ಬಾಲ್ ಟ್ಯಾಂಪರಿಂಗ್ ತೀರ್ಪು: ನಾಯಕ ಚಾಂಡಿಮಾಲ್ ಸೇರಿ ಮೂವರು ಅಮಾನತ್ತು!

Dinesh Chandimal, Sri Lankan coach and manager suspended for four ODIs and two Tests
Highlights

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಬೆನ್ನಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾಗಿದ್ದರು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. ಐಸಿಸಿ ನೀಡಿದ ತೀರ್ಪಿನಲ್ಲಿ ಏನಿದೆ? ಇಲ್ಲಿದೆ.

ದುಬೈ(ಜು.16): ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸಿದ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್‌ ಸೇರಿದಂತೆ ಮೂವರ ವಿರುದ್ಧ ತೀರ್ಪು ಪ್ರಕಟಗೊಂಡಿದೆ.  ತೀರ್ಪು ಪ್ರಕಟಿಸಿರುವ ಐಸಿಸಿ ನ್ಯಾಯಾಲಯ ಚಾಂಡಿಮಾಲ್ ಸೇರಿದಂತೆ ಮೂವರಿಗೆ ಅಮಾನತ್ತು ಶಿಕ್ಷೆ ಪ್ರಕಟಿಸಿದೆ.

ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಿನೇಶ್ ಚಾಂಡಿಮಾಲ್ ಬಾಲ್ ಟ್ಯಾಂಪರಿಂಗ್ ಆರೋಪ ಹೊತ್ತಿದ್ದರು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಐಸಿಸಿ ತನಿಖೆ ನಡೆಸಿತ್ತು. ಇದೀಗ ತೀರ್ಪು ಪ್ರಕಟಿಸಿದೆ. ನಾಯಕ ದಿನೇಶ್ ಚಾಂಡಿಮಾಲ್, ಲಂಕಾ ಕೋಚ್ ಚಂದಿಕಾ ಹತುರುಸಿಂಗಾ, ಹಾಗೂ ತಂಡದ ಮ್ಯಾನೇಜರ್‌ ಅಸಂಕ ಗುರುಸಿನ್ಹ ಅವರಿಗೆ ಶಿಕ್ಷೆ ಪ್ರಕಟಿಸಿದೆ.

 

 

ಚಾಂಡಿಮಾಲ್, ಚಂದಿಕಾ ಹಾಗೂ ಅಸಂಕ ಅವರನ್ನ ಮುಂಬರುವ ಸೌತ್ಆಫ್ರಿಕಾ ವಿರುದ್ಧದ 4 ಏಕದಿನ ಹಾಗೂ 2 ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗಿದೆ. ಐಸಿಸಿ ನಿಯಮ 3 ಲೆವಲ್ ಉಲ್ಲಂಘಿಸಿದ ಕಾರಣ ಅಮಾನತು ಮಾಡಲಾಗಿದೆ.

ಲೆವೆಲ್ 3 ಉಲ್ಲಂಘನೆಗಾಗಿ ಕನಿಷ್ಠ 2 ಟೆಸ್ಟ್ ಹಾಗೂ 4 ಏಕದಿನ, ಅಥವಾ 8 ಏಕದಿನ ಪಂದ್ಯದಿಂದ ಅಮಾನತ್ತು ಮಾಡಲಾಗುವುದು. ಹೀಗಾಗಿ ಚಾಂಡಿಮಾಲ್, ಕೋಚ್ ಹಾಗೂ ಮ್ಯಾನೇಜರ್ ಲೆವೆಲ್ 2 ನಿಯಮ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

loader