ಕೆಕೆಆರ್ ಎದುರು 262 ರನ್ ಚೇಸ್: ಪಂಜಾಬ್ ಟಿ20 ವಿಶ್ವದಾಖಲೆ!
ಈ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಬೆಲೆಯೇ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸುವಂತೆ ಆರ್ಭಟಿಸಿದ ಕೋಲ್ಕತಾ 6 ವಿಕೆಟ್‌ಗೆ 261 ರನ್ ದೋಚಿತು. ಇಷ್ಟು ದೊಡ್ಡ ಮೊತ್ತವನ್ನು ಪಂಜಾಬ್ ಬೆನ್ನತ್ತುವುದು ಕನಸಿನ ಮಾತಾಗಿತ್ತು. ಆದರೆ ಅದನ್ನು ಪಂಜಾಬ್ ಬ್ಯಾಟರ್‌ಗಳು ಹುಸಿಗೊಳಿಸಿದರು. ಇನ್ನೂ 10 ಎಸೆತ ಇರುವಂತೆಯೇ 8 ವಿಕೆಟ್‌ಗಳಿಂದ ಗೆದ್ದ ಪಂಜಾಬ್, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಕೋಲ್ಕತಾ: 17ನೇ ಆವೃತ್ತಿ ಐಪಿಎಲ್ ಮತ್ತೆ ಹಲವು ದಾಖಲೆಗಳ ಪತನಕ್ಕೆ ಸಾಕ್ಷಿಯಾಗಿದೆ. ಈಡನ್ ಗಾರ್ಡನ್‌ನಲ್ಲಿ ಹರಿದ ರನ್ ಹೊಳೆಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತಾ ನೀಡಿದ 262 ರನ್‌ಗಳ ಹಿಮಾಲಯದೆತ್ತರದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದೆ. ಇದು ಐಪಿಎಲ್ ಜೊತೆಗೆ ಟಿ20 ಕ್ರಿಕೆಟ್‌ನಲ್ಲೇ ಗರಿಷ್ಠ ರನ್ ಚೇಸ್ ದಾಖಲೆ.
ಈ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಬೆಲೆಯೇ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸುವಂತೆ ಆರ್ಭಟಿಸಿದ ಕೋಲ್ಕತಾ 6 ವಿಕೆಟ್‌ಗೆ 261 ರನ್ ದೋಚಿತು. ಇಷ್ಟು ದೊಡ್ಡ ಮೊತ್ತವನ್ನು ಪಂಜಾಬ್ ಬೆನ್ನತ್ತುವುದು ಕನಸಿನ ಮಾತಾಗಿತ್ತು. ಆದರೆ ಅದನ್ನು ಪಂಜಾಬ್ ಬ್ಯಾಟರ್‌ಗಳು ಹುಸಿಗೊಳಿಸಿದರು. ಇನ್ನೂ 10 ಎಸೆತ ಇರುವಂತೆಯೇ 8 ವಿಕೆಟ್‌ಗಳಿಂದ ಗೆದ್ದ ಪಂಜಾಬ್, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಬೌಂಡರಿಗಳ ಸುರಿಮಳೆ: ಮೊದಲ ಓವರ್‌ನಿಂದಲೇ ಕೆಕೆಆರ್ ಬೌಲರ್‌ಗಳನ್ನು ಚೆಂಡಾಡಲು ಆರಂಭಿಸಿದ ಪ್ರಭ್‌ಸಿಮ್ರನ್-ಜಾನಿ ಬೇರ್‌ಸ್ಟೋಬ್ ಪವರ್‌ಪ್ಲೇನಲ್ಲಿ 93 ರನ್ ದೋಚಿದರು. ಈ ಹಂತದಲ್ಲಿ ಪ್ರಭ್‌ಸಿಮ್ರನ್ 20 ಎಸೆತದಲ್ಲಿ 54 ರನ್ ಸಿಡಿಸಿ ಔಟಾದರು. ರೋಸ್ಸೌ 26ಕ್ಕೆ ವಿಕೆಟ್ ಒಪ್ಪಿಸಿದ ಬಳಿಕ 3ನೇ ವಿಕೆಟ್‌ಗೆ ಜಾನಿ ಜೊತೆಯಾದ ಶಶಾಂಕ್ ಸಿಂಗ್ ತಂಡವನ್ನು 18.4 ಓವರಲ್ಲೇ ಗುರಿ ಮುಟ್ಟಿಸಿದರು. ಬೇರ್‌ಸ್ಟೋವ್ 48 ಎಸೆತದಲ್ಲಿ 8 ಬೌಂಡರಿ, 9 ಸಿಕ್ಸರ್‌ನೊಂದಿಗೆ 108 ರನ್ ಚಚ್ಚಿದರೆ, ಶಶಾಂಕ್ 29 ಎಸೆತದಲ್ಲಿ 2 ಬೌಂಡರಿ, 8 ಸಿಕ್ಸರ್ ಒಳಗೊಂಡ 68 ರನ್ ಸಿಡಿಸಿದರು.
ನರೈನ್, ಸಾಲ್ಟ್ ಅಬ್ಬರ: ಇದಕ್ಕೂ ಮುನ್ನ ಪಂಜಾಬ್ ಬೌಲರ್‌ಗಳ ಮೇಲೆ ಕೆಕೆಆರ್ ಬ್ಯಾಟರ್‌ಗಳು ಸವಾರಿ ಮಾಡಿದರು. ಪವರ್‌ಪ್ಲೇನಲ್ಲೇ ತಂಡ 76 ರನ್ ಸಿಡಿಸಿದರು. ಆರಂಭಿಕರಾದ ಸುನಿಲ್ ನರೈನ್ 32 ಎಸೆತದಲ್ಲಿ 71, ಫಿಲ್ ಸಾಲ್ಟ್ 37 ಎಸೆತಗಳಲ್ಲಿ 75 ರನ್ ಸಿಡಿಸಿದರು. ಬಳಿಕ ವೆಂಕಟೇಶ್ 39, ಶ್ರೇಯಸ್ 28, ರಸೆಲ್ 24 ರನ್ ಸಿಡಿಸಿ ತಂಡವನ್ನು 250ರ ಗಡಿ ದಾಟಿಸಿದರು.
ಸ್ಕೋರ್: ಕೋಲ್ಕತಾ 261/6 (ಸಾಲ್ಟ್ 75, ನರೈನ್ 71, ಅರ್ಶ್‌ದೀಪ್ 2-45), ಪಂಜಾಬ್ 18.4 ಓವರಲ್ಲಿ 262/2 (ಬೇರ್‌ಸ್ಟೋಬ್ 108*, ಶಶಾಂಕ್ 68*, ಪ್ರಭ್‌ಸಿಮ್ರನ್ 54, ನರೈನ್ 1-24)