ಹುನಗುಂದ: ಸಂಗಮನಾಥನ ದೇವಾಲಯ ಪ್ರವಾಹ ನೀರಿನಿಂದ ಮುಕ್ತ
ಮಲಪ್ರಭಾ ನದಿ ಪ್ರವಾಹದಲ್ಲಿ ಇಳಿಮುಖ| ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ 6 ಗ್ರಾಮಗಳ 528 ಕುಟುಂಬಗಳ 2112 ಜನರು|ಕೂಡಲಸಂಗಮದ ಸಂಗಮನಾಥನ ದೇವಾಲಯದ ಆವರಣದಲ್ಲಿ ನುಗ್ಗಿದ್ದ ನದಿ ನೀರು ಇಳಿಮುಖ|
ಹುನಗುಂದ[ಅ.25]: ಕಳೆದ ಎರಡು ದಿನಗಳಿಂದ ಉಂಟಾಗಿದ್ದ ಮಲಪ್ರಭಾ ನದಿ ಪ್ರವಾಹದಲ್ಲಿ ಗುರುವಾರ ಇಳಿಮುಖವಾಗಿದ್ದರೂ, ತೀವ್ರ ಪರಿಸ್ಥಿತಿ ಎದುರಿಸುತ್ತಿರುವ 6 ಗ್ರಾಮಗಳ 528 ಕುಟುಂಬಗಳ 2112 ಜನರು ಇದುವರೆಗೂ ಸರ್ಕಾರ ನಿರ್ಮಿಸಿದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಂಗಲ್ಲ ಕಡಪಟ್ಟಿಗ್ರಾಮದ 130 ಕುಟುಂಬಗಳ 520 ಜನರು, ಖಜಗಲ್ಲನ 120 ಕುಟುಂಬಗಳ 480 ಜನರು, ಚಿತ್ತರಗಿಯ 210 ಕುಟುಂಬಗಳ 840 ಜನರು, ಕಮತಗಿಯ 30 ಕುಟುಂಬಗಳ 120 ಜನರು, ನಿಂಬಲಗುಂದಿಯ 20 ಕುಟುಂಬಗಳ 80 ಜನರು, ಹೂವನೂರಿನ 18 ಕುಟುಂಬಗಳ 72 ಜನರು ಇಂದಿಗೂ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ. ಬುಧವಾರ ರಾತ್ರಿಯಿಂದ ಕೂಡಲಸಂಗಮದ ಸಂಗಮನಾಥನ ದೇವಾಲಯದ ಆವರಣದಲ್ಲಿ ನುಗ್ಗಿದ್ದ ನದಿ ನೀರು ಗುರುವಾರ ಮಧ್ಯಾಹ್ನದ ಹೊತ್ತಿಗೆ ಇಳಿಮುಖವಾಗಿದೆ.
ಹುನಗುಂದ: ಪ್ರವಾಹದಿಂದ ಕೂಡಲ ಸಂಗಮನಾಥ ದೇವಾಲಯಕ್ಕೆ ಬೀಗ