ಭೀಕರ ಪ್ರವಾಹದಿಂದ ನಲುಗಿರುವ ಕೇರಳ| ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ವಿಶೇಷ ಚೇತನ ಕಲಾವಿದ ಧನಸಹಾಯ| ಅಲತ್ತೂರಿನ ವಿಶೇಷ ಚೇತನ ಕಲಾವಿದ ಪ್ರಣವ್ ಬಾಲಸುಬ್ರಮಣ್ಯನ್ ದೇಣಿಗೆ| ಟ್ವಿಟ್ ಮೂಲಕ ಸಂತಸ ವ್ಯಕ್ತಪಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್| ಪಿಣರಾಯಿ ಸರಳತೆಗೆ ನೆಟ್ಟಿಗರು ಫಿದಾ|

ತಿರುವನಂತಪುರಂ(ನ.12): ಭೀಕರ ಪ್ರವಾಹದಿಂದ ನಲುಗಿರುವ ಕೇರಳದಲ್ಲಿ, ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ವಿಶೇಷ ಚೇತನ ಕಲಾವಿದನೋರ್ವ ದೇಣಿಗೆ ನೀಡಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿನ ಅಲತ್ತೂರಿನ ವಿಶೇಷ ಚೇತನ ಕಲಾವಿದ ಪ್ರಣವ್ ಬಾಲಸುಬ್ರಮಣ್ಯನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

ಈ ಕುರಿತು ಖುದ್ದು ಪಿಣರಾಯಿ ವಿಜಯನ್ ಟ್ವಿಟ್ ಮಾಡಿದ್ದು, ಕಲಾವಿದ ಪ್ರಣವ್ ಅವರನ್ನು ಭೇಟಿಯಾಗಿದ್ದು ತುಂಬ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

Scroll to load tweet…

ಹುಟ್ಟಿನಿಂದಲೇ ತಮ್ಮ ಎರಡೂ ಕೈಗೊಳನ್ನು ಹೊಂದಿರದ ಪ್ರಣವ್ ತಮ್ಮ ಕಾಲಿನಿಂದಲೇ ಪೇಂಟಿಂಗ್ ಮಾಡಿ ಜನಮನ್ನಣೆ ಗಳಿಸಿದ್ದಾರೆ.

ಇನ್ನು ಕಲಾವಿದ ಪ್ರಣವ್ ಅವರನ್ನು ಸಿಎಂ ಪಿಣರಾಯಿ ವಿಜಯನ್ ಬರಮಾಡಿಕೊಂಡ ರೀತಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಿಎಂ ಸರಳ ಗುಣ ಇಷ್ಟವಾಯಿತು ಎಂದು ಕೊಂಡಾಡಿದ್ದಾರೆ.