ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್‌'ನಲ್ಲಿ ಇತರೆ ತಂಡಗಳಿಗೆ ಭಯ ಮೂಡಿಸಿತ್ತು. ಆದರೆ ಈಗೀನ ಸ್ಟೀವ್ ಸ್ಮಿತ್ ಪಡೆ ಅಂತಹ ಯಾವುದೇ ಲಕ್ಷಣವನ್ನು ಹೊಂದಿಲ್ಲ.- ಬ್ರಿಯಾನ್ ಲಾರಾ
ಸಿಡ್ನಿ(ನ.16): ಆಸ್ಟ್ರೇಲಿಯಾ ಕ್ರಿಕೆಟಿಗರು ಭಯ ಹುಟ್ಟಿಸುವ ಶೈಲಿಯನ್ನು ಕಳೆದುಕೊಂಡಿದ್ದಾರೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್'ನಲ್ಲಿ ಇತರೆ ತಂಡಗಳಿಗೆ ಭಯ ಮೂಡಿಸಿತ್ತು. ಆದರೆ ಈಗೀನ ಸ್ಟೀವ್ ಸ್ಮಿತ್ ಪಡೆ ಅಂತಹ ಯಾವುದೇ ಲಕ್ಷಣವನ್ನು ಹೊಂದಿಲ್ಲ ಎಂದಿದ್ದಾರೆ.
ಮಂಗಳವಾರವಷ್ಟೇ ಮುಕ್ತಾಯಕಂಡ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಸೋಲು ಕಾಣುವ ಮೂಲಕ ಸತತ 5ನೇ ಪಂದ್ಯ ಸೋತಿದ್ದರಿಂದ ಲಾರಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
25 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ಕೂಡ, ವಿಶ್ವ ಕ್ರಿಕೆಟ್'ನಲ್ಲಿ ಇತರ ತಂಡಗಳಿಗೆ ಭಯ ಹುಟ್ಟಿ ಹಾಕಿತ್ತು ಎಂದಿದ್ದಾರೆ.
