ಈ ಮೂವರು ಆಟಗಾರರ ಮೇಲೆ ಆಸೀಸ್ ಕ್ರಿಕೆಟ್ ಮಂಡಳಿಯ ಶಿಕ್ಷೆ ವಿಧಿಸಿದ್ದರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಇದೇವೇಳೆ ಪ್ರಖ್ಯಾತ ಕಾಂಡೊಮ್ ತಯಾರಿಕ ಸಂಸ್ಥೆ ಬಾಲ್ ಟ್ಯಾಂಪರಿಂಗ್ ವಿವಾದದ ಬಗ್ಗೆ ತಿಳಿಹೇಳುವ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದೆ.

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಸಹ ಆಟಗಾರ ಕ್ಯಾಮರೋನ್ ಬೆನ್'ಕ್ರಾಪ್ಟ್ ತಲೆದಂಡವಾಗಿದೆ.

ಅದರಲ್ಲೂ ಹಳದಿ ಬಣ್ಣದ ಟೇಪ್'ನ್ನು ಬಾಲ್'ಗೆ ಉಜ್ಜಿ ವಿರೂಪಗೊಳಿಸಿದ್ದ ಕ್ಯಾಮರೋನ್ ಬೆನ್'ಕ್ರಾಪ್ಟ್ ಗಮನದಲ್ಲಿಟ್ಟುಕೊಂಡು ಮ್ಯಾನ್'ಫೋರ್ಸ್ ಕಾಂಡೊಮ್ ಕಂಪನಿ ವಿಚಿತ್ರ ಟ್ವೀಟ್ ಮಾಡಿದೆ.

ಈ ಮೂವರು ಆಟಗಾರರ ಮೇಲೆ ಆಸೀಸ್ ಕ್ರಿಕೆಟ್ ಮಂಡಳಿಯ ಶಿಕ್ಷೆ ವಿಧಿಸಿದ್ದರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಇದೇವೇಳೆ ಪ್ರಖ್ಯಾತ ಕಾಂಡೊಮ್ ತಯಾರಿಕ ಸಂಸ್ಥೆ ಬಾಲ್ ಟ್ಯಾಂಪರಿಂಗ್ ವಿವಾದದ ಬಗ್ಗೆ ತಿಳಿಹೇಳುವ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದೆ.

Scroll to load tweet…

ಚೆನ್ನಾಗಿ ಆಟಡಿ, ರಕ್ಷಣಾತ್ಮಕವಾಗಿ ಆಡಿ, ಆಟವನ್ನು ಪ್ರೀತಿಯಿಂದ ಆನಂದಿಸಿ ಎಂದು ಕಾಂಡೊಮ್ ಸಂಸ್ಥೆ ಟ್ವೀಟ್ ಮಾಡಿದೆ. ಜತೆಗೆ #NoTampering#PamperNotTamper#Sandpapergate ಹ್ಯಾಶ್'ಟ್ಯಾಗ್ ನೀಡಿದೆ