ಬ್ರೆಝಿಲ್(ಜೂ.06): ಬ್ರೆಝಿಲ್ ಸ್ಟಾರ್ ಫುಟ್ಬಾಲ್ ಪಟು ನೇಯ್ಮಾರ್ ಸಂಕಷ್ಠ ಹೆಚ್ಚಾಗಿದೆ. ಒಂದೆಡೆ ಬ್ರೆಝಿಲ್‌ನಲ್ಲಿ ನೆಲೆಸಿರುವ ಮಹಿಳೆ, ನೇಯ್ಮಾರ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಆರೋಪ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ,  ಇದೀಗ ಕೋಪಾ ಅಮೇರಿಕಾ ಟೂರ್ನಿಯಿಂದ ನೇಯ್ಮಾರ್ ಹೊರಬಿದ್ದಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾಗೆ ಶುಭಹಾರೈಸಿದ ಫುಟ್ಬಾಲ್ ತಂಡ!

ಕೋಪಾ ಅಮೇರಿಕಾ ಟೂರ್ನಿಯಲ್ಲಿನ ಸ್ನೇಹಾರ್ಥ ಪಂದ್ಯದಲ್ಲಿ ಖತಾರ್ ವಿರುದ್ದ ಮಿಂಚಿನ ಪ್ರದರ್ಶನ ನೀಡುತ್ತಿದ್ದ ನೇಯ್ಮಾರ್ ಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಪಾದ ಟ್ವಿಸ್ಟ್ ಆಗಿ ನೇಯ್ಮಾರ್ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಡಗೌಟ್‌ಗೆ ತೆರಳಿದ ನೇಯ್ಮಾರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಸ್ಕಾನ್ ಮೂಲಕ ಪರಿಶೀಲಿಸಲಾಗಿದೆ. 

ಇದನ್ನೂ ಓದಿ:  4ರ ಪೋರನ ಫುಟ್ಬಾಲ್ ಆಟಕ್ಕೆ ಮನಸೋತ ಮಹೀಂದ್ರ ಮಾಲೀಕ!

ಗಾಯದ ಪ್ರಮಾಣ ಹೆಚ್ಚಾಗಿರುವುದರಿಂದ ನೇಯ್ಮಾರ್‌ಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಕೋಪಾ ಅಮೇರಿಕಾ ಟೂರ್ನಿಯಿಂದ ನೇಯ್ಮಾರ್ ಹೊರಬಿದ್ದಿದ್ದಾರೆ. ಈ ಟೂರ್ನಿ ಆರಂಭದಲ್ಲೇ ನೇಯ್ಮಾರ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಪ್ಯಾರಿಸ್ ಹೊಟೆಲ್‌ ಒಂದರಲ್ಲಿ ನೇಯ್ಮಾರ್ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬ್ರೆಝಿಲ್ ಮೂಲದ ಮಹಿಳೆಯನ್ನು ನೇಯ್ಮಾರ್ ಪ್ಯಾರಿಸ್‌ ಹೊಟೆಲ್‌ಗೆ ಆಹ್ವಾನಿಸಿದ್ದಾರೆ. ಬಳಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೇ ,ಸಾವ್ ಪೌಲೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೇಯ್ಮಾರ್ ಹಾಗೂ ನೇಯ್ಮಾರ್ ತಂದೆ ಅತ್ಯಾಚಾರ ಆರೋಪನ್ನು ನಿರಾಕರಿಸಿದ್ದಾರೆ.