ಐಪಿಎಲ್‌ನಲ್ಲಿ ತಮ್ಮ 6ನೇ ಶತಕವನ್ನು ಗೇಲ್ ತಮ್ಮ ಮಗಳು ಕ್ರಿಸ್ ಆಲಿನಾಗೆ ಅರ್ಪಿಸಿದ್ದಾರೆ.

ಮೊಹಾಲಿ : ಐಪಿಎಲ್‌ನಲ್ಲಿ ತಮ್ಮ 6ನೇ ಶತಕವನ್ನು ಗೇಲ್ ತಮ್ಮ ಮಗಳು ಕ್ರಿಸ್ ಆಲಿನಾಗೆ ಅರ್ಪಿಸಿದ್ದಾರೆ. ‘ಶುಕ್ರವಾರ ನನ್ನ ಮಗಳ 2ನೇ ಹುಟ್ಟುಹಬ್ಬ. ಆಕೆಗೆ ಈ ಶತಕವನ್ನು ಉಡುಗೊರೆಯಾಗಿ ನೀಡುತ್ತೇನೆ’ ಎಂದು ಗೇಲ್ ಶತಕದ ಬಳಿಕ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಗೇಲ್, ‘ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ಅನ್ನು ಉಳಿಸಿದ್ದಾರೆ. ನಾನು 2 ಪಂದ್ಯ ಗೆಲ್ಲಿಸಿದರೆ ಸಾಕು, ನಾವು ಗೇಲ್ ಮೇಲೆ ಹಾಕಿದ ಬಂಡವಾಳ ವಾಪಸ್ ಬಂದಂತೆ ಎಂದು ವೀರೂ ಹೇಳಿದ್ದರು. ಆ ಬಗ್ಗೆ ಅವರೊಂದಿಗೆ ಮಾತನಾಡಬೇಕಿದೆ’ ಎಂದು ತಮಾಷೆ ಮಾಡಿದರು.