Asianet Suvarna News Asianet Suvarna News

ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದಲೇ ಲಾಕ್​ಡೌನ್: ಏನಿರುತ್ತೆ..ಏನಿರಲ್ಲ..?

ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ 36 ಗಂಟೆಗಳ ಕಾಲ ವೀಕೆಂಡ್ ಲಾಕ್‌ಡೌನ್  ಲಾಕ್​ಡೌನ್ ಜಾರಿಯಾಗಿದೆ. ಈ ವೇಳೆ ಏನಿರುತ್ತೆ..ಏನಿರಲ್ಲ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

weekend lockdown from July 25th night 9pm To July 27 5Am in Karnataka
Author
Bengaluru, First Published Jul 25, 2020, 8:58 PM IST

ಬೆಂಗಳೂರು, (ಜುಲೈ.25): ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ವೀಕ್ ಎಂಡ್ ಲಾಕ್​ಡೌನ್ ಅಸ್ತ್ರ ಬಳಸಿದ್ದು, ಇಂದು(ಜು.25) ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ರಾಜ್ಯ ವ್ಯಾಪಿ ಲಾಕ್​ಡೌನ್​ ಜಾರಿಯಲ್ಲಿರಲಿದೆ. 

"

ಭಾನುವಾರದ ರಜೆ ಗುಂಗಿನಲ್ಲಿ ಹೊರಗೆ ಬರುವ ಬದಲು ಜನರು ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು.  ವೀಕೆಂಡ್ ಲಾಕ್​ಡೌನ್​ ವೇಳೆ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶವಿದೆ.

ಶನಿವಾರ ರಾಜ್ಯದಲ್ಲಿ ಬೆಚ್ಚಿಬೀಳಿಸಿದ ಕೊರೋನಾ: ಆದ್ರೂ ಇದೆ ಸ್ವಲ್ಪ ಸಮಾಧಾನ

36 ಗಂಟೆಗಳ ಕಾಲ ಲಾಕ್​ಡೌನ್ ಜಾರಿ ಆಗಿದ್ದು, ನಿಷೇಧಾಜ್ಞೆ ನಡುವೆ ಜನರು ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ವಾಹನಗಳು ಜಪ್ತಿ ಆಗಲಿದ್ದು, ದಂಡ ಬೀಳಲಿದೆ. ಭಾನುವಾರ ಏನಿರುತ್ತೆ..ಏನಿರಲ್ಲ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಭಾನುವಾರ ಏನಿರಲ್ಲ..?
* ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ..!
* ಅಗತ್ಯ ವಸ್ತು ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್..!
*ಬಾರ್,ಬ್ಯೂಟಿ ಪಾರ್ಲರ್,ಸಲೂನ್,ಸ್ಪಾ,ಬಟ್ಟೆ ಅಂಗಡಿ,ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್..!
* ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಲಾಕ್
* ಖಾಸಗಿ ಕಂಪನಿಗಳೂ ಕೂಡ ಬಂದ್
* ಎಲ್ಲಾ ಪಾರ್ಕ್ ಗಳಿಗೂ ಬೀಗ,ಜಾಗಿಂಗ್ ವಾಕಿಂಗ್ ಇಲ್ಲ..
* ಚಿನ್ನದ ಅಂಗಡಿಗಳು ಕೂಡ ಬಂದ್..!
* ಆಟೋ,ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ..
* ಖಾಸಗಿ ವಾಹನ‌ ಬಳಸಿ ಓಡಾಡುವ ಹಾಗಿಲ್ಲ..
* ಬೇರೆ ಜಿಲ್ಲೆಗೆ ಹೋಗಲು ಇಲ್ಲ ಅನುಮತಿ

ಏನಿರುತ್ತೆ..?
* ಹಣ್ಣು,ತರಕಾರಿ,ದಿನಸಿ, ಮಾಂಸದ ಅಂಗಡಿಗೆ ಅವಕಾಶ
* ಆಸ್ಪತ್ರೆಗಳು,ಮೆಡಿಕಲ್ ಸ್ಟೋರ್ಸ್,ಫಾರ್ಮಸಿ ಗಳಿಗೆ ಅವಕಾಶ
* ಮಾಧ್ಯಮಗಳಿಗೆ ಓಡಾಡಲು ಅನುಮತಿ
* ಡಾಕ್ಟರ್ಸ್,ನರ್ಸ್,ಆ್ಯಂಬುಲೆನ್ಸ್ ಓಡಾಟಕ್ಕೆ ಅವಕಾಶ..
* ಡಯಾಲಿಸಿಸ್,ಅನಾರೋಗ್ಯ ಸಮಸ್ಯೆ ಇದ್ದವರ ಓಡಾಟಕ್ಕೆ ಅನುಮತಿ
* ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅನುಮತಿ

Follow Us:
Download App:
  • android
  • ios