ಕೊಪ್ಪಳ: ಹನುಮಸಾಗರ ಸ್ವಯಂ ಘೋಷಿತ ಲಾಕ್‌ಡೌನ್
ಕೊರೋನಾ ವೈರಸ್ ತಡೆಗೆ ಗ್ರಾಮಸ್ಥರ ನಿರ್ಧಾರ| ಹಾಲಿನ ಅಂಗಡಿ, ಔಷಧ ಅಂಗಡಿ, ದವಾಖಾನೆಗಳನ್ನು ಹೊರತು ಪಡಿಸಿ ಆ.1 ರ ವರೆಗೆ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂಗಡಿ ಮುಂಗಟ್ಟನ್ನು ವ್ಯಾಪಾರ ವಹಿವಾಟುಗಳನ್ನು ನಡೆಸಬೇಕು| ಮಧ್ಯಾಹ್ನ ಒಂದು ಗಂಟೆ ನಂತರ ಉರಿನ ಎಲ್ಲ ಅಂಗಡಿಗಳನ್ನು ಲಾಕ್‌ಡೌನ್ ಮಾಡಲಾಗುವುದು|
ಹನುಮಸಾಗರ(ಜು.16): ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮದೇವತೆ ಆವರಣದಲ್ಲಿ ಸಭೆ ನಡೆಸಿ ಊರಿನ ಪ್ರಮುಖರು ಮಾತನಾಡಿ ಸ್ವಯಂ ಘೋಷಿತವಾಗಿ ಲಾಕ್ ಡೌನ್‌ಗೆ ನಿರ್ಧರಿಸಲಾಯಿತು.
ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಾದ ಮಾಲಗಿತ್ತಿ ಹನುಮನಾಳ, ನಿಲೋಗಲ್ ಸೇರಿದಂತೆ ವಿವಿಧ ಕಡೆಗಳಲ್ಲಿನ ವ್ಯಕ್ತಿಗಳಿಗೆ ಕೊರೋನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಯಂ ಘೋಷಿಸಿತವಾಗಿ ಲಾಕ್‌ಡೌನ್‌ಗೆ ಮುಂದಾಗಿರುವುದಾಗಿ ಸಭೆಯಲ್ಲಿ ಹಾಜರಿದ್ದ ಮುಖ್ಯಸ್ಥರು ಸ್ಪಷ್ಟಪಡಿಸಿದರು. ಹಾಲಿನ ಅಂಗಡಿ, ಔಷಧ ಅಂಗಡಿ, ದವಾಖಾನೆಗಳನ್ನು ಹೊರತು ಪಡಿಸಿ ಆ.1 ರ ವರೆಗೆ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂಗಡಿ ಮುಂಗಟ್ಟನ್ನು ವ್ಯಾಪಾರ ವಹಿವಾಟುಗಳನ್ನು ನಡೆಸಬೇಕು ಮಧ್ಯಾಹ್ನ ಗಂಟೆ ನಂತರ ಉರಿನ ಎಲ್ಲ ಅಂಗಡಿಗಳನ್ನು ಲಾಕ್ ಡೌನ್ ಮಾಡಲಾಗುವುದು. ಈ ಸಮಯದಲ್ಲಿ ಯಾವುದೇ ತರಹದ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಹಾಗೂ ದಿನಬಳಕೆ ವಸ್ತುಗಳನ್ನು ನಿಗದಿತ ದರಗಳಿಗೆ ಮಾರಾಟ ಮಾಡುವ ಕುರಿತು ಚರ್ಚಿಸಲಾಗಿತ್ತು.
ಲಾಕ್‌ಡೌನ್ ಭೀತಿ: ಕೊಪ್ಪಳ ಮಾರ್ಕೆಟ್‌ನಲ್ಲಿ ಜನವೋ ಜನ..!
ಸ್ವಯಂ ಘೋಷಿತ ಲಾಕ್‌ಡೌನ್‌ಗೆ ಎಲ್ಲರ ಸಹಕಾರವನ್ನು ಸ್ಪಷ್ಟನೆ ಕೇಳಿದ ನಂತರ ನಿರ್ದಾರ ತೆಗೆದುಕೊಳ್ಳಲಾಯಿತು. ಪ್ರಮುಖರಾದ ವಿಠಶ್ರೇಷ್ಟಿನಾಗೂರ, ಮಹಾಂತೇಶ ಅಗಸಿಮುಂದಿನ್, ಮಹಾಂತೇಶ ಕುಷ್ಟಗಿ, ಹನುಮಂತಪ್ಪ ರಾಠೋಡ, ಶ್ರೀಶೈಲ ಮೋಟಗಿ, ಸೂಚಪ್ಪ ದೇವರಮನಿ, ಪ್ರಶಾಂತ ಗಡಾದ, ವಿಶ್ವನಾಥ ಕನ್ನೂರ, ಭವಾನಿಸಾ ಪಾಟೀಲ್, ಹನುಮಂತಪ್ಪ ಬಿಂಗಿ, ಶರಣಪ್ಪ ಬಾಚಲಾಪುರ, ಸಕ್ರಪ್ಪ ಬಿಂಗಿ, ಶಿಬಪ್ಪ ಕಂಪ್ಲಿ, ಮೈನುದ್ದಿನ್ ಖಾಜಿ, ಮಂಜುನಾಥ ಹುಲ್ಲೂರ, ಬಸವರಾಜ ಬಾಚಲಾಪುರ, ಶಿಪೂತ್ರಪ್ಪ ಕೋಳೂರ, ಬಸವರಾಜ ದೇವಣ್ಣನವರ, ಇತರರು ಇದ್ದರು.