ನವದೆಹಲಿ(ಜು.26): ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ಇದೀಗ ಅನ್‌ಲಾಾಕ್ 3.0 ಮಾರ್ಗಸೂಚಿ ಪ್ರಕಟಣೆ ತಯಾರಿ ಆರಂಭಿಸಿದೆ. ಈಗಾಗಲೇ ಎರಡು ಅನ್‌ಲಾಕ್ ಪ್ರಕ್ರಿಯೆಗಳನ್ನು ದೇಶದ ಜನತೆ ಕಂಡಿದ್ದಾರೆ. ಅನ್‌ಲಾಕ್ 2.0 ಆಗಸ್ಟ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಆಗಸ್ಟ್ ತಿಂಗಳ ಆರಂಭದಿಂದ ಕೆಲ ಕ್ಷೇತ್ರಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಅನ್‌ಲಾಕ್‌ 3 ಗೂ ಮುನ್ನ ಸಿಎಂಗಳ ಜೊತೆ ಪ್ರಧಾನಿ ಮೋದಿ ಮಾತುಕತೆ

ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಅನ್‌ಲಾಕ್ 3.0 ಪ್ರಕ್ರಿಯೆಯಲ್ಲಿ ಸಿನಿಮಾ ಥಿಯೇಟರ್ ಆರಂಭಿಸಲು ಅನುಮತಿ ನೀಡುವ ಸಾಧ್ಯತೆ ಇದೆ. ಆದರೆ ಇಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕಾನಿಂಗ್ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಸಿನಿಮಾ ಥಿಯೇಟರ್ ಮಾಲೀಕರ ಸಂಘ ಹಲವು ಬೇಡಿಕೆಗಳನ್ನು ಸಲ್ಲಿಸಿದೆ. ಶೇಕಡಾ 50 ರಷ್ಟು ಸೀಟು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಸಿಸುವುದಾಗಿ ಭರವಸೆ ನೀಡಿದೆ. ಈ ಮಲೂಕ ಸಿನಿಮಾ ಥಿಯೇಟರ್ ಆರಂಭಕ್ಕೆ ಅನುಮತಿ ನೀಡಬೇಕೆಂದು ಕೋರಿದೆ.

ಜಿಮ್ ಸೆಂಟರ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇಲ್ಲೂ ಕೂಡ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತ ಕ್ರಮಗಳು ಕಡ್ಡಾಯವಾಗಿದೆ.

ಅನ್‌ಲಾಕ್ 3.0 ದಲ್ಲೂ ಶಾಲಾ , ಮೆಟ್ರೋ ರೈಲ್ ಸಂಚಾರ ಸೇವೆಗೆ ವಿನಾಯಿತಿ ಸಿಗುವ ಸಾಧ್ಯತೆ ಇಲ್ಲ. ಈ ಸೇವೆಗಳು ಆಗಸ್ಟ್ ತಿಂಗಳಲ್ಲೂ ಬಂದ್ ಆಗಲಿವೆ.