ಬೆಂಬಿಡದ ಬೇತಾಳನಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕಿನ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದ್ದು, ಪರಿಣಾಮಕಾರಿ ನಿಯಂತ್ರಣ ಮಾಡುವಲ್ಲಿ ಹರಸಾಹಸ ಪಡುತ್ತಿರುವ ಜಿಲ್ಲಾಡಳಿತ ಮತ್ತೊಮ್ಮೆ ಲಾಕ್ಡೌನ್ಗೆ ಮೊರೆ ಹೋಗುವ ಸಾಧ್ಯತೆ ನಿಚ್ಚಳವಾಗಿದೆ.
Karnataka Districts Jul 16, 2020, 11:37 AM IST
ಅಗತ್ಯ ಸೇವೆಗಳ ಹೊರತಾಗಿ ಬೆಂಗಳೂರಿನಲ್ಲಿ ಎಲ್ಲವೂ ಬಂದ್ ಆಗಿವೆ. ಹಾಗಿದ್ರೆ ಎರಡನೇ ದಿನದಲ್ಲಿ ಬೆಂಗಳೂರು ಲಾಕ್ಡೌನ್ ಹೇಗಿದೆ ಎನ್ನುವುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
state Jul 16, 2020, 11:25 AM IST
ಮಹಾಮಾರಿ ಕೊರೋನಾ ವೈರಸ್ ಅನ್ನು ಕಟ್ಟಿಹಾಕಲು ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ಡೌನ್ ಅಗಿವೆ. ಜು.14 ರಿಂದ ಜು. 22 ರ ಬೆಳಿಗ್ಗೆ 5 ಗಂಟೆಯ ತನಕ ಲಾಕ್ ಆಗಿರಲಿದೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳನ್ನ ಲಾಕ್ಡೌನ್ ಮಾಡಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದ್ದಾರೆ.
state Jul 16, 2020, 11:14 AM IST
ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಬುಧವಾರ ರಾತ್ರಿ 8 ಗಂಟೆಯಿಂದ ಲಾಕ್ಡೌನ್ ಆರಂಭಗೊಂಡಿದೆ. ಇದು ಜು.23ರ ಬೆಳಗ್ಗೆ 5 ಗಂಟೆ ವರೆಗೆ ಮುಂದುವರಿಯಲಿದೆ. ಆದರೆ ದಿನಂಪ್ರತಿ ಬೆಳಗ್ಗೆ 8ರಿಂದ 11 ಗಂಟೆ ವರೆಗೆ 3 ಗಂಟೆ ಕಾಲ ಅಗತ್ಯ ವಸ್ತು ಖರೀದಿಗೆ ನಾಗರಿಕರಿಗೆ ಲಾಕ್ಡೌನ್ನಿಂದ ವಿನಾಯ್ತಿ ನೀಡಲಾಗಿದೆ.
Karnataka Districts Jul 16, 2020, 10:00 AM IST
ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಶೀಘ್ರವೇ ಬೆಂಗಳೂರಿಗೆ ಎರಡು ಸಾವಿರ ಗೃಹ ರಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
state Jul 16, 2020, 9:30 AM IST
ಲಾಕ್ಡೌನ್ ಪರಿಣಾಮ ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಎಲ್ಲವೂ ಬಂದ್ ಆಗಿದ್ದರಿಂದ ಸಾಮಾನ್ಯ ಜನರು, ಬಡವರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ಗೆ ಬಂದು ಊಟ, ತಿಂಡಿ ಪಡೆದುಕೊಂಡಿದ್ದಾರೆ.
state Jul 16, 2020, 9:13 AM IST
ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿ ಇರುವುದರಿಂದ ಬುಧವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಕಡಿಮೆ ಸಂಖ್ಯೆಯಲ್ಲಿ ಶಿಕ್ಷಕರು ಹಾಜರಾಗಿದ್ದಾರೆ. ಮೊದಲ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.50 ಮತ್ತು ಬೆಂ.ನಗರದಲ್ಲಿ ಶೇ.30 ರಷ್ಟು ಮೌಲ್ಯಮಾಪಕರು ಮಾತ್ರ ಹಾಜರಾಗಿದ್ದಾರೆ.
state Jul 16, 2020, 9:00 AM IST
ಬೆಂಗಳೂರಲ್ಲಿ ಇನ್ನು ಎರಡು ದಿನಗಳಲ್ಲಿ 8113 ಬೂತ್ ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಲಾಕ್ಡೌನ್ ಅವಧಿ ಮುಗಿಯುವುದರೊಳಗೆ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಯ ಎಂಟು ವಲಯಗಳ ಕೋವಿಡ್ ಉಸ್ತುವಾರಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.
Karnataka Districts Jul 16, 2020, 8:53 AM IST
ನಗರವನ್ನು ನಿದ್ರೆ ಮಾಡಿಸಬಹುದು. ಆದರೆ ಸ್ಮಶಾನ ಮಾಡಲಾಗುವುದಿಲ್ಲ. ಎಲ್ಲದಕ್ಕೂ ಲಾಠಿಯೇಟು ಪರಿಹಾರವಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಸ್.ಭಾಸ್ಕರ್ ರಾವ್ ಮಾರ್ಮಿಕವಾಗಿ ಹೇಳಿದ್ದಾರೆ.
state Jul 16, 2020, 8:47 AM IST
ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶವಿರುವುದಿಲ್ಲ. ಎಲ್ಲಾ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಬಹುದಾಗಿದೆ. ಮದುವೆ, ಅಂತ್ಯಸಂಸ್ಕಾರ ಚಟುವಟಿಕೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಮಾನದಂಡವನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಸೂಚಿಸಲಾಗಿದೆ.
Karnataka Districts Jul 16, 2020, 8:39 AM IST
ಲಾಕ್ಡೌನ್ ವೇಳೆ ಪೊಲೀಸರ ಜತೆ ಕೈ ಜೋಡಿಸುವಂತೆ ಆಯುಕ್ತ ಎಸ್.ಭಾಸ್ಕರ್ ರಾವ್ ಅವರ ಕರೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ಸಿವಿಲ್ ಪೊಲೀಸ್ ವಾರ್ಡನ್ ಹುದ್ದೆಗೆ ಸುಮಾರು 8 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ.
Jobs Jul 16, 2020, 8:30 AM IST
ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕಳೆದ ಮಾರ್ಚ್ 24ರಿಂದ ಜಾರಿ ಮಾಡಿದ್ದ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ ಬಿಎಂಟಿಸಿಯ 3,397 ಸಿಬ್ಬಂದಿಗಳಿಗೆ ವಿಶೇಷ ಭತ್ಯೆ ನೀಡಲು ನಿಗಮ ಮುಂದಾಗಿದೆ.
state Jul 16, 2020, 8:18 AM IST
ಕೊರೋನಾ ಕಡಿವಾಣಕ್ಕೆ ಜಾರಿಗೊಳಿಸಿರುವ ಲಾಕ್ಡೌನ್ಗೆ ಪೊಲೀಸರ ತುಸು ಮೃದು ಧೋರಣೆ ತಾಳಿದ್ದು, ಬುಧವಾರ ಮೊದಲ ದಿನ ನಿಯಮ ಉಲ್ಲಂಘಿಸಿದ ಸಂಬಂಧ 200 ವಾಹನಗಳನ್ನು ಜಪ್ತಿಗೊಳಿಸಿದ್ದಾರೆ.
state Jul 16, 2020, 8:02 AM IST
ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮದೇವತೆ ಆವರಣದಲ್ಲಿ ಸಭೆ ನಡೆಸಿ ಊರಿನ ಪ್ರಮುಖರು ಮಾತನಾಡಿ ಸ್ವಯಂ ಘೋಷಿತವಾಗಿ ಲಾಕ್ ಡೌನ್ಗೆ ನಿರ್ಧರಿಸಲಾಯಿತು.
Karnataka Districts Jul 16, 2020, 7:44 AM IST
ಕೊರೋನಾ ಹಾವಳಿ ತಪ್ಪಿಸಲು ಅನಿವಾರ್ಯವಾಗಿ ಎಂಟು ದಿನಗಳ ಲಾಕ್ಡೌನ್ ಘೋಷಿಸಿದರೂ ಜನತೆಗೆ ಬುದ್ಧಿ ಬರುತ್ತಿಲ್ಲ. ಲಾಕ್ಡೌನ್ ದಿನವೂ ಬೆಳಗ್ಗೆಯೇ ಜನತೆ ಗುಂಪು ಗುಂಪಾಗಿ ಖರೀದಿಗೆ ಮುಗಿಬಿದ್ದಿದ್ದು ಇಲ್ಲಿನ ಮಾರುಕಟ್ಟೆಗಳಲ್ಲಿ ಕಂಡು ಬಂತು.
Karnataka Districts Jul 16, 2020, 7:24 AM IST