Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಪುತ್ರನಿಗೆ ಗೊತ್ತಿತ್ತಾ ಮುಡಾ ಸೈಟಿನ ಮಹಾ ಸತ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ ತಮ್ಮ ನಿರಪರಾಧಿತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅವರ ಮಗನ ಪಾತ್ರವೇನು ಎಂಬ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯನವರ ಮಗನಿಗೆ ಈ ಹಗರಣದ ಕುರಿತು ತಿಳಿದಿತ್ತೇ?

First Published Sep 27, 2024, 6:40 PM IST | Last Updated Sep 27, 2024, 6:40 PM IST

ಬೆಂಗಳೂರು (ಸೆ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮಾತಿಗೂ ಲಾ ಪಾಯಿಂಟ್ ಹಾಕೋ ವಕೀಲ ರಾಮಯ್ಯ ಆಗಿದ್ದಾರೆ. ಸಂಘರ್ಷದ ಅಖಾಡದಲ್ಲಿ ಸಟೆದು ನಿಲ್ಲುವ ಸಮರ ರಾಮಯ್ಯ, ತಾನು ಹೋಗುತ್ತಿರುವ ದಾರಿ ಸರಿಯಿಲ್ಲ ಎಂಬುದು ಗೊತ್ತಿದ್ದರೂ ತಪ್ಪು ದಾರಿಗೆ ಹೋದ್ರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಥವಾ ಯಾರಾದರೂ ಸಿಎಂ ಸಿದ್ದರಾಮಯ್ಯ ಅವರ ದಾರಿ ತಪ್ಪಿಸಿದರೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಕಳೆದ 8 ವರ್ಷಗಳ ಹಿಂದೆ ಸಾವಿಗೀಡಾದ ಸಿದ್ದರಾಮಯ್ಯನವರ ಮಗನಿಗೆ ಗೊತ್ತಿತ್ತಾ ಈ ಮೂಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಟು ಸತ್ಯ? ಮೈಸೂರು ಸೈಟು ಹಂಚಿಕೆ ವಿಷಯವನನ್ನು ಮಗನ ಜವಾಬ್ದಾರಿಗೆ ಬಿಟ್ಟು ಮೈ ಮರೆತಿದ್ದೇ ತಪ್ಪಾಯ್ತಾ.? ಸೋದರಮಾವನಿಂದ ತಾಯಿಗೆ ದಾನವಾಗಿ ಜಮೀನು, ಕುಂಕುಮ ಭಾಗ್ಯ. ಇದರ ಹಿಂದಿತ್ತಾ ಸಿದ್ದು ಪುತ್ರ ರಾಕೇಶನ ಕೈವಾಡ? ತಮ್ಮವರನ್ನು ನಂಬಿದ್ದೇ ಮುಖ್ಯಮಂತ್ರಿಗಳಿಗೆ ಮುಳುವಾಯ್ತಾ? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಮುಡಾ, ಮುಚ್ಚಿ ಹೋದ ಸತ್ಯ?

ಮುಡಾ ಹಗರಣದಲ್ಲಿ ಎಫ್ಐಆರ್: ಸಿಎಂ ಸಿದ್ದರಾಮಯ್ಯ ಎ1, ಪಾವರ್ತಿ ಎ2 ಮತ್ತು ಭಾಮೈದ ಮಲ್ಲಿಕಾರ್ಜುನ ಎ3

ಮುಡಾ ಹಗರಣದಲ್ಲಿ ತಾವು ನಿರಪರಾಧಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಅಂತ ಸಿದ್ದರಾಮಯ್ಯ ಖಂಡಾತುಂಡವಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ತಪ್ಪು ಇಲ್ಲ ಅಂದ್ರೆ, ತಪ್ಪು ಮಾಡಿದ್ದು ಯಾರು.? ಕಳೆದ 8 ವರ್ಷಗಳ ಹಿಂದೆ ಸತ್ತಮಗನಿಗೆ ಈ ಮುಡಾ ಅಕ್ರಮದ ಮಹಾ ಸತ್ಯ ಗೊತ್ತಿತ್ತಾ.? ಆ ಸತ್ಯ ರಾಕೇಶ್ ಸಾವಿನೊಂದಿಗೆ ಸಮಾಧಿಯಾಗಿ ಹೋಗಿತ್ತಾ.? ಈಗ ಎದ್ದು ಕೂತಿರೋ ಅದೇ ಸತ್ಯ ಸಿದ್ದರಾಮಯ್ಯನವರ ಸಿಂಹಾಸವನ್ನು ಅಲುಗಾಡಿಸುತ್ತಿದೆ.

ಮಗ ಮುಚ್ಚಿಟ್ಟಿದ್ದ ಸತ್ಯವೇ ಸಿದ್ದರಾಮಯ್ಯನವರ ಸಿಂಹಾಸನಕ್ಕೆ ಕುತ್ತು ತಂಡಿದೆ. ಮುಡಾ ಹಗರಣದಲ್ಲಿ ಸಿಂಹಾಸನ ಅಲುಗಾಡ್ತಾ ಇರೋದು ಒಂದು ಕಡೆಯಾದರೆ, ಸಿದ್ದರಾಮಯ್ಯನವರ ಶುದ್ಧ ರಾಜಕೀಯ ಚರಿತ್ರೆಗೂ ದೊಡ್ಡ ಕಳಂಕ ಅಂಟಿಕೊಂಡಿದೆ. ಹಾಗಾದರೆ ಇದನ್ನು ಸಿದ್ದರಾಮಯ್ಯ ಹೇಗೆ ಎದುರಿಸುತ್ತಾರೆ.? ಸಿದ್ದು ಮುಂದಿರೋ ದಾರಿಗಳೇನು.? ಸವಾಲುಗಳೇನೇನು..? ಇಲ್ಲಿವೆ ನೋಡಿ.

Video Top Stories