Asianet Suvarna News Asianet Suvarna News
52 results for "

ಮಲಪ್ರಭಾ ನದಿ

"
Drowning Peacock Rescued by Bagalkot VillagersDrowning Peacock Rescued by Bagalkot Villagers
Video Icon

ಮಲಪ್ರಭೆ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ನವಿಲು ರಕ್ಷಣೆ

ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಣೆ ಮಾಡಲಾಗಿದೆ.  ಬಾಗಲಕೋಟೆ ಜಿಲ್ಲೆಯ ಚೊಳಚಗುಡ್ಡ ಸೇತುವೆ ಬಳಿ ಘಟನೆ ನಡೆದಿದೆ. 

Karnataka Districts Aug 19, 2020, 6:31 PM IST

Pets washed in Malaprabha river in North KarnatakaPets washed in Malaprabha river in North Karnataka
Video Icon

ಉಕ್ಕಿ ಹರಿದ ಮಲಪ್ರಭೆ: ಜಾರುವಾರುಗಳು ನೀರು ಪಾಲು

ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.  ಮಹಾಮಳೆಗೆ ಜಾನುವಾರುಗಳು ನೀರು ಪಾಲಾಗಿವೆ. ನಾಂದೆಡ್ ಜಿಲ್ಲೆಯಲ್ಲಿ 20 ಕ್ಕೂ ಜಾನುವಾರುಗಳು ನೀರು ಪಾಲಾಗಿವೆ. ಹುಲ್ಲು ಮೇಯಲು ಹೋಗಿದ್ದ ಜಾನುವಾರುಗಳು ಮಲಪ್ರಭೆಯಲ್ಲಿ ಸಿಲುಕಿಕೊಂಡಿವೆ. ಯಾರೂ ಕೂಡಾ ಸಹಾಯ ಮಾಡಲಾಗದ ಅಸಹಾಯಕ ಸ್ಥಿತಿ ಇದು. ಮೂಕ ಪ್ರಾಣಿಗಳ ಅರಣ್ಯ ರೋದನ ಎಂಥವರ ಮನವನ್ನೂ ಕಲಕುವಂತಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Aug 18, 2020, 5:40 PM IST

Rescue operation is on in Govinakoppa village of BagalakoteRescue operation is on in Govinakoppa village of Bagalakote
Video Icon

ಗೋವಿನಕೊಪ್ಪ ಗ್ರಾಮಕ್ಕೆ ನುಗ್ಗಿದ ನೀರು; ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳ ಹರಿವು ಹೆಚ್ಚಾಗಿದೆ. ಬೆಳಗಾವಿಯ 20 ಕ್ಕೂ ಹೆಚ್ಚು ಗ್ರಾಮಕ್ಕೆ ನೀರು ನುಗ್ಗಿದೆ. ಗೋವಿನ ಕೊಪ್ಪ ಗ್ರಾಮಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಬೆಳ್ಳಂಬೆಳಿಗ್ಗೆ ನೀರು ನುಗ್ಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. 

state Aug 18, 2020, 1:25 PM IST

Minister Jagadish Shettar Inaugurate of Water Purification PlantMinister Jagadish Shettar Inaugurate of Water Purification Plant

ಧಾರವಾಡ: ಜಿಲ್ಲೆಯ ಪ್ರತಿ ಹಳ್ಳಿಗೂ ಮಲಪ್ರಭೆ ನೀರು, ಶೆಟ್ಟರ್

ಜಿಲ್ಲೆಯಲ್ಲಿ ಈಗಾಗಲೇ ಮಲಪ್ರಭಾ ಜಲಾಶಯದ ನೀರು ಪಡೆಯುತ್ತಿರುವ ಹಳ್ಳಿಗಳು ಸೇರಿದಂತೆ ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯಲು ಮಲಪ್ರಭಾ ನದಿಯ ನೀರನ್ನು ಸರಬರಾಜು ಮಾಡಲು 1300 ಕೋಟಿ ಅಂದಾಜು ಮೊತ್ತದ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

Karnataka Districts Feb 9, 2020, 7:35 AM IST

Farmer Sena Member Sangappa Shanavada Demand to Government for Flood CompensationFarmer Sena Member Sangappa Shanavada Demand to Government for Flood Compensation

ಭೀಕರ ಪ್ರವಾಹ: ಬೆಳೆಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿ

ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಬೆಣ್ಣಿಹಳ್ಳ ಮತ್ತು ಮಲಪ್ರಭಾ ನದಿಯ ಪ್ರವಾಹಕ್ಕೆ ತಾಲೂಕಿನ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಅನುಭವಿಸಿದ್ದು, ಸರ್ಕಾರ ಈ ಎಲ್ಲ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ಮೂಗನೂರ ಗ್ರಾಮದ ರೈತ ಸೇನಾ ಸದಸ್ಯ ಸಂಗಪ್ಪ ಶಾನವಾಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 
 

Karnataka Districts Jan 23, 2020, 7:22 AM IST

Actress Rupika Dance With Children in Badami in Bagalkot DistrictActress Rupika Dance With Children in Badami in Bagalkot District
Video Icon

ಪ್ರವಾಹ ಪೀಡಿತ ಗ್ರಾಮದಲ್ಲಿ ಥರ್ಡ್‌ ಕ್ಲಾಸ್ ಚಿತ್ರತಂಡ: ಮಕ್ಕಳೊಂದಿಗೆ ನಟಿ ರೂಪಿಕಾ ಡ್ಯಾನ್ಸ್‌

ಥರ್ಡ್‌ ಕ್ಲಾಸ್ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನ ದತ್ತು ಪಡೆದಿದೆ. ಗ್ರಾಮವನ್ನ ದತ್ತು ಪಡೆದು ಭಾನುವಾರ ರಾತ್ರಿ ಗ್ರಾಮದಲ್ಲೇ ವಾಸ್ತವ್ಯ ಹೂಡಿತ್ತು. ಈ ಗ್ರಾಮವು ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು. 
 

Bagalkot Jan 20, 2020, 11:00 AM IST

Fire Brigade personnel Save Young Man Life in Savadatti in Belagavi DistrictFire Brigade personnel Save Young Man Life in Savadatti in Belagavi District

ಸವದತ್ತಿ: ಈಜಲು ಹೋಗಿ ನೀರಿನ ಸುರಂಗದಲ್ಲಿ ಸಿಲುಕಿದ್ದವನ ರಕ್ಷಣೆ

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡ ಸಮೀಪದ ಮಲಪ್ರಭಾ ನದಿಯಿಂದ ಮುಂದೆ ಹೋಗುವ ಬಲದಂಡೆ ಕಾಲುವೆ ಸುರಂಗ ಮಾರ್ಗದಲ್ಲಿ ಈಜಲು ಹೋಗಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಯುವಕನೊಬ್ಬನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿ ಸುರಕ್ಷಿತವಾಗಿ ಸುರಂಗ ಮಾರ್ಗದಿಂದ ಹೊರ ತೆಗೆದಿದ್ದಾರೆ.
 

Karnataka Districts Jan 15, 2020, 10:09 AM IST

Pure Drinking Water Supply To all the villages in the districtPure Drinking Water Supply To all the villages in the district

ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ: ಸಚಿವ ಶೆಟ್ಟರ್‌

ಜಿಲ್ಲೆಯ ಎಲ್ಲಾ ಶಾಸಕರ ಆಸಕ್ತಿ ಮತ್ತು ಕಾಳಜಿಯಿಂದಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ನದಿ ಮೂಲದಿಂದ ಕುಡಿಯುವ ನೀರು ಪೂರೈಸಲು, 1500 ಕೋಟಿ ರೂ.ಗಳ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿದೆ. ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಬೃಹತ್‌, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.
 

Karnataka Districts Dec 8, 2019, 7:34 AM IST

Again 15000 Cusec Water Release to Malaprabha RiverAgain 15000 Cusec Water Release to Malaprabha River

ಮತ್ತೆ ಮಲಪ್ರಭಾ ನದಿಗೆ 15 ಸಾವಿರ ಕ್ಯುಸೆಕ್‌ ನೀರು: ಆತಂಕದಲ್ಲಿ ಜನತೆ

ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದಿಂದ ಮತ್ತೆ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ.
 

Gadag Oct 26, 2019, 3:21 PM IST

Crocodile Enter at Hiremagi Village in Hungund in Bagalkot DistrictCrocodile Enter at Hiremagi Village in Hungund in Bagalkot District

ಹುನಗುಂದದ ಹಿರೇಮಾಗಿಯಲ್ಲಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಜನತೆ

ಮಲಪ್ರಭಾ ನದಿಯಲ್ಲಿ ನೀರು ತಗ್ಗಿದ ಹಿನ್ನೆಲೆಯಲ್ಲಿ ಮೊಸಳೆಯೊಂದು ಗ್ರಾಮದಲ್ಲಿ ಒಳಗೆ ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 
 

Bagalkot Oct 26, 2019, 1:05 PM IST

Reopen Hubballi-Solapur National Highway In KonnurReopen Hubballi-Solapur National Highway In Konnur

ನರಗುಂದ: ಹುಬ್ಬಳ್ಳಿ-ಸೊಲ್ಲಾಪೂರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪ್ರಾರಂಭ

ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯ ಮಲಪ್ರಭಾ ನದಿಗೆ ನಿರ್ಮಿಸಿದ ಸೇತುವೆ ಬಳಿ ತಾತ್ಕಾಲಿಕ ರಸ್ತೆ ನದಿಗೆ ಪ್ರವಾಹ ಬಂದು ಕಿತ್ತು ಹೋಗಿ ಕಳೆದ 5 ದಿನಗಳಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿತ್ತು. ಶುಕ್ರವಾರ ನದಿಗೆ ಪ್ರವಾಹ ಬರುವುದು ಕಡಿಮೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರವಾಹಕ್ಕೆ ಕಿತ್ತು ಹೋದ ತಾತ್ಕಾಲಿಕ ರಸ್ತೆಯನ್ನು ಕಡಿ ಮತ್ತು ಗರಸ ಹಾಕಿ ರಿಪೇರಿ ಮಾಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೋಗುವ ಖಾಸಗಿ ವಾಹನ ಮತ್ತು ಬಸ್‌ಗಳ ಸಂಚಾರ ಪ್ರಾರಂಭಗೊಂಡಿವೆ.
 

Gadag Oct 26, 2019, 7:31 AM IST

3.70 Lack Cusec Water Relase from Narayanapura Basavasagara Dam3.70 Lack Cusec Water Relase from Narayanapura Basavasagara Dam

ಮುದ್ದೇಬಿಹಾಳ: ಬಸ​ವ​ಸಾ​ಗ​ರ​ ಡ್ಯಾಂನಿಂದ 3.70 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ತಾಲೂಕಿನ ಗಡಿಭಾಗದಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಮತ್ತು ಕೂಡಲ ಸಂಗಮ ಬಳಿ ಮಲಪ್ರಭಾ ನದಿಯ ನೀರು ಕೃಷ್ಣಾ ನದಿ ಮೂಲಕ ಅಪಾರ ಪ್ರಮಾಣದಲ್ಲಿ ಹರಿದು ಬರತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭರ್ತಿಯಾಗಿದ್ದ ಜಲಾಶಯವನ್ನು ಸ್ವಲ್ಪ ಮಟ್ಟಿಗೆ ಖಾಲಿ ಮಾಡಲಾಗುತ್ತಿದೆ.

Vijayapura Oct 25, 2019, 11:32 AM IST

Flood Water Level Low in Kudalasangama in Bagalkot DistrictFlood Water Level Low in Kudalasangama in Bagalkot District

ಹುನಗುಂದ: ಸಂಗಮನಾಥನ ದೇವಾಲಯ ಪ್ರವಾಹ ನೀರಿನಿಂದ ಮುಕ್ತ

ಕಳೆದ ಎರಡು ದಿನಗಳಿಂದ ಉಂಟಾಗಿದ್ದ ಮಲಪ್ರಭಾ ನದಿ ಪ್ರವಾಹದಲ್ಲಿ ಗುರುವಾರ ಇಳಿಮುಖವಾಗಿದ್ದರೂ, ತೀವ್ರ ಪರಿಸ್ಥಿತಿ ಎದುರಿಸುತ್ತಿರುವ 6 ಗ್ರಾಮಗಳ 528 ಕುಟುಂಬಗಳ 2112 ಜನರು ಇದುವರೆಗೂ ಸರ್ಕಾರ ನಿರ್ಮಿಸಿದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

Bagalkot Oct 25, 2019, 11:04 AM IST

Road Damage For Flood in Naragund in Gadag DistrictRoad Damage For Flood in Naragund in Gadag District

ನರಗುಂದ: ಪ್ರವಾಹ ರಭಸಕ್ಕೆ ಕಿತ್ತುಹೋದ ರಸ್ತೆಗಳು

ಮಲಪ್ರಭಾ ಜಲಾಶಯದಿಂದ ಭಾನುವಾರ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ತಾಲೂಕಿನ ಕೊಣ್ಣೂರ ಗ್ರಾಮದ ಪಕ್ಕದ ಸೇತುವೆ ಬಳಿ ತಾತ್ಕಾಲಿಕ ರಸ್ತೆ ಪ್ರವಾಹ ರಭಸಕ್ಕೆ ಕಿತ್ತು ಹೋಗಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸಂಪೂರ್ಣ ಬಂದ್‌ ಆಗಿವೆ.

Gadag Oct 25, 2019, 9:52 AM IST

Flood in Kudalasangama in Bagalkot DistrictFlood in Kudalasangama in Bagalkot District

ಹುನಗುಂದ: ಪ್ರವಾಹದಿಂದ ಕೂಡಲ ಸಂಗಮನಾಥ ದೇವಾಲಯಕ್ಕೆ ಬೀಗ

ಕೃಷ್ಣಾ-ಮಲಪ್ರಭಾ ನದಿಗಳ ಪ್ರವಾಹ ಮತ್ತೆ ಉಕ್ಕಿ ಬಂದಿರುವುದರಿಂದ ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಕೂಡಲಸಂಗಮದ ಸಂಗಮನಾಥನ ದೇವಾಲಯ ಎರಡನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಮಲಪ್ರಭಾ ನದಿ ನೀರು ತಾಲೂಕಿನ ಐತಿಹಾಸಿಕ ತಾಣ ಐಹೊಳೆಯ ದೇಗುಲದಲ್ಲಿಯೂ ನುಗ್ಗಿದೆ. ನದಿಗಳ ಪ್ರವಾಹದ ರುದ್ರನರ್ತನಕ್ಕೆ ಎರಡೂ ನದಿತೀರದ ಹುನಗುಂದ ತಾಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರುನುಗ್ಗಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

Bagalkot Oct 24, 2019, 10:58 AM IST