ನವದೆಹಲಿ(ಅ.07): ಬ್ಯಾಟ್ಸ್'ಮನ್'ಗಳ ಪ್ರಾಬಲ್ಯದ ನಡುವೆಯೂ ತನ್ನದೇ ಆದ ಛಾಪು ಮೂಡಿಸಿದ ಕೆಲವೇ ಬೌಲರ್'ಗಳಲ್ಲಿ ಜಹೀರ್ ಖಾನ್ ಕೂಡ ಒಬ್ಬರು. ಜಹೀರ್ ಖಾನ್'ಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಪಿಲ್ ದೇವ್ ನಂತರ ಯಶಸ್ವಿ ಬೌಲಿಂಗ್ ಸಂಘಟಿಸಿದ ಕೀರ್ತಿ ಜಹೀರ್ ಖಾನ್'ಗೆ ಸಲ್ಲುತ್ತದೆ. 2011ರ ವಿಶ್ವಕಪ್ ಗೆಲ್ಲುವಲ್ಲೂ ಕೂಡ ಜಾಕ್ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಕಪ್'ನ 9 ಪಂದ್ಯಗಳಲ್ಲಿ 21 ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಕಾಣಿಕೆ ನೀಡಿದ್ದಾರೆ.

ತಮ್ಮ ನಿಖರ ಯಾರ್ಕರ್, ಇನ್'ಸ್ವಿಂಗ್ ಹಾಗೂ ಔಟ್'ಸ್ವಿಂಗ್ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬುಗೊಳಿಸುತ್ತಿದ್ದ ಜಹೀರ್ ಖಾನ್, ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಸಾಕಷ್ಟು ಬಾರಿ ತಬ್ಬಿಬ್ಬುಗೊಳಿಸಿದ್ದಾರೆ.

ಒಟ್ಟು 25 ಬಾರಿ ಗ್ರೇಮ್ ಸ್ಮಿತ್ ಹಾಗೂ ಜಹೀರ್ ಖಾನ್ ಮುಖಾಮುಖಿಯಾಗಿದ್ದು 13 ಬಾರಿ ಸ್ಮಿತ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಈ ಅಪರೂಪದ ವಿಡಿಯೋ ನಿಮಗಾಗಿ: