ಸಂಕ್ರಾಂತಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ತಾಳಗುಪ್ಪ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಜನವರಿ 13, 14, 23 ಮತ್ತು 24 ರಂದು ಸಂಚರಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬೆಂಗಳೂರು: ಸಂಕ್ರಾಂತಿ ಹಬ್ಬದ ವೇಳೆಯ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬೆಂಗಳೂರಿನ ಯಶವಂತಪುರ ಮತ್ತು ಸಿದ್ದಾಪುರದ ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸುವುದಾಗಿ ನೈಋತ್ಯ ರೈಲ್ವೆಯು ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್

ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು (06585) ಜ.13ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗಿನ ಜಾವ 4.45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು (06586) ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಜ.14ರಂದು ಬೆಳಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು ಅಂದೇ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ಈ ವಿಶೇಷ ರೈಲುಗಳು ಪ್ರಥಮ ದರ್ಜೆ ಎಸಿ (1), ಎಸಿ ಟು ಟೈರ್ (2), ಎಸಿ ತ್ರೀ-ಟೈರ್ (6), ಸ್ಲೀಪರ್ ಕ್ಲಾಸ್ (8), ಜನರಲ್ ಸೆಕೆಂಡ್ ಕ್ಲಾಸ್ (3) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿ ಸೇರಿ 22 ಬೋಗಿ ಒಳಗೊಂಡಿದೆ.

ರೈಲು ಸಂಖ್ಯೆ 06587

ಅದೇ ರೀತಿ, ರೈಲು ಸಂಖ್ಯೆ 06587 ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಜ.23 ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 4.45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು (06588) ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಜ.24ರಂದು ಬೆಳಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೇ. 8 ಮೀಸಲಾತಿ; ಬಂಪರ್ ಸುವರ್ಣವಕಾಶ

ಈ ವಿಶೇಷ ರೈಲುಗಳು ಪ್ರಥಮ ದರ್ಜೆ ಕಮ್ ಎಸಿ ಟು ಟೈರ್ (1), ಎಸಿ ತ್ರೀ-ಟೈರ್ (2), ಸ್ಲೀಪರ್ ಕ್ಲಾಸ್ (10), ಜನರಲ್ ಸೆಕೆಂಡ್ ಕ್ಲಾಸ್ (5) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿ ಸೇರಿ 20 ಬೋಗಿಗಳನ್ನು ಒಳಗೊಂಡಿದೆ. ರೈಲುಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲ್ಲಲಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿ ಜಲಸಾಹಸ ಕ್ರೀಡೆ; ವಿವಿಧ ವಾಟರ್ ಬೋಟ್‌ ಲಭ್ಯ