ರುಚಿಯಾದ ಚಿಕನ್ ಆರ್ಡರ್, ತಿಂದಾದ ಬಳಿಕ ಬಾಕ್ಸ್ ನೋಡಿ 12 ಗಂಟೆ ವಾಂತಿ!
2020ನೇ ವರ್ಷದಲ್ಲಿ ಏನು ಬೇಕಾದ್ರೂ ನಡೆಯುತ್ತೆ. ಹೀಗಿರುವಾಗ ಆನ್‌ಲೈನ್ ಡೆಲಿವರಿ ಜನರ ಬದುಕನ್ನು ಮತ್ತಷ್ಟು ಸುಲಭವಾಗಿಸಿದೆ. ಈ ಸೇವೆಯಿಂದ ಜನರು ಮನೆಯಲ್ಲೇ ಇದ್ದು ತಮ್ಮಿಷ್ಟದ ತಿಂಡಿ, ಊಟ ತರಿಸಿ ತಿನ್ನಬಹುದಾಗಿದೆ. ಈ ಹಿಂದೆ ಮನೆಯಲ್ಲಿ ಮಾಡಬೇಕಾದ ಅಥವಾ ಹೊರ ಹೋಗಿ ತಿನ್ನಬೇಕಾದ ಅನಿವಾರ್ಯತೆ ಇತ್ತು. ಆದರೀಗ ಹಾಗಲ್ಲ, ಕರೆ ಮಾಡಿ ಅಥವಾ ಆನ್‌ಲೈನ್ ಮೂಲಕ ಮನೆ ಬಾಗಿಲಿಗೇ ಊಟ ತರಿಸಿಕೊಳ್ಳಬಹುದು. ಕೊರೋನಾ ಅಟ್ಟಹಾಸದಿಂದಾಗಿ ಅನೇಕ ಮಂದಿ ಈ ಸೇವೆಗೆ ಕೊಂಚ ವಿರಾಮ ನೀಡಿದ್ದಾರಾದರೂ, ಇನ್ನೂ ಕೆಲ ಮಂದಿ ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಈ ಸೇವೆ ನೀಡುವವರೂ ಶುದ್ಧ ಆಹಾರ ನೀಡುತ್ತೇವೆಂಬ ಭರವಸೆ ಜನರಲ್ಲಿ ಮೂಡಿಸುತ್ತಿದ್ದರೂ, ಅನೇಕ ಕಡೆ ಇದನ್ನು ಅನುಸರಿಸಲಾಗುತ್ತಿಲ್ಲ. ಸದ್ಯ ಮಹಿಳೆಯೊಬ್ಬಳು ಕೊರೋನಾತಂಕ ನಡುವೆ ಆನ್‌ಲೈನ್ ಮೂಲಕ ಬಿರಿಯಾನಿ ತರಿಸಿಕೊಂಡಿದ್ದು, ಹಸಿವಿನಿಂದ ಕಂಗಾಲಾದ ಮಹಿಳೆ ಅದನ್ನು ಗಬ ಗಬನೇ ತಿಂದಿದ್ದಾಳೆ. ಆದರೆ ಕೊನೆಯ ತುತ್ತು ತಿನ್ನಬೇಕೆನ್ನುವಷ್ಟರಲ್ಲಿ ಬಾಕ್ಸ್‌ನಲ್ಲಿದ್ದ ದೃಶ್ಯ ಕಂಡು ಆಕೆ ಕಂಗಾಲಾಗಿದ್ದಾಳೆ. ಅಲ್ಲದೇ ಆಕೆಯ ಆರೋಗ್ಯ ಸ್ಥಿತಿಯೂ ಹದಗೆಟ್ಟಿದೆ.
ಟೆಸ್ಕೋ ಶಾಪರ್ ಹೇಗೆ ತಾನು ಟೆಸ್ಕೋದಿಂದ ತರಿಸಿಕೊಂಡ ಆಹಾಋ ಸೇವಿಸಿದ ಬಳಿಕ ಹನ್ನೆರಡು ಗಂಟೆ ವಾಂತಿ ಮಾಡಬೇಕಾದ ಪರಿಸ್ಥಿತಿ ಎದುರಾಯ್ತು ಎಂಬುವುದನ್ನು ವಿವರಿಸಿದ್ದಾರೆ. ಆಕೆಗೆ ಸಿಕ್ಕ ಬಾಕ್ಸ್‌ನಲ್ಲಿ ಚಿಕನ್ ಪೀಸ್ ಜೊತೆ ಸತ್ತ ಇಲಿಯನ್ನೂ ಪ್ಯಾಕ್ ಮಾಡಿದ್ದರು.
ಹರ್ಹಮ್ ನಿವಾಸಿಯಾಗಿರುವ ಕ್ಯಾಥ್ ಮ್ಯಾಕ್‌ಲಾಲ್ ಸ್ಮಿಥ್ ಈ ಸಂಬಣಧ ಪ್ರತಿಕ್ರಿಯಿಸಿದ್ದಾರೆ. ನನಗೆ ಬಹಳ ಹಸಿವಾಗಿತ್ತು. ಇದಾದ ಬಳಿಕ ನಾನು ಟೆಸ್ಕೋದಿಂದ ಮೂರೂವರೆ ಸಾವಿರ ರೂಪಾಯಿ ನೀಡಿ ಚಿಕನ್ ಟ್ರೇ ತರಿಸಿಕೊಂಡೆ.
ಡೆಲಿವರಿ ಪಡೆದ ಮಹಿಳೆ ಚಿಕನ್ ತಿನ್ನಲಾರಂಭಿಸಿದ್ದರು. ಅರ್ಧಕ್ಕೂ ಹೆಚ್ಚು ಕೋಳಿ ಮಾಂಸ ತಿಂದ ಬಳಿಕ ಆಕೆಗೆ ಟ್ರೇನಲ್ಲಿ ಬೇರೇನೋ ಕಾಣಿಸಿಕೊಂಡಿದೆ. ಇದು ಕೋಳಿಯ ಮೂಳೆ ಆಗಿರಬಹುದೆಂದು ಆಕೆ ಭಾವಿಸಿದ್ದಾಳೆ.
ಹೀಗಾಗಿ ತಿನ್ನಲ್ಲೆಂದು ಎತ್ತಿಕೊಳ್ಳಲು ಮುಂದಾದಾಗ ಆಕೆ ಬೆಚ್ಚಿ ಬಿದ್ದಿದ್ದಾಳೆ. ಯಾಕಂದ್ರೆ ಅದು ಕೋಳಿ ಮೂಳೆಯಲ್ಲ ಸತ್ತ ಇಲಿಯಾಗಿತ್ತು. ಆ ಚಿಕನ್ ಟ್ರೇಯಲ್ಲಿ ಕೋಳಿ ಮಾಂಸದ ಜೊತೆ ಇಲಿಯನ್ನೂ ಬೇಯಿಸಲಾಗಿತ್ತು.
ಇದನ್ನು ನೋಡಿದ ಮರುಕ್ಷಣದಿಂದಲೇ ಮಹಿಳೆ ವಾಂತಿ ಮಾಡಕೊಳ್ಳಲಾರಂಭಿಸಿದ್ದಾಳೆ. ಸುಮಾರು ಹನ್ನೆರಡು ಗಂಟೆ ಆಕೆ ವಾಂತಿ ಮಾಡಿಕೊಂಡಿದ್ದಾಳೆ.
ಚೇತರಿಸಿಕೊಂಡ ಮಹಿಳೆ ಈ ಫೋಟೋವನ್ನು ಟೆಸ್ಕೋ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೇ ದೂರನ್ನೂ ದಾಖಲಿಸಿದ್ದಾರೆ.
ಸದ್ಯ ಟೆಸ್ಕೋ ಈ ಸಂಬಂಧ ತನಿಖೆ ಆರಂಭಿಸಿಎ. ಅಲ್ಲದೇ ಯಾರ ಬೇಜವಾಬ್ದಾರಿಯಿಂದ ಈ ಕೃತ್ಯ ನಡೆದಿದೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟೆಟ್ಕೋ ತಿಳಿಸಿದೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಚಿತ್ರ ವಿಚಿತ್ರ ಪ್ರತಿಕ್ರಿಯಯೆಗಳು ವ್ಯಕ್ತವಾಗಿವೆ. ಕೆಲವರಂತೂ ಟೆಸ್ಕೋದಿಂದ ಊಟ ತರಿಸಿಕೊಳ್ಳಲೇಬಾರದು ಎಂದಿದ್ದಾರೆ.