ಲಾಕ್ಡೌನ್ ವೇಳೆ ಅನವಶ್ಯಕ ತಿರುಗಾಟಕ್ಕೆ ನಿರ್ಬಂಧ ವಿದಿಸಲಾಗಿದೆ. ದಾವಣಗೆರೆಯಲ್ಲಿ ಯುವಕ ಹಾಗೂ ಯುವತಿ ಬೈಕ್ನಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮಾಸ್ಕ್ ಧರಿಸಿದೆ, ಹೆಲ್ಮೆಟ್ ಧರಿಸದೆ ಇವರ ಸುತ್ತಾಟ ನಡೆಸುತ್ತಿದ್ದರು. ಗುಂಡಿ ವೃತ್ತದಲ್ಲಿ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಕ್ರೈಂ ವಿಭಾಗದ ಪಿಎಎಸ್ಐ ಚಿದಾನಂದ ಜೊತೆ ವಾಗ್ವಾದ ನಡೆಸಿದ ಯುವತಿ ಫೈನ್ ಕಟ್ಟುವುದಿಲ್ಲ ಎಂದಿದ್ದಾರೆ. ಪೊಲೀಸರ ಎಚ್ಚರಿಕೆಗೂ ಯುವತಿ ಕ್ಯಾರೆ ಎಂದಿಲ್ಲ.
Davanagere Jul 26, 2020, 8:32 PM IST
ಆಗಸ್ಟ್ನಲ್ಲೂ ಸಂಡೇ ಲಾಕ್ಡೌನ್ ಮುಂದುವರಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಲಾಕ್ಡೌನ್ ಮುಗಿತು ಎಂದುಕೊಂಡವರಿಗೆ ಬಿಗ್ ಶಾಕ್ ಆದಂತಾಗಿದೆ.
state Jul 26, 2020, 6:09 PM IST
ಇಂದು ಸಂಡೇ ಲಾಕ್ಡೌನ್. ಸುಖಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಲಾಠಿ ಏಟು ಬಿದ್ದಿದೆ. ಇಂದು ಲಾಕ್ಡೌನ್ ಇದೆ. ಮನೆಯಲ್ಲಿಯೇ ಇರಬೇಕು. ಆದರೂ ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಕಲ್ಬುರ್ಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
state Jul 26, 2020, 5:58 PM IST
ಜುಲೈ 31ಕ್ಕೆ ಅನ್ಲಾಕ್ 2.0 ಅಂತ್ಯವಾಗಲಿದೆ. ಆಗಸ್ಟ್ ತಿಂಗಳಿಂದ ಅನ್ಲಾಕ್ 3.0 ಆರಂಭಗೊಳ್ಳಲಿದೆ. ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕೆಲ ಕ್ಷೇತ್ರಗಳ ನಿರ್ಬಂಧ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಕೆಲ ಕ್ಷೇತ್ರಗಳಿಗೆ ವಿನಾಯಿತಿ ಸಿಗುತ್ತಿದೆ.
India Jul 26, 2020, 5:27 PM IST
ಸರ್ವಾಧಿಕಾರಿ ನಾಡಿಗೂ ಪ್ರವೇಶಿಸಿತಾ ಮಹಾಮಾರಿ ಎಂಟ್ರಿ| ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಅಲ್ಲಿ ಶಂಕಿತ ಸೋಂಕು ಪತ್ತೆ| ಗರಿಷ್ಠ ತುರ್ತು ವ್ಯವಸ್ಥಿತ ಲಾಕ್ ಡೌನ್ ಜಾರಿಗೆ ತಂದು ಮುನ್ನೆಚ್ಚರಿಕೆ ವಹಿಸಲು ಕಿಮ್ ಆದೇಶ
International Jul 26, 2020, 3:11 PM IST
ಭಾನುವಾರದ ಲಾಕ್ಡೌನ್ಗೆ ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗದೇ ಇದ್ದರೂ ಜಿಲ್ಲಾ ಕೇಂದ್ರಗಳಲ್ಲಿ ತಕ್ಕಮಟ್ಟಿಗೆ ವ್ಯಕ್ತವಾಗಿದೆ. ಯಾವ್ಯಾವ ಜಿಲ್ಲೆಗಳಲ್ಲಿ, ಹೇಗೆಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ? ಇಲ್ಲಿದೆ ನೋಡಿ
state Jul 26, 2020, 1:59 PM IST
ಸಂಡೇ ಲಾಕ್ಡೌನ್ ಹೆಸರಿಗಷ್ಟೇ ಸೀಮಿತವಾಗಿದೆ. ಆಟೋ ಚಾಲಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈ ಬಾರಿ ಲಾಕ್ಡೌನ್ ಕಟ್ಟುನಿಟ್ಟಾಗಿರತ್ತೆ. ಯಾರು ನಿಯಮಗಳನ್ನು ಉಲ್ಲಂಘಿಸ್ತಾರೋ ಅವರ ವಿರುದ್ಧ ಕೇಸ್ ಹಾಕ್ತೀವಿ ಅಂತ ಗೃಹ ಸಚಿವರು ಹೇಳಿದ್ದರು. ಆದರೆ ಲಾಕ್ಡೌನ್ ಮಾತ್ರ ನೆಪ ಮಾತ್ರಕ್ಕಷ್ಟೇ ಎನ್ನುವಂತಾಗಿದೆ.
state Jul 26, 2020, 12:54 PM IST
ಸಂಡೇ ಲಾಕ್ಡೌನ್ ನಡುವೆಯೂ ವಿರೋಧದ ನಡುವೆಯೂ ಮಾರಮ್ಮನ ಜಾತ್ರೆಗೆ ತಯಾರಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕಮಲಾನಗರದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ. ವಿರೋಧದ ನಡುವೆಯೂ ಜಾತ್ರೆಗೆ ಮುಂದಾಗಿದ್ದಾರೆ.
state Jul 26, 2020, 10:49 AM IST
ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಲಾಕ್ಡೌನ್ ಜಾರಿ ಮಾಡಿರುವ ಪರಿಣಾಮ ಜು.28ರಂದು ಬೆಂಗಳೂರಿನಿಂದ ಹೊರಡುವ ಹಾಗೂ ಜು.29 ರಂದು ಹೌರಾದಿಂದ ಹೊರಡುವ ಎರಡು ಎಕ್ಸ್ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
state Jul 26, 2020, 9:06 AM IST
ರಾಜ್ಯದಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ 36 ಗಂಟೆಗಳ ಕಾಲ ವೀಕೆಂಡ್ ಲಾಕ್ಡೌನ್ ಲಾಕ್ಡೌನ್ ಜಾರಿಯಾಗಿದೆ. ಈ ವೇಳೆ ಏನಿರುತ್ತೆ..ಏನಿರಲ್ಲ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.
state Jul 25, 2020, 8:58 PM IST
2020ನೇ ವರ್ಷದಲ್ಲಿ ಏನು ಬೇಕಾದ್ರೂ ನಡೆಯುತ್ತೆ. ಹೀಗಿರುವಾಗ ಆನ್ಲೈನ್ ಡೆಲಿವರಿ ಜನರ ಬದುಕನ್ನು ಮತ್ತಷ್ಟು ಸುಲಭವಾಗಿಸಿದೆ. ಈ ಸೇವೆಯಿಂದ ಜನರು ಮನೆಯಲ್ಲೇ ಇದ್ದು ತಮ್ಮಿಷ್ಟದ ತಿಂಡಿ, ಊಟ ತರಿಸಿ ತಿನ್ನಬಹುದಾಗಿದೆ. ಈ ಹಿಂದೆ ಮನೆಯಲ್ಲಿ ಮಾಡಬೇಕಾದ ಅಥವಾ ಹೊರ ಹೋಗಿ ತಿನ್ನಬೇಕಾದ ಅನಿವಾರ್ಯತೆ ಇತ್ತು. ಆದರೀಗ ಹಾಗಲ್ಲ, ಕರೆ ಮಾಡಿ ಅಥವಾ ಆನ್ಲೈನ್ ಮೂಲಕ ಮನೆ ಬಾಗಿಲಿಗೇ ಊಟ ತರಿಸಿಕೊಳ್ಳಬಹುದು. ಕೊರೋನಾ ಅಟ್ಟಹಾಸದಿಂದಾಗಿ ಅನೇಕ ಮಂದಿ ಈ ಸೇವೆಗೆ ಕೊಂಚ ವಿರಾಮ ನೀಡಿದ್ದಾರಾದರೂ, ಇನ್ನೂ ಕೆಲ ಮಂದಿ ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಈ ಸೇವೆ ನೀಡುವವರೂ ಶುದ್ಧ ಆಹಾರ ನೀಡುತ್ತೇವೆಂಬ ಭರವಸೆ ಜನರಲ್ಲಿ ಮೂಡಿಸುತ್ತಿದ್ದರೂ, ಅನೇಕ ಕಡೆ ಇದನ್ನು ಅನುಸರಿಸಲಾಗುತ್ತಿಲ್ಲ. ಸದ್ಯ ಮಹಿಳೆಯೊಬ್ಬಳು ಕೊರೋನಾತಂಕ ನಡುವೆ ಆನ್ಲೈನ್ ಮೂಲಕ ಬಿರಿಯಾನಿ ತರಿಸಿಕೊಂಡಿದ್ದು, ಹಸಿವಿನಿಂದ ಕಂಗಾಲಾದ ಮಹಿಳೆ ಅದನ್ನು ಗಬ ಗಬನೇ ತಿಂದಿದ್ದಾಳೆ. ಆದರೆ ಕೊನೆಯ ತುತ್ತು ತಿನ್ನಬೇಕೆನ್ನುವಷ್ಟರಲ್ಲಿ ಬಾಕ್ಸ್ನಲ್ಲಿದ್ದ ದೃಶ್ಯ ಕಂಡು ಆಕೆ ಕಂಗಾಲಾಗಿದ್ದಾಳೆ. ಅಲ್ಲದೇ ಆಕೆಯ ಆರೋಗ್ಯ ಸ್ಥಿತಿಯೂ ಹದಗೆಟ್ಟಿದೆ.
International Jul 25, 2020, 5:15 PM IST
ಕೆಲವರು ಕೊರೋನಾ ಭೀತಿಯಿಂದ ಬೆಂಗಳೂರು ತೊರೆಯುತ್ತಿದ್ದರೆ, ಮತ್ತೆ ಕೆಲವರು ಊರಿನಲ್ಲೇ ನೆಲೆಯೂರುವ ಉದ್ದೇಶದಿಂದ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jul 25, 2020, 4:44 PM IST
ಬಸ್,ಟ್ಯಾಕ್ಸಿ, ಆಟೋಗಳು ರಸ್ತೆಗಿಳಿಯುವುದಿಲ್ಲ. ಫ್ಲೈ ಓವರ್ಗಳು ಬಂದ್ ಆಗಿರಲಿವೆ. ಸಂಡೇ ಲಾಕ್ಡೌನ್ನಿಂದ ರಾಜ್ಯರಾಜಧಾನಿ ಸಂಪೂರ್ಣ ಸ್ತಬ್ಧವಾಗಿರಲಿದೆ. ಮನೆಯಿಂದ ಹೊರಬಂದು ಬೇಕಾಬಿಟ್ಟಿ ಓಡಾಡಿದರೆ ಕೇಸ್ ಬೀಳೋದು ಗ್ಯಾರಂಟಿ. ಭಾನುವಾರ ಏನಿರುತ್ತೆ? ಏನಿರಲ್ಲ? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jul 25, 2020, 3:56 PM IST
ಕೊರೋನಾ ಹಿನ್ನೆಲೆ ಮಧ್ಯಾಹ್ನ 12 ಗಂಟೆ ನಂತರ ಪಟ್ಟಣವನ್ನು ಲಾಕ್ಡೌನ್ ಮಾಡಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
Karnataka Districts Jul 25, 2020, 11:04 AM IST
ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮನೆಯ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್ ಅಳವಡಿಸಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
Karnataka Districts Jul 25, 2020, 7:25 AM IST