Asianet Suvarna News Asianet Suvarna News

ಈ ನಾಲ್ವರು ಕ್ರಿಕೆಟ್ ದಿಗ್ಗಜರು ಭಾರತದ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿಲ್ಲ..!

ಭಾರತದ ನೆಲದಲ್ಲಿ ಶತಕ ಸಿಡಿಸುವುದು ವಿದೇಶಿ ಬ್ಯಾಟ್ಸ್’ಮನ್’ಗಳಿಗೆ ಯಾವತ್ತಿಗೂ ಸವಾಲಿನ ಸಂಗತಿಯಾಗಿರುತ್ತದೆ. ಉಪಖಂಡದ ನೆಲದಲ್ಲಿ ಸ್ಪಿನ್ ಸ್ನೇಹಿ ಪಿಚ್’ನಲ್ಲಿ ದಿಗ್ಗಜ ಬ್ಯಾಟ್ಸ್’ಮನ್’ಗಳು ರನ್’ಗಳಿಸುವುದು ಒತ್ತಟ್ಟಿಗಿರಲಿ ವಿಕೆಟ್ ಉಳಿಸಿಕೊಳ್ಳಲು ಪರಡಾಡುವುದನ್ನು ಸಾಕಷ್ಟು ಬಾರಿ ಕಂಡಿದ್ದೇವೆ. ವರ್ಷಗಳ ಕಾಲ ಭಾರತ ಪ್ರವಾಸ ಕೈಗೊಂಡರು ಈ ಕೆಳಗಿನ 4 ಬ್ಯಾಟ್ಸ್’ಮನ್’ಗಳ ಪಾಲಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸುವ ಆಸೆ ಕನ್ನಡಿ ಗಂಟು ಆಗಿಯೇ ಉಳಿದಿದೆ. ಯಾರು ಆ ಆಟಗಾರರು ಎಂದು ತಿಳಿದರೆ ನಿಮಗೂ ಅಚ್ಚರಿಯಾಗಬಹುದು. 

4 greats who have never scored a Test hundred on Indian soil

ಬೆಂಗಳೂರು[ಜೂ.07]: ಭಾರತದ ನೆಲದಲ್ಲಿ ಶತಕ ಸಿಡಿಸುವುದು ವಿದೇಶಿ ಬ್ಯಾಟ್ಸ್’ಮನ್’ಗಳಿಗೆ ಯಾವತ್ತಿಗೂ ಸವಾಲಿನ ಸಂಗತಿಯಾಗಿರುತ್ತದೆ. ಉಪಖಂಡದ ನೆಲದಲ್ಲಿ ಸ್ಪಿನ್ ಸ್ನೇಹಿ ಪಿಚ್’ನಲ್ಲಿ ದಿಗ್ಗಜ ಬ್ಯಾಟ್ಸ್’ಮನ್’ಗಳು ರನ್’ಗಳಿಸುವುದು ಒತ್ತಟ್ಟಿಗಿರಲಿ ವಿಕೆಟ್ ಉಳಿಸಿಕೊಳ್ಳಲು ಪರಡಾಡುವುದನ್ನು ಸಾಕಷ್ಟು ಬಾರಿ ಕಂಡಿದ್ದೇವೆ. ವರ್ಷಗಳ ಕಾಲ ಭಾರತ ಪ್ರವಾಸ ಕೈಗೊಂಡರು ಈ ಕೆಳಗಿನ 4 ಬ್ಯಾಟ್ಸ್’ಮನ್’ಗಳ ಪಾಲಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸುವ ಆಸೆ ಕನ್ನಡಿ ಗಂಟು ಆಗಿಯೇ ಉಳಿದಿದೆ. ಯಾರು ಆ ಆಟಗಾರರು ಎಂದು ತಿಳಿದರೆ ನಿಮಗೂ ಅಚ್ಚರಿಯಾಗಬಹುದು.

[* ಟೆಸ್ಟ್ ಕ್ರಿಕೆಟ್’ನಲ್ಲಿ 7000 ಕ್ಕೂ ಹೆಚ್ಚು ರನ್, 15ಕ್ಕೂ ಹೆಚ್ಚು ಶತಕ ಹಾಗೂ ಭಾರತದ ನೆಲದಲ್ಲಿ ಕನಿಷ್ಟ 3 ಟೆಸ್ಟ್ ಪಂದ್ಯವನ್ನಾಡಿದ ಆಟಗಾರರನ್ನು ಪಟ್ಟಿಯಲ್ಲಿ ಪರಿಗಣಿಸಲಾಗಿದೆ]

#4. ಕ್ರಿಸ್ ಗೇಲ್:

4 greats who have never scored a Test hundred on Indian soil
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿರುವ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್’ನಲ್ಲಿ ಒಮ್ಮೆಯೂ ಮೂರಂಕಿ ಮೊತ್ತ ಮುಟ್ಟಿಲ್ಲ.
ಐಪಿಎಲ್’ನಲ್ಲಿ ಅನಾಯಾಸವಾಗಿ ಶತಕ ಸಿಡಿಸಿರುವ ಗೇಲ್ ಒಮ್ಮೆಯೂ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸಿಲ್ಲ. ಟೆಸ್ಟ್ ಸರಣಿಗಾಗಿ ಎರಡು ಬಾರಿ[2002 ಹಾಗೂ 2013] ಭಾರತ ಪ್ರವಾಸ ಕೈಗೊಂಡಿದ್ದ ಗೇಲ್ ಒಟ್ಟು 5 ಟೆಸ್ಟ್ ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ ಕಲೆಹಾಕಿದ್ದು ಕೇವಲ 257 ರನ್’ಗಳು ಮಾತ್ರ. ಭಾರತ ನೆಲದಲ್ಲಿ ಗೇಲ್ ಸಿಡಿಸಿದ ಗರಿಷ್ಠ ವೈಯುಕ್ತಿಕ ಮೊತ್ತ 88 ರನ್.
ಟೆಸ್ಟ್ ಕ್ರಿಕೆಟ್’ನಲ್ಲಿ 2 ಬಾರಿ ತ್ರಿಶತಕ ಸಿಡಿಸಿರುವ ಗೇಲ್ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸಲು ಸಾಧ್ಯವಾಗಿಲ್ಲ.

#3. ಜಸ್ಟಿನ್ ಲ್ಯಾಂಗರ್:

4 greats who have never scored a Test hundred on Indian soil
ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯುತ್ತಮ ಟೆಸ್ಟ್ ಆರಂಭಿಕ ಬ್ಯಾಟ್ಸ್’ಮನ್’ಗಳ ಪೈಕಿ ಜಸ್ಟಿನ್ ಲ್ಯಾಂಗರ್ ಕೂಡಾ ಒಬ್ಬರು. ಮ್ಯಾಥ್ಯೂ ಹೇಡನ್ ಜತೆ ಇನಿಂಗ್ಸ್ ಆರಂಭಿಸುತ್ತಿದ್ದ ಲ್ಯಾಂಗರ್ ಎದುರಾಳಿ ಬೌಲರ್’ಗಳ ಪಾಲಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದ್ದರು. ಆದರೆ ಭಾರತದ ನೆಲದಲ್ಲಿ ಲ್ಯಾಂಗರ್ ಆಟ ನಡೆಯಲಿಲ್ಲ.

2 ಬಾರಿ[2001 ಹಾಗೂ 2004] ಟೆಸ್ಟ್ ಸರಣಿಗೆ ಭಾರತ ಪ್ರವಾಸ ಕೈಗೊಂಡಿದ್ದ ಲ್ಯಾಂಗರ್ ಒಟ್ಟು 7 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಕೇವಲ 29ರ ಸರಾಸರಿಯಲ್ಲಿ ಮೂರು ಅರ್ಧಶತಕಗಳೊಂದಿಗೆ ಲ್ಯಾಂಗರ್ ಬಾರಿಸಿದ್ದು 389 ರನ್ ಮಾತ್ರ. ಟೆಸ್ಟ್ ಕ್ರಿಕೆಟ್’ನಲ್ಲಿ ಒಟ್ಟು 23 ಶತಕ ಸಿಡಿಸಿರುವ ಲ್ಯಾಂಗರ್ ಭಾರತದ ಸ್ಪಿನ್ ಸ್ನೇಹಿ ಪಿಚ್’ನಲ್ಲಿ ಮೂರಂಕಿ ಮೊತ್ತ ಮುಟ್ಟಲು ಸಾಧ್ಯವಾಗಿಲ್ಲ ಎನ್ನುವುದೇ ಒಂದು ಅಚ್ಚರಿ.
ಲ್ಯಾಂಗರ್ 2000ನೇ ಇಸವಿಯಲ್ಲಿ ಸಿಡ್ನಿ ಮೈದಾನದಲ್ಲಿ ದ್ವಿಶತಕ[223 ರನ್] ಸಿಡಿಸಿದ್ದರು, ಆದರೆ ಭಾರತದಲ್ಲಿ ಮಾತ್ರ ಲ್ಯಾಂಗರ್ ಆಟ ನಡೆಯಲಿಲ್ಲ.

#2. ಗ್ರೇಮ್ ಸ್ಮಿತ್:

4 greats who have never scored a Test hundred on Indian soil
ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಗ್ರೇಮ್ ಸ್ಮಿತ್ ಅಗ್ರಸ್ಥಾನವಿದೆ. ನಾಯಕನಾಗಿ ಹಾಗೂ  ಬ್ಯಾಟ್ಸ್’ಮನ್ ಆಗಿ ಅದ್ಭುತ ಯಶಸ್ಸು ಕಂಡಿದ್ದ ಸ್ಮಿತ್ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸಿಲ್ಲ. ಭಾರತಕ್ಕೆ ಒಟ್ಟು ಮೂರು ಬಾರಿ[2004, 2008 ಹಾಗೂ 2010] ಪ್ರವಾಸ ಕೈಗೊಂಡಿದ್ದ ಸ್ಮಿತ್ 36ರ ಸರಾಸರಿಯಲ್ಲಿ 431 ರನ್ ಕಲೆಹಾಕಿದ್ದರು. ಆದರೆ ಒಂದೇಒಂದು ಶತಕ ಸಿಡಿಸಲು ಅವರಿಂದ ಸಾಧ್ಯವಾಗಲಿಲ್ಲ.

ಜಹೀರ್ ಖಾನ್ ಎದುರು ಬ್ಯಾಟ್ ಬೀಸಲು ಹೆದರುತ್ತಿದ್ದ ಸ್ಮಿತ್ ಸಾಕಷ್ಟು ಬಾರಿ ಎಡಗೈ ವೇಗಿ ಎದುರು ಮಂಡಿಯೂರಿದ್ದಾರೆ. ಒಟ್ಟು 117 ಟೆಸ್ಟ್ ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 9265 ರನ್ ಬಾರಿಸಿರುವ ಸ್ಮಿತ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿಗೆ ನೀಡಿದ ಶ್ರೇಷ್ಠ ಆರಂಭಿಕ ಆಟಗಾರ ಎಂದರೆ ಅತಿಶಯೋಕ್ತಿಯಲ್ಲ.

#1. ಬ್ರಿಯಾನ್ ಲಾರಾ:

4 greats who have never scored a Test hundred on Indian soil
ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳಲ್ಲಿ ಬ್ರಿಯಾನ್ ಲಾರಾ ಕೂಡ ಒಬ್ಬರು. ಹಲವಾರು ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಸೋಲಿನಂಚಿನಿಂದ ಪಾರು ಮಾಡಿದ್ದ ಲಾರಾ ಅವರನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. 

ಟೆಸ್ಟ್ ಕ್ರಿಕೆಟ್’ನಲ್ಲಿ ವೈಯುಕ್ತಿಕ ಗರಿಷ್ಠ ಮೊತ್ತ[400*] ಸೇರಿದಂತೆ ಹಲವಾರು ಅಪರೂಪದ ದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ಲಾರಾ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸಿಲ್ಲ ಎಂದರೆ ನಿಜಕ್ಕೂ ನಂಬಲೂ ಸಾಧ್ಯವಿಲ್ಲ. ಆದರೆ ಇದು ಸತ್ಯ. 1994ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್’ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಲಾರಾ 3 ಟೆಸ್ಟ್ ಪಂದ್ಯಗಳನ್ನಾಡಿದ್ದರು. 3 ಟೆಸ್ಟ್ ಪಂದ್ಯಗಳಿಂದ 33ರ ಸರಾಸರಿಯಲ್ಲಿ 198 ರನ್ ಗಳನ್ನಷ್ಟೇ ಬಾರಿಸಿದ್ದರು. ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಲಾರಾ ಬಾರಿಸಿದ ವೈಯುಕ್ತಿಕ ಗರಿಷ್ಠ ಮೊತ್ತ 91 ರನ್’ಗಳು ಮಾತ್ರ. ಆ ಬಳಿಕ ಲಾರಾ ಟೆಸ್ಟ್ ಸರಣಿಯಾಡಲು ಭಾರತಕ್ಕೆ ಪ್ರವಾಸ ಕೈಗೊಳ್ಳಲಿಲ್ಲ.

2008ರವರೆಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಟ ರನ್ ಸಿಡಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಲಾರಾ 131 ಟೆಸ್ಟ್ ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 11953 ರನ್ ಸಿಡಿಸಿದ್ದರು. ಇದರಲ್ಲಿ 34 ಟೆಸ್ಟ್ ಶತಕ ಸಿಡಿಸಿದ್ದಾರೆ.

Follow Us:
Download App:
  • android
  • ios