ಇಂಗ್ಲೆಂಡ್‌ನಲ್ಲಿ ಶೀಘ್ರದಲ್ಲೇ ಕ್ರೀಡಾಂಗಣಕ್ಕೆ ಪ್ರೇಕ್ಷಕರು
ಮುಂದಿನ ವಾರದಿಂದ ಆಯ್ದ ಕ್ರೀಡೆಗಳ ಪಂದ್ಯಗಳಿಗೆ ಸೀಮಿತ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್(ಜು.18): ಕೊರೋನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಬೇಕು ಎನ್ನುವ ಸಿದ್ಧಾಂತವನ್ನು ಅಳವಡಿಸಿಕೊಳ್ಳುತ್ತಿರುವ ಇಂಗ್ಲೆಂಡ್, ಅಕ್ಟೋಬರ್ನಲ್ಲಿ ಕ್ರೀಡಾಂಗಣಗಳಿಗೆ ಪ್ರೇಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಿಡಲು ಯೋಜನೆ ರೂಪಿಸುತ್ತಿದೆ.
ಈ ಯೋಜನೆಯ ಅಂಗವಾಗಿ, ಮುಂದಿನ ವಾರದಿಂದ ಆಯ್ದ ಕ್ರೀಡೆಗಳ ಪಂದ್ಯಗಳಿಗೆ ಸೀಮಿತ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ. ಜು.26ರಿಂದ ದೇಸಿ ಕ್ರಿಕೆಟ್ ಋುತು ಆರಂಭಗೊಳ್ಳಲಿದ್ದು, ಕೊರೋನಾ ನಂತರ ಮೊದಲ ಬಾರಿಗೆ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ಸಿಗಲಿದೆ. ಜು.31ರಿಂದ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ನಡೆಯಲಿದ್ದು, ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ.
ಸ್ಟೋಕ್ಸ್, ಸಿಬ್ಲಿ ಶತಕ: ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್
ಈಗಾಗಲೇ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಯಶಸ್ವಿಯಾಗಿ ಆರಂಭವಾಗಿವೆ. ಕೊರೋನಾ ಹಾಗೂ ಲಾಕ್‌ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯವಹಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಇಂಗ್ಲೆಂಡ್ ಭಾಜನವಾಗಿದೆ. ಇದೀಗ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಸಾಗುತ್ತಿದ್ದು, ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಯುತ್ತಿದೆ. ಆಟಗಾರರಿಗೆ ಬಯೋ ಸೆಕ್ಯೂರ್ ಝೋನ್ ಏರ್ಪಡಿಸಲಾಗಿದ್ದು, ಮೈದಾನ ಹಾಗೂ ಹೋಟೆಲ್‌ನೊಳಗೆ ಇರಬೇಕಾಗಿದೆ. ಬಯೋ ಸೆಕ್ಯೂರ್ ಪ್ರೋಟೋಕಾಲ್ ಉಲ್ಲಂಘಿಸಿದ ತಪ್ಪಿಗಾಗಿ ಜೋಫ್ರಾ ಆರ್ಚರ್ ಅವರನ್ನು ಎರಡನೇ ಪಂದ್ಯದಿಂದ ಕಿಕೌಟ್ ಮಾಡಲಾಗಿದೆ.