ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಗೇಲ್ ತನ್ನ ಸಹಪಾಠಿ ಆ್ಯಂಡ್ರೆ ರಸೆಲ್ ಅವರೊಂದಿಗೆ ನೆಟ್ ಪ್ರಾಕ್ಟೀಸ್ ಮಾಡುವಾಗ ನಡೆದ ಸಂಬಾಷಣೆಯನ್ನು ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟ್ಸ್'ಮನ್ ಕ್ರಿಸ್ ಗೇಲ್ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ. RCB ತಂಡದ ಅವಿಭಾಜ್ಯ ಅಂಗವಾಗಿದ್ದ ಗೇಲ್'ರನ್ನು ಹರಾಜಿನಲ್ಲಿ ಮೊದಲ ದಿನ ಯಾವ ಪ್ರಾಂಚೈಸಿಯೂ ಖರೀದಿಸುವ ಮನಸು ಮಾಡಿರಲಿಲ್ಲ. ಎರಡನೇ ದಿನ ಮರುಹರಾಜಿನಲ್ಲಿ ಪ್ರೀತಿ ಜಿಂಟಾ ಸಹ ಒಡೆತನದ ಕಿಂಗ್ಸ್ XI ಪಂಜಾಬ್ ಪ್ರಾಂಚೈಸಿಯೂ ಗೇಲ್'ರನ್ನು ಮೂಲಬೆಲೆ 2 ಕೋಟಿಗೆ ಖರೀದಿಸಿತು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಗೇಲ್ ತನ್ನ ಸಹಪಾಠಿ ಆ್ಯಂಡ್ರೆ ರಸೆಲ್ ಅವರೊಂದಿಗೆ ನೆಟ್ ಪ್ರಾಕ್ಟೀಸ್ ಮಾಡುವಾಗ ನಡೆದ ಸಂಬಾಷಣೆಯನ್ನು ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

View post on Instagram

ರಸೆಲ್'ರನ್ನು ಕೆಕೆಆರ್ ರೀಟೈನ್ ಮಾಡಿಕೊಂಡಿದೆ. ಕೋಲ್ಕತ ನೈಟ್'ರೈಡರ್ಸ್ ಆಟಗಾರ ಪಂಬಾಬಿ ಆಗಲು ಸಾಧ್ಯವಿಲ್ಲ ಎಂದು ಗೇಲ್ ಕಾಲೆಳೆದಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟಿರುವ ಆಲ್ರೌಂಡರ್, ನಿಮ್ಮ ಎಸೆತದಲ್ಲಿ ಸಿಕ್ಸ್ ಬಾರಿಸಿದ ನಂತರ ಪಂಜಾಬಿ ಭಾಂಗ್ರಾ ಸ್ಟೆಪ್ ಹಾಕುವುದಾಗಿ ರಸೆಲ್ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗೇಲ್ ಐಪಿಎಲ್'ನಲ್ಲಿ ನೋಡಿಕೊಳ್ಳುತ್ತೇನೆ ಎಂಬರ್ಥದಲ್ಲಿ ಮೀಸೆ ತಿರುವಿ ತೊಡೆ ತಟ್ಟಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2008ರಲ್ಲಿ KKR ತಂಡದಿಂದ IPL ವೃತ್ತಿಜೀವನ ಆರಂಭಿಸಿದ ಗೇಲ್ 2011ರಿಂದ 2017ರ ತನಕ ಆರ್'ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ಇದೀಗ KXIP ಪಂಜಾಬ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.