ಆರ್‌ಸಿಬಿ ವಿರುದ್ಧದ ಸೋಲಿನ ಬೆನ್ನಲ್ಲೇ ವಿವಾದ ಒಂದು ಎದ್ದಿದೆ. ಧೋನಿ, ಆರ್‌ಸಿಬಿ ಆಟಗಾರರ ಜೊತೆ ಶೇಕ್‌ಹ್ಯಾಂಡ್ ಮಾಡಿಲ್ಲ ಅನ್ನೋ ಟೀಕೆ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಧೋನಿ ನೇರವಾಗಿ ರಾಂಚಿಗೆ ಬಂದಿಳಿದಿದ್ದಾರೆ.
ರಾಂಚಿ(ಮೇ.19) ಐಪಿಎಲ್ ಇತಿಹಾಸದಲ್ಲಿ ಮೇ.18ಕ್ಕೆ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಅತ್ಯಂತ ರೋಚಕ ಪಂದ್ಯ ಎಂದೇ ಗುರುತಿಸಲ್ಪಟ್ಟಿದೆ. ಪ್ಲೇ ಆಫ್ ಅವಕಾಶ, ಸಾಧ್ಯತೆ, ಪರಿಸ್ಥಿತಿ ಎಲ್ಲವೂ ಸಿಎಸ್‌ಕೆ ಪರವಾಗಿತ್ತು. ಆರ್‌ಸಿಬಿಗೆ ಯಾವುದು ಸುಲಭದ ಕೈತುತ್ತಾಗಿರಲಿಲ್ಲ. ಆದರೆ ಅದ್ಭುತ ಪ್ರದರ್ಶನದ ಮೂಲಕ ಆರ್‌ಸಿಬಿ, ಚೆನ್ನೈ ತಂಡ ಮಣಿಸಿ ಪ್ಲೇ ಆಫ್ ಪ್ರವೇಶಿಸಿದೆ. ಸೋಲಿನ ಬಳಿಕ ಧೋನಿ ವಿಡಿಯೋ ಒಂದು ಟೀಕೆಗೆ ಗುರಿಯಾಗಿದೆ. ವಾದ ವಿವಾದಗಳ ನಡುವೆ ಎಂಎಸ್ ಧೋನಿ ನೇರವಾಗಿ ರಾಂಚಿ ತಲುಪಿದ್ದಾರೆ.
ಪತ್ನಿ ಸಾಕ್ಷಿ ಧೋನಿ, ಪುತ್ರಿ ಝಿವಾ ಧೋನಿ ಜೊತೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಿಂದ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿಗೆ ಜಾರಿದ್ದಾರೆ. ರಾಂಚಿ ವಿಮಾನ ನಿಲ್ದಾಣದಲ್ಲಿ ಧೋನಿ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾದರೆ.
ಆರ್‌ಸಿಬಿ ಗೆಲುವಿನ ಬಳಿಕ ಕೊಹ್ಲಿ-ಅನುಷ್ಕಾ ಕೈ ಸನ್ನೆ ಮಾತುಕತೆಯ ಕ್ಯೂಟ್ ವಿಡಿಯೋ!
ಧೋನಿ ಆರ್‌ಸಿಬಿ ಆಟಗಾರರ ಜೊತೆ ಕೈಕುಲುಕದೇ ತೆರಳಿದ್ದಾರೆ ಅನ್ನೋ ವಿವಾದ, ಚರ್ಚೆಗಳು ನಡೆಯುತ್ತಿರುವ ನಡುವೆ ಧೋನಿ ವಿಶ್ರಾಂತಿಗೆ ಜಾರಿದ್ದಾರೆ . ಗೆಲುವಿನ ಬಳಿಕ ಎರಡು ತಂಡಗಳು ಪರಸ್ಪರ ಹ್ಯಾಂಡ್‌ಶೇಕ್ ಸಾಮಾನ್ಯ. ಆದರೆ ಎಂಎಸ್ ಧೋನಿ, ಒಂದೆರಡು ನಿಮಿಷ ಸರದಿ ಸಾಲಿನಲ್ಲಿ ನಿಂತು ಬಳಿಕ ಯೂಟರ್ನ್ ತೆಗೆದುಕೊಂಡು ನೇರವಾಗಿ ಪೆವಿಲಿಯನ್ ಸೇರಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ.
ಆರ್‌ಸಿಬಿ ರೋಚಕ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವಶಿಸಿತ್ತು. ಮೈದಾನದಲ್ಲಿ ಆರ್‌ಸಿಬಿ ತಂಡ ಸಂಭ್ರಮ ಆಚರಿಸಿತ್ತು. ಆರ್‌ಸಿಬಿ ತಂಡ ಮೈದಾನದಿಂದ ಪೆವಿಲಿಯನ್‌ತ್ತ ಆಗಮಿಸಲು ಆರಂಭಿಸಿತ್ತು. ಇತ್ತ ಸಿಎಸ್‌ಕೆ ತಂಡದ ಆಟಗಾರರು ಸಾಲಾಗಿ ನಿಂತು ಆರ್‌ಸಿಬಿ ಕ್ರಿಕೆಟಿಗರ ಶೇಕ್‌ಹ್ಯಾಂಡ್ ಮಾಡಲು ನಿಂತಿತ್ತು.
ಸಿಎಸ್‌ಕೆ ತಂಡದ ಮುಂಭಾಗದಲ್ಲಿ ಧೋನಿ ನಿಂತುಕೊಂಡಿದ್ದರು. ಆದರೆ ಕೆಲವೇ ಹೊತ್ತು ನಿಂತ ಧೋನಿ, ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೆ ಮರಳಿ ಪೆವಿಲಿಯನ್‌ನತ್ತ ತೆರಳಿದ್ದಾರೆ. ಈ ವೇಳೆ ಪೆವಿಲಿಯನ್ ಬಳಿ ಇದ್ದ ಆರ್‌ಸಿಬಿ ಸಹಾಯ ಸಿಬ್ಬಂದಿಗಳಿಗೆ ಶೇಕ್‌ಹ್ಯಾಂಡ್ ಮಾಡಿ ಪೆವಿಲಿಯನ್‌ಗೆ ವಾಪಾಸ್ಸಾಗಿರುವ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಪಂದ್ಯ ಗೆದ್ದು ಮೈದಾನದಿಂದಲೇ ರಿಷಬ್ ಶೆಟ್ಟಿಗೆ ಆರ್‌ಸಿಬಿ ವೇಗಿ ಸಲ್ಯೂಟ್, ವಿಡಿಯೋ ವೈರಲ್!
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಭಿಮಾನಿಗಳು ಗರಂ ಆಗಿದ್ದಾರೆ. ಶೇಕ್‌ಹ್ಯಾಂಡ್ ಮಾಡದೇ ಹೋಗುವಷ್ಟು ಧೋನಿ ಅಹಂಕಾರಿಯಲ್ಲ. ಸದ್ಯ ಆಡುತ್ತಿರು ಸ್ಟಾರ್ ಪ್ಲೇಯರ್ಸ್ ಧೋನಿ ಗರಡಿಯಲ್ಲಿ ಬೆಳೆದವರು, ಅವರನ್ನು ಬೆಳೆಸಿದ್ದು ಧೋನಿ. ಕೆಲ ವೈಯುಕ್ತಿಕ,ತುರ್ತು ಕಾರಣಗಳು ಇರಬಹುದು. ಹೀಗಾಗಿ ಧೋನಿ ಶೇಕ್ ಹ್ಯಾಂಡ್ ಮಾಡದೇ ತೆರಳಿದ್ದಾರೆ ಅನ್ನೋ ಆರೋಪ ಸರಿಯಲ್ಲ ಎಂದು ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
