ಪ್ರವಾಹ ಪೀಡಿತ ಗ್ರಾಮದಲ್ಲಿ ಥರ್ಡ್‌ ಕ್ಲಾಸ್ ಚಿತ್ರತಂಡ: ಮಕ್ಕಳೊಂದಿಗೆ ನಟಿ ರೂಪಿಕಾ ಡ್ಯಾನ್ಸ್‌

ಪ್ರವಾಹ ಪೀಡಿತ ಕರ್ಲಕೊಪ್ಪ ಗ್ರಾಮದಲ್ಲಿ ಥರ್ಡ್‌ ಕ್ಲಾಸ್ ಚಿತ್ರತಂಡದಿಂದ ಗ್ರಾಮ ವಾಸ್ತವ್ಯ| ಗ್ರಾಮ ದತ್ತು ಪಡೆದ ಚಿತ್ರತಂಡ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮ|ಗ್ರಾಮ ವಾಸ್ತವ್ಯದ ಮೂಲಕ ಚಿತ್ರತಂಡದಿಂದ ವಿನೂತನ ಪ್ರಯತ್ನ|

First Published Jan 20, 2020, 11:00 AM IST | Last Updated Jan 20, 2020, 11:00 AM IST

ಬಾಗಲಕೋಟೆ(ಜ.20): ಥರ್ಡ್‌ ಕ್ಲಾಸ್ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನ ದತ್ತು ಪಡೆದಿದೆ. ಗ್ರಾಮವನ್ನ ದತ್ತು ಪಡೆದು ಭಾನುವಾರ ರಾತ್ರಿ ಗ್ರಾಮದಲ್ಲೇ ವಾಸ್ತವ್ಯ ಹೂಡಿತ್ತು. ಈ ಗ್ರಾಮವು ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು. 

ಬಾದಾಮಿ ತಾಲೂಕಿನ ಕರ್ಲಕೊಪ್ಪೆ ಗ್ರಾಮ ದತ್ತು ಪಡೆದ '3rd ಕ್ಲಾಸ್' ಚಿತ್ರತಂಡ!

ಹೀಗಾಗಿ ಥರ್ಡ್‌ ಕ್ಲಾಸ್ ಚಿತ್ರತಂಡದ ನಟ ಜಗದೀಶ್ ಮತ್ತು ನಟಿ ರೂಪಿಕಾ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಹೂಡಿ ಗ್ರಾಮದ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಗ್ರಾಮದ ಮಹಿಳೆಯರೊಂದಿಗೆ ಚರ್ಚೆ ನಡೆಸಿ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಉಣಬಡಿಸಿ ತಾವು ಸಹ ಊಟ ಮಾಡಿ ಶಾಲಾ ಕೊಠಡಿಯಲ್ಲಿ ಮಲಗಿದ್ದಾರೆ.