ಖ್ಯಾತ ನಟಿ ಪೋರ್ನ್​ ಸ್ಟಾರ್ ಸನ್ನಿ ಲಿಯೋನ್ ಜಾಹಿರಾತು ಅವಾಂತರ ಸೃಷ್ಟಿಸಿದ್ದಾರೆ. ನವರಾತ್ರಿ ಹಬ್ಬದೊಂದಿಗೆ ನಿಮ್ಮ  ಸಂತೋಷವನ್ನ ಆಚರಿಸಿ ಎಂದು ದಾಂಡಿಯ ನೃತ್ಯ ಇರುವ ಕಾಡೊಂಮ್ ಜಾಹಿರಾತನ್ನ ಸನ್ನಿ ಲಿಯೋನ್ ನೀಡಿದ್ದಾರೆ.

ಅಹ್ಮದಾಬಾದ್( ಸೆ.19): ಖ್ಯಾತ ನಟಿ ಪೋರ್ನ್​ ಸ್ಟಾರ್ ಸನ್ನಿ ಲಿಯೋನ್ ಜಾಹಿರಾತು ಅವಾಂತರ ಸೃಷ್ಟಿಸಿದ್ದಾರೆ. ನವರಾತ್ರಿ ಹಬ್ಬದೊಂದಿಗೆ ನಿಮ್ಮ ಸಂತೋಷವನ್ನ ಆಚರಿಸಿ ಎಂದು ದಾಂಡಿಯ ನೃತ್ಯ ಇರುವ ಕಾಡೊಂಮ್ ಜಾಹಿರಾತನ್ನ ಸನ್ನಿ ಲಿಯೋನ್ ನೀಡಿದ್ದಾರೆ.

ಈ ಜಾಹಿರಾತಿನಲ್ಲಿ ಹಿಂದುಗಳ ಪವಿತ್ರವಾದ ನವರಾತ್ರಿ ಹಬ್ಬವನ್ನ ಅಪಹಾಸ್ಯ ಮಾಡಲಾಗಿದೆ. ಧಾರ್ಮಿಕ ಆಚರಣೆಗೆ ಹಾಗೂ ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ರಾಜಸ್ಥಾನ ಮತ್ತು ಗುಜರಾತಿನಲ್ಲಿ ಸನ್ನಿ ಲಿಯೋನ್ ನೀಡಿರುವ ಜಾಹಿರಾತನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಣದ ಆಸೆಗಾಗಿ ಭಾರತೀಯ ಸಾಂಸ್ಕೃತಿಕ ಮೌಲ್ಯವನ್ನು ಹಾಳು ಮಾಡುತ್ತಿದ್ದಾರೆ. ದಾಂಡಿಯ ನೃತ್ಯವನ್ನ ಕೂಡಾ ಜಾಹಿರಾತಿನಲ್ಲಿ ಅವಮಾನ ಮಾಡಲಾಗಿದೆ ಎಂದು ಅನೇಕರು ಸನ್ನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಆಟವಾಡಿ' ಅದರ ಜೊತೆಗೆ ನವರಾತ್ರಿಯನ್ನು ಪ್ರೀತಿಸಿ ಎಂದು ಕಾಂಡೋಮ್ ಜಾಹಿರಾತಿನಲ್ಲಿ ಹೇಳಲಾಗುತ್ತದೆ. ಇದನ್ನು ಖಂಡಿಸಿ ಅಖಿಲ ಭಾರತ ಮಾರಾಟಗಾರರ ಸಂಘ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್'ಗೆ ಪತ್ರ ಬರೆದಿದ್ದು ಜಾಹಿರಾತು ಫಲಕಗಳನ್ನು ಕೂಡಲೇ ತೆಗೆಸಿ. ಇದರ ತಯಾರಕರು ಹಾಗೂ ರಾಯಭಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.