ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾ, ಮೊದಲ ಪ್ರಯತ್ನದಲ್ಲೇ ಸೆಂಚುರಿ ಬಾರಿಸಿದ್ದಾರೆ. ಇದೇ ಸಂದರ್ಭವನ್ನ ಬಳಸಿಕೊಂಡ ಕಾಂಡೋಮ್ ಕಂಪೆನಿ ಪೃಥ್ವಿ ಶಾಗೆ ವಿಶೇಷ ಅಭಿನಂದನೆ ಸಲ್ಲಿಸಿದೆ. ಇಲ್ಲಿದೆ ಕಾಂಡೋಮ್ ಕಂಪೆನಿಯ ಟ್ವೀಟ್ ವಿವರ.

ರಾಜ್‌ಕೋಟ್(ಅ.04): ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಹಲವು ದಾಖಲೆ ಬರೆದಿದ್ದಾರೆ. ಶಾ ಸೆಂಚುರಿ ಸಿಡಿಸುತ್ತಿದ್ದಂತೆ, ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೃಥ್ವಿ ಶಾ ಸೆಂಚುರಿ ಸಂದರ್ಭವನ್ನ ಬಳಸಿಕೊಂಡ ಡ್ಯುರೆಕ್ಸ್ ಕಾಂಡೋಮ್ ಕಂಪೆನಿ 19ರ ಯುವ ಪೋರನಿಗೆ ಅಭಿನಂದನೆ ಸಲ್ಲಿಸಿದೆ. ಕಾಂಡೋಮ್ ಜಾಹೀರಾತು ಸ್ಟೈಲ್‌ನಲ್ಲಿ ಶಾಗೆ ಶುಭಾಶಯ ಹೇಳಿದೆ. ಮೊದಲ ಪ್ರಯತ್ನ ಯಾವುತ್ತು ವಿಶೇಷವಾಗಿರುತ್ತೆ ಎಂದು ಟ್ವೀಟ್ ಮಾಡಿದೆ. 

Scroll to load tweet…

ಇದನ್ನೂ ಓದಿ: ಸ್ಮಿತ್ ಬಾಲ್ ಟ್ಯಾಂಪರಿಂಗ್ ವಿವಾದ: ಆಸೀಸ್ ಪಡೆ ಕಾಲೆಳೆದ ಕಾಂಡೊಮ್ ಕಂಪನಿ..!

ಕಾಂಡೋಮ್ ಕಂಪೆನಿಯ ಟ್ವೀಟ್, ಸೆಂಚುರಿ ವೀರ ಪೃಥ್ವಿ ಶಾ ಕಾಲೆಳೆದಿದ್ದೋ ಅಥವಾ ಅಭಿನಂದಿಸಿದ್ದೋ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಕಾಂಡೋಮ್ ಕಂಪೆನಿ ಈ ರೀತಿ ಸೆಂಚುರಿ ಹಾಗೂ ವಿಶೇಷ ಸಂದರ್ಭಗಳನ್ನ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 

ಇದನ್ನೂ ಓದಿ: ಸೋನಂ ದಂಪತಿಗೆ ಕಾಂಡೋಮ್ ಕಂಪನಿಯಿಂದ ತಮಾಷೆಯ ಟ್ವೀಟ್

ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ ಸಂದರ್ಭದಲ್ಲೂ ಕಾಂಡೋಮ್ ಕಂಪೆನಿ ಇದೇ ರೀತಿ ಟ್ವೀಟ್ ಮಾಡಿತ್ತು. ಇತ್ತೀಚೆಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಮದುವೆಗೂ ಕಾಂಡೋಮ್ ಕಂಪೆನಿ ತಮಾಷೆ ಟ್ವೀಟ್ ಮಾಡಿತ್ತು.

ಇದನ್ನೂ ಓದಿ: ಸನ್ನಿ ಲಿಯೋನ್ ಕಾಂಡೋಮ್ ಅವಾಂತರ