Asianet Suvarna News Asianet Suvarna News
2331 results for "

ಪ್ರವಾಹ

"
Villagers Angry on BJP Leader for Election Campaign in AthaniVillagers Angry on BJP Leader for Election Campaign in Athani
Video Icon

ತಗಡಿನ ಶೆಡ್‌ನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು: ಕಕ್ಕಾಬಿಕ್ಕಿಯಾದ ಬಿಜೆಪಿ ನಾಯಕ

ಅಥಣಿ(ನ.27): ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಜಿ.ಪಂ ಸದಸ್ಯರೊಬ್ಬರನ್ನ ಗ್ರಾಮದ ಜನತೆ ಶೆಡ್‌ನಲ್ಲಿ ಕೂಡಿ ಹಾಕಿದ ಘಟನೆ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಪ್ರವಾಹ ಬಂದು ಮೂರು ತಿಂಗಳಾದ್ರೂ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ. ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಬಿಜೆಪಿ ಜಿ.ಪಂ‌ ಸದಸ್ಯ ಸಿದ್ದಪ್ಪ ಮುದಕನ್ನವರ್ ಅವರನ್ನು ತಗಡಿನ ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಇದರಿಂದ ಕೆಲಕ್ಷಣ ತಬ್ಬಿಬ್ಬಾದ ಸಿದ್ದಪ್ಪ ಮುದಕನ್ನವರ್ ಶೆಡ್‌ನಲ್ಲಿಯೇ ಕುಳಿತೇ ತಹಶೀಲ್ದಾರ್ ಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದ್ದಾರೆ. 

Karnataka Districts Nov 27, 2019, 3:40 PM IST

Karnataka By election 2019 ground report hereKarnataka By election 2019 ground report here

ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ

ಕೃಷ್ಣಾ ನದಿಯ ಪ್ರವಾಹದಬ್ಬರಕ್ಕೆ ಅಥಣಿಯ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹ ಮತ್ತು ಉಪಚುನಾವಣೆ ಇಲ್ಲಿನ ಜನರಿಗೆ ಅನಿರೀಕ್ಷಿತ. ಇಲ್ಲಿ ಪ್ರವಾಹ ಎದುರಿಸುವುದು ಸ್ಥಳೀಯರಿಗೆ ಅನಿವಾರ್ಯತೆ ಇತ್ತು. ಆದರೆ, ಉಪಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆಯ ನಡುವೆಯೇ ಈಗ ಅಖಾಡ ಸಜ್ಜುಗೊಂಡಿದೆ.

Karnataka Districts Nov 26, 2019, 4:36 PM IST

Hulimavu Lake Tragedy People Are Struggling To Lead Normal lifeHulimavu Lake Tragedy People Are Struggling To Lead Normal life

ಹುಳಿಮಾವು ಕೆರೆ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬದುಕು!

ಒಡೆದ ಹುಳಿಮಾವು ಕೆರೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು ಬದುಕು!| ಕೆರೆ ನೀರು ನುಗ್ಗಿ ಎರಡು ದಿನ ಕಳೆದರೂ ಸಹಜ ಸ್ಥಿತಿಗೆ ಬರದ ಜನಜೀವನ| ಬಿಬಿಎಂಪಿ ನಿರಾಶ್ರಿತರ ಕೇಂದ್ರದಲ್ಲಿ ಕಣ್ಣೀರು ಹಾಕುತ್ತಿದ್ದಾರೆ ಸಾವಿರಾರು ಪ್ರವಾಹ ಸಂತ್ರಸ್ತ ಜನ| ನೆರೆ ಇಳಿಮುಖವಾದರೂ ತೀರಲಿಲ್ಲ ಸ್ಥಳೀಯರ ಸಂಕಷ್ಟ| ಶಾಲಾ ಪಠ್ಯ, ಆಸ್ಪತ್ರೆಗಳ ಔಷಧ, ದಿನಸಿ ಪದಾರ್ಥ-ಎಲೆಕ್ಟ್ರಾನಿಕ್‌ ಉಪಕರಣಕ್ಕೆ ಹಾನಿ| ಹಾವು, ಕಪ್ಪೆಗಳು ಮನೆಗೆ ನುಗ್ಗಿ ಭಯದ ವಾತಾವರಣ, ಅಪಾರ ಹಾನಿ

Karnataka Districts Nov 26, 2019, 10:17 AM IST

Engagement Held at Tractor Head light in YadgirEngagement Held at Tractor Head light in Yadgir
Video Icon

ಟ್ರಾಕ್ಟರ್ ಹೆಡ್‌ಲೈಟ್ ಬೆಳಕಿನಲ್ಲಿಯೇ ನವಜೋಡಿಯ ಎಂಗೇಜ್ಮೆಂಟ್!

ಯಾದಗಿರಿ(ನ.25): ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ಟ್ರಾಕ್ಟರ್ ಹೆಡ್ ಲೈಟ್ ಬೆಳಕಿನಲ್ಲಿ ನವಜೋಡಿಯೊಂದು ಎಂಗೇಜ್ಮೆಂಟ್ ಮಾಡಿಕೊಂಡಿದೆ. ಮಾದ್ಯಾಮ ಹಾಗೂ ಸೋಮಣ್ಣ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ವಿದ್ಯುತ್ ಬೆಳಕು ಇಲ್ಲವೇ ಸೋಲಾರ್ ಬೆಳಕಿನಲ್ಲಿ ನಡೆಸಬೇಕಾಗಿತ್ತು. ಆದರೆ ,ಕೃಷ್ಣಾ ನದಿ ಪ್ರವಾಹಕ್ಕೆ ವಿದ್ಯುತ್ ಕಂಬಗಳು ಹಾನಿಯಾದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಗಡ್ಡಿ ಜನರು ಕಗ್ಗತ್ತಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಟ್ರಾಕ್ಟರ್ ಹೆಡ್ ಲೈಟ್ ಬೆಳಕಿನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. 

Karnataka Districts Nov 25, 2019, 2:56 PM IST

Laxmi Hebbalkar Angry on Disqualified MLA Mahesh KumatalliLaxmi Hebbalkar Angry on Disqualified MLA Mahesh Kumatalli

ಸಂತ ಶಿಶು‌‌ನಾಳ ಶರೀಫರ ತತ್ವ ಪದ ಹಾಡಿ ಕುಮಟಳ್ಳಿ ವಿರುದ್ಧ ಹರಿಹಾಯ್ದ ಹೆಬ್ಬಾಳಕರ್

ಅನರ್ಹ ಶಾಸಕ ಮಹೇಶ ಕುಮಟಳ್ಳಿ ಅಥಣಿ ಜನರಿಗೆ ಮೋಸ ಮಾಡಿದ್ದಾರೆ. ಅಥಣಿ ಜನರನ್ನ ಕುಮಟಳ್ಳಿ ನೀರಿನಲ್ಲಿ ಮುಳುಗಿಸಿದ್ದಾರೆ. ಪ್ರವಾಹದಲ್ಲಿ ಜನ ಸತ್ತಾಗ ಕುಮಟಳ್ಳಿ ಬರಲಿಲ್ಲ, ಈಗ ಮತ ಕೇಳೋಕೆ ಬರುತ್ತಿದ್ದಾರೆ. ಕುಮಟಳ್ಳಿ ನಿಮಗೆ ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನಿಮ್ಮ ದ್ವೇಷವನ್ನ ತೀರಿಸಿಕೊಳ್ಳಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮತದಾರರಿಗೆ ಕರೆ ನೀಡಿದ್ದಾರೆ. 
 

Karnataka Districts Nov 25, 2019, 2:16 PM IST

hulimavu lake protective wall collapses floods houses inundates roadshulimavu lake protective wall collapses floods houses inundates roads
Video Icon

Video: ಒಡೆದ ಬೆಂಗಳೂರಿನ ಹುಳಿಮಾವು ಕೆರೆ: ಮನೆಗಳಿಗೆ ನುಗ್ಗಿದ ನೀರು

 ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಘಟನೆ ನಡೆದಿದೆ. ಕೆರೆ ಒಡೆದಿದ್ದರಿಂದ ದೊಡ್ಡ ಅವಾಂತರ ಸೃಷ್ಟಿಯಾಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ.  ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಸಂಡೇ ರಜೆ ಮೂಡ್ ನಲ್ಲಿದ್ದ ನಿವಾಸಿಗಳು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಳೆಗಾಲವಿಲ್ಲ ಏನಿಲ್ಲ. ಆದರೂ ಕರೆ ಒಡೆದಿಯಲ್ಲಾ..?  ವಿಡಿಯೋನಲ್ಲಿ ನೋಡಿ...

Bengaluru-Urban Nov 24, 2019, 6:22 PM IST

Started the Survey for Relocation of Historical Sites in Bagalkot DistrictStarted the Survey for Relocation of Historical Sites in Bagalkot District

ಬಾಗಲಕೋಟೆ: ಐತಿಹಾಸಿಕ ತಾಣಗಳ ಸ್ಥಳಾಂತರಕ್ಕೆ ಸರ್ವೆ ಕಾರ್ಯ ಶುರು!

ಪದೇ ಪದೇ ಪ್ರವಾಹಕ್ಕೆ ತುತ್ತಾಗಿ, ಇತ್ತ ಇರಲು ಆಗದೇ, ಅತ್ತ ಹೋಗಲು ಆಗದೇ ಅತಂತ್ರವಾಗಿದ್ದ ಜಿಲ್ಲೆಯ ಐತಿಹಾಸಿಕ ಐಹೊಳೆ, ಪಟ್ಟದಕಲ್ಲು ಸೇರಿ ಬಾದಾಮಿಯ ಕೆಲವು ಮನೆಗಳ ಸ್ಥಳಾಂತರದ ಸರ್ವೆ ಕಾರ್ಯ ಆರಂಭಿಸುವ ಮೂಲಕ ಸರ್ಕಾರ ಸ್ಥಳಾಂತರಕ್ಕೆ ಮುಂದಾಗಿದೆ. 
 

Karnataka Districts Nov 21, 2019, 2:47 PM IST

Villagers Boycot Athani ByElection for not give flood compensationVillagers Boycot Athani ByElection for not give flood compensation

ಅಥಣಿ ಉಪ ಚುನಾವಣೆ ಬಹಿಷ್ಕರಿಸಿದ ಕೃಷ್ಣಾತೀರದ ಜನ

ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗದ ಹಿನ್ನಲೆಯಲ್ಲಿ ಕೃಷ್ಣಾತೀರದ ಜನ ಅಥಣಿ ಉಪ ಚುನಾವಣೆಗೆ  ಬಹಿಷ್ಕಾರ ಹಾಕಿದ್ದಾರೆ. 
 

Karnataka Districts Nov 20, 2019, 10:08 AM IST

Rain Drops But Flood Water Not Went Down In HubliRain Drops But Flood Water Not Went Down In Hubli

ಮಳೆ ನಿಂತು ಒಂದೂವರೆ ತಿಂಗಳಾದರೂ ನೆರೆ ಇಳಿದಿಲ್ಲ!

ಮಳೆ ನಿಂತು ಒಂದೂವರೆ ತಿಂಗಳಾದರೂ ನೆರೆ ಇಳಿದಿಲ್ಲ| ಎಪಿಎಂಸಿ ಮಳಿಗೆಯಲ್ಲಿ 12 ಕುಟುಂಬಗಳ ವಾಸ್ತವ್ಯ| ಕುಂದಗೋಳ ತಾಲೂಕಿನ ಸಂಶಿ ಗ್ರಾಮಸ್ಥರ ಪಡಿಪಾಟಲು

Karnataka Districts Nov 20, 2019, 9:04 AM IST

Venice Faces Worst Floods in 50 YearsVenice Faces Worst Floods in 50 Years

ಬೈಕ್, ಕಾರು, ಬಸ್ಸು, ರೈಲು ಇಲ್ಲ, ಬರೀ ದೋಣಿ: ತೇಲುವ ನಗರ ಮುಳುಗಿದಾಗ!

ನೀರಿನ ಮೇಲೆ ತೇಲುವ ನಗರಿ, ಕಾಲುವೆಗಳ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಇಟಲಿಯ ಸುಂದರ ವೆನಿಸ್‌ ನಗರವೀಗ ಸಮುದ್ರದ ಉಬ್ಬರ ಹಾಗೂ ಭಾರೀ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ನೂರಾರು ಕೋಟಿ ರು. ಹಾನಿಯಾಗಿದೆ. ಕಳೆದ 50 ವರ್ಷದಲ್ಲಿಯೇ ಮೊದಲ ಬಾರಿಗೆ ನೀರಿನ ಮಟ್ಟಈ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ವೆನಿಸ್‌ ನಗರವು ಸಮುದ್ರ ತೀರದ ಇನ್ನಿತರ ನಗರದಂತಲ್ಲ. ಈ ನಗರ ಇರುವುದೇ ನೀರಿನಲ್ಲಿ. ವೆನಿಸ್‌ಗೆ ಈಗ ಬಂದ ಗತಿಯೇ ಜಗತ್ತಿನ ಇನ್ನಿತರ ಸಮುದ್ರತೀರದ ನಗರಗಳಿಗೂ ಮುಂದೆ ಬರಲಿದೆಯೇ? ಸಮಗ್ರ ವಿವರ ಇಲ್ಲಿದೆ.

International Nov 16, 2019, 3:53 PM IST

ground Water Level Increases People Are getting Water in 32 Feetground Water Level Increases People Are getting Water in 32 Feet

ಅಂತರ್ಜಲ ಗಣನೀಯ ಏರಿಕೆ: ಅರ್ಧಕ್ಕರ್ಧ ತಾಲೂಕಲ್ಲಿ ಈಗ 32 ಅಡಿಗೇ ನೀರು!

ಅರ್ಧಕ್ಕರ್ಧ ತಾಲೂಕಲ್ಲಿ ಈಗ 32 ಅಡಿಗೇ ನೀರು!| ಭಾರಿ ಮಳೆ: ರಾಜ್ಯದಲ್ಲಿ ಅಂತರ್ಜಲ ಗಣನೀಯ ಏರಿಕೆ| ಜೂನ್‌ ವೇಳೆ 158 ತಾಲೂಕಿನಲ್ಲಿ ಕುಸಿದಿದ್ದ ಅಂತರ್ಜಲ ಮಟ್ಟ| ಅಕ್ಟೋಬರ್‌ ಅಂತ್ಯಕ್ಕೆ 87 ತಾಲೂಕಿನಲ್ಲಿ ಅಂತರ್ಜಲ ಮರುಭರ್ತಿ

state Nov 16, 2019, 7:47 AM IST

State Government Did not Release Fund to New School Buildings in HukkeriState Government Did not Release Fund to New School Buildings in Hukkeri

ಹುಕ್ಕೇರಿ: ಹೊಸ ಶಾಲೆಗಳ ಕಟ್ಟಡಕ್ಕಿಲ್ಲ ಅನುದಾನ!

ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ನೆರೆಯಿಂದ ಹುಕ್ಕೇರಿ ತಾಲೂಕಿನಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಬಂದಿದೆ. ಆದರೆ, ಹೊಸದಾಗಿ 158 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಶೀಘ್ರದಲ್ಲಿ ಇಂತಹ ಶಾಲೆಗಳಿಗೆ ಕಟ್ಟಡ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. 
 

Belagavi Nov 14, 2019, 12:18 PM IST

Differently Abled Kerala Artist Donates Flood Relief Fund To CM Pinarayi VijayanDifferently Abled Kerala Artist Donates Flood Relief Fund To CM Pinarayi Vijayan

ಪಿಣರಾಯಿ ಮನಗೆದ್ದ ವಿಶೇಷ ಚೇತನ: ಪ್ರವಾಹ ಪೀಡಿತರಿಗೆ ಕಲಾವಿದನ ಸಹಾಯಧನ!

ಭೀಕರ ಪ್ರವಾಹದಿಂದ ನಲುಗಿರುವ ಕೇರಳದಲ್ಲಿ, ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ವಿಶೇಷ ಚೇತನ ಕಲಾವಿದನೋರ್ವ ದೇಣಿಗೆ ನೀಡಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿನ ಅಲತ್ತೂರಿನ ವಿಶೇಷ ಚೇತನ ಕಲಾವಿದ ಪ್ರಣವ್ ಬಾಲಸುಬ್ರಮಣ್ಯನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

India Nov 12, 2019, 6:33 PM IST

MLA Satish Jarakiholi hastiness of Meeting in HukkeriMLA Satish Jarakiholi hastiness of Meeting in Hukkeri

ತರಾತುರಿಯಲ್ಲಿ ಸಭೆ ನಡೆಸಿ ಹೊರನಡೆದ ಶಾಸಕ ಸತೀಶ ಜಾರಕಿಹೊಳಿ

 ಅತ್ತ ಗೋಕಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಶೋಕ ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಲ್ಲಿ ಪ್ರವಾಹ ಪರಿಶೀಲನೆ ಸಭೆ ಆಯೋಜಿಸಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. 
 

Belagavi Nov 12, 2019, 11:20 AM IST

Crop relief fund to be credited directly to beneficiary bank account through aadhar numberCrop relief fund to be credited directly to beneficiary bank account through aadhar number

ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯು 2018-19 ನೇ ಸಾಲಿನ ಹಿಂಗಾರಿನಲ್ಲಿ ಬರದಿಂದಾಗಿ ಹಾಗೂ ಆಗಸ್ಟ್‌ 2019 ರಲ್ಲಿ ಉಂಟಾದ ಪ್ರವಾಹದಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಇನ್‌-ಪುಟ್‌ ಸಬ್ಸಿಡಿಯನ್ನು (ಪರಿಹಾರ ಸಹಾಯ ಧನ) ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಆಧಾರ್‌ ಸಂದಾಯ ವ್ಯವಸ್ಥೆ ಮೂಲಕ ಸಂದಾಯ ಮಾಡುತ್ತಿದೆ.

 

Mysore Nov 11, 2019, 2:53 PM IST