ದರ್ಶನ್ ಮುಖದಲ್ಲಿ ಹೊಸ ಆಶಾ ಭಾವನೆ: ನಗು ಮುಖದ ದಾಸನಾದ ಕೊಲೆ ಆರೋಪಿ!
ಇಷ್ಟು ದಿನ ಫುಲ್ ಟೆನ್ಷನ್ನಲ್ಲೇ ಇದ್ದ ದರ್ಶನ್ ಮುಖದಲ್ಲಿ ಮಂದಹಾಸ ಮೂಡಿದೆ. ದಾಸ ಈಗ ನಗುಮುಖದ ಸರದಾರನಾಗಿ ಬಳ್ಳಾರಿ ಜೈಲು ತುಂಬಾ ಓಡಾಡ್ಕೊಂಡಿದ್ದಾರೆ. ಜೊತೆಗಾರರಿಗೆ ಬೇಲ್ ಸಿಕ್ಕ ಕೂಡ್ಲೆ ದರ್ಶನ್ ಮುಖದಲ್ಲಿ ಹೊಸ ಆಶಾ ಭಾವನೆ ಮೂಡಿದೆ.
ಕಳೆದ ನಾಲ್ಕೈದು ದಿನದಿಂದ ನಟ ದರ್ಶನ್ ಮುಖದಲ್ಲಿ ಮಂದಹಾಸ ಮೂಡಿದೆ. ಅಮ್ಮ ಬಂದು ಹೋದ ಮೇಲೆ ದರ್ಶನ್ ನಗು ನಗುತ್ತಾ ಇದ್ದಾರೆ. ಜೈಲು ಸಿಬ್ಬಂಧಿ ಜೊತೆ ಖುಷಿ ಖುಷಿಯಾಗಿ ಮಾತಾಡ್ಕೊಂಡು ಹಾಯಾಗಿದ್ದಾರಂತೆ. ಆ ಕಡೆ ಪತಿಯನ್ನ ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಳ್ಳಲು ಪತ್ನಿ ವಿಜಯಲಕ್ಷ್ಮಿ ಹೆಲಿಕ್ಯಾಪ್ಟರ್ಅನ್ನ ಬುಕ್ ಮಾಡಿದ್ದಾರಂತೆ. ಹಾಗಾದ್ರೆ ಏನಿದು ದಾಸನ ಹೊಸ ಕಥೆ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮ್ಯಾಟರ್. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆದ್ರೆ ಎಲ್ಲರ ದೃಷ್ಟಿ ನೆಟ್ಟಿರೋದು ದರ್ಶನ್ ಹಾಗು ಪವಿತ್ರಾ ಗೌಡ ಜಾಮೀನು ಮೇಲೆ. ದರ್ಶನ್ಗೆ ಬೇಲ್ ಸಿಗ್ಲಿ ಅಂತ ಹರೆ ಕಟ್ಟಿದ್ದಾಗಿದೆ. ದೇವಸ್ಥಾನ ಸುತ್ತಿದ್ದು ಆಗ್ತಿದೆ.
ಬೇಲ್ಗಾಗಿ ಎಲ್ಲಾ ಪ್ರಯತ್ನಗಳು ನಡೀತಿವೆ. ಇದರ ಮಧ್ಯೆ ಇಷ್ಟು ದಿನ ಫುಲ್ ಟೆನ್ಷನ್ನಲ್ಲೇ ಇದ್ದ ದರ್ಶನ್ ಮುಖದಲ್ಲಿ ಮಂದಹಾಸ ಮೂಡಿದೆ. ದಾಸ ಈಗ ನಗುಮುಖದ ಸರದಾರನಾಗಿ ಬಳ್ಳಾರಿ ಜೈಲು ತುಂಬಾ ಓಡಾಡ್ಕೊಂಡಿದ್ದಾರೆ. ಜೊತೆಗಾರರಿಗೆ ಬೇಲ್ ಸಿಕ್ಕ ಕೂಡ್ಲೆ ದರ್ಶನ್ ಮುಖದಲ್ಲಿ ಹೊಸ ಆಶಾ ಭಾವನೆ ಮೂಡಿದೆ. ಈ ಕೊಲೆ ಕೇಸ್ ನಲ್ಲಿ ಮೂವರಿಗೆ ಜಾಮೀನು ಸಿಗುತ್ತಲೇ ದರ್ಶನ್ ಗೆ ಕೊಂಚ ರಿಲೀಫ್ ಸಿಕ್ಕಿದೆ. ತನಗೂ ಈ ಕೇಸ್ ನಲ್ಲಿ ಜಾಮೀನು ಸಿಕ್ಕುತ್ತೆ ಅನ್ನೋ ಕನಸು ಚಿಗುರಿದೆ. ದರ್ಶನ್ ಹಾಕಿರೋ ಜಾಮೀನು ಅರ್ಜಿಯಲ್ಲಿ ದರ್ಶನ್ ಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಯಾವುದೆ ಸಂಬಂಧವಿಲ್ಲ ಅಂತ ಉಲ್ಲೇಖಿಸಲಾಗಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ ಅಂದ್ರೆ ಸೆಪ್ಟೆಂಬರ್ 27ಕ್ಕೆ ನಡೆಲಿದ್ದು, ದಾಸನಿಗೆ ಬೇಲೆ ಸಿಕ್ಕೇ ಸಿಗುತ್ತೆ ಅನ್ನೋ ನಂಬಿ ಫ್ಯಾನ್ಸ್ ಬಳಗದಲ್ಲಿ ಘಾಡವಾಗಿದೆ.
ಜೈಲಿನಲ್ಲಿ ನಗು ಮುಖದ ದಾಸನಾಗಿರೋ ನಟ ದರ್ಶನ್ ಜಾಮೀನಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ಜೈಲು ವಾಸ ಇನ್ನೆಷ್ಟು ದಿನ. ಎಲ್ಲದಕ್ಕು ಒಂದು ಅಂತ್ಯ ಅಂತ ಇದ್ದೇ ಇರುತ್ತೆ ಅಲ್ವಾ.? ಇನ್ನೊಂದು ಐದು ಹತ್ತು ದಿನ ಒಳಗಿರಬಹುದಷ್ಟೇ ಅಂತ ಹೇಳಿಕೊಳ್ಳುತ್ತಿದ್ದಾರಂತೆ ದರ್ಶನ್. ಇದರ ನಡುವೆ ಬಳ್ಳಾರಿ ಜೈಲಿನಿಂದ ದರ್ಶನ್ ಬೆಂಗಳೂರಿಗೆ ಯಾವ ಮಾರ್ಗದಲ್ಲಿ ಬರ್ತಾರೆ.. ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ. ಅದಕ್ಕೆ ಉತ್ತರ ದರ್ಶನ್ ಹಲಿಕ್ಯಾಪ್ಟರ್ನಲ್ಲಿ ಬೆಂಗಳೂರಿಗೆ ಹೋಗುತ್ತಾರೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮಿ ಹೆಲಿಕ್ಯಾಪ್ಟರ್ ಬುಕ್ ಮಾಡಿದ್ದಾರೆ ಅನ್ನೋ ಬಿಸಿ ಬಿಸಿ ಸುದ್ದಿ ಬಿಕರಿ ಆಗಿದೆ. ಜೈಲಿನಲ್ಲಿರೋ ನಟ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಬಿಡುಗಡೆ ಆಗುವ ದಿನ ಅಭಿಮಾನಿಗಳು ಮೆರವಣಿಗೆ ಮೂಲಕ ಮನೆಗೆ ಕರೆತರುತ್ತಾರೆ.
ಹಾಗಾಗಿ ಮನೆ ತಲುಪಲು ಒಂದು ದಿನ ಬೇಕಾಗುತ್ತದೆ ಎಂದು ನಿರ್ದೇಶಕ ಮಹೇಶ್ ವೈಭವಿಕರಿಸಿ ಹೇಳಿದ್ದ. ಆದ್ರೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿ ತಿಂಗಳಾಗುತ್ತಾ ಬಂತು. ಈಗ ಬಳ್ಳಾರಿಯಿಂದ ದರ್ಶನ್ ಬಿಡುಗಡೆ ಆದ್ರೆ ಭದ್ರತೆ ದೃಷ್ಟಿಯಿಂದಲೂ ದರ್ಶನ್ನ ಹೆಲಿಕಾಪ್ಟರ್ನಲ್ಲಿ ಕರೆತರುವುದೇ ಲೇಸು ಎಂದು ಆಪ್ತರು ತೀರ್ಮಾನಿಸಿದ್ದಾರಂತೆ. ಒಂದ್ ಕಡೆ ದರ್ಶನ್ ಬೇಲ್ ನಿರೀಕ್ಷೆ, ಮತ್ತೊಂದ್ ಕಡೆ ದಾಸನಿಗೆ ಐಟಿ ಶಾಕ್ ಕೊಟ್ಟಿದೆ. ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವುದಕ್ಕೆ ಲಕ್ಷ ಲೆಕ್ಕದಲ್ಲಿ ಹಣ ಬಳಕೆಯಾಗಿದ್ದರ ಬಗ್ಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಒಟ್ನಲ್ಲಿ ದರ್ಶನ್ಗೆ ಬೇಲ್ ಸಿಗೋ ನಿರೀಕ್ಷೆ ಒಂದ್ ಕಡೆ ಆದ್ರೆ ಮತ್ತೊಂದು ಕಡೆ ಕೊಲೆ ಕೇಸ್ ಮುಚ್ಚಿ ಹಾಕಲು 84 ಲಕ್ಷ ರೂಪಾಯಿ ಹಣದ ವ್ಯವಹಾರದ ಟೆನ್ಷನ್ ಕೂಡ ಎದುರಾಗಿದೆ.