಯಾಗಿದ್ದ ಆಸ್ಕರ್ ಪಿಸ್ಟೋರಿಯಸ್ ಜೊತೆ ಮಾರ್ಕ್ ಬ್ಯಾಚ್ಲೆರ್‌ಗೆ ಮನಸ್ತಾಪವಿತ್ತು. ಇದೇ ಕೊಲೆಗೆ ಕಾರಣವಾಯಿತಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಮೂವರು ಪತ್ನಿಯರಿದ್ದ ಫುಟ್ಬಾಲಿಗನ ಮೃತದೇಹಕ್ಕೆ ಫೈಟ್!

ಗೆಳತಿ ರೆವಾ ಸ್ಟಿನ್‌ಕ್ಯಾಂಪ್ ಕೊಲೆಗೈದ ಪಿಸ್ಟೋರಿಯಸ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ರೆವಾ ವಿಚಾರದಲ್ಲಿ ಮಾರ್ಕ್ ಹಾಗು ಆಸ್ಕರ್ ಪಿಸ್ಟೊರಿಯಸ್ ಮುಸ್ತಾಪವಾಗಿತ್ತು. ಇಷ್ಟೇ ಅಲ್ಲ 2013ರಲ್ಲಿ ಮಾರ್ಕ್ ಕಾಲು ಮುರಿದು ಹಾಕುವುದಾಗಿ ಪಿಸ್ಟೋರಿಯಸ್ ಎಚ್ಚರಿಕೆ ನೀಡಿದ್ದರು.