ಚನ್ನಪಟ್ಟಣ ಬೈಎಲೆಕ್ಷನ್‌: ಕಾಂಗ್ರೆಸ್‌ ಸೇರ್ತಾರಾ ಯೋಗೇಶ್ವರ್‌?, ಬಾಲಕೃಷ್ಣ ಹೇಳಿದ್ದಿಷ್ಟು

ಲೋಕಸಭಾ ಚುನಾವಣೆಗೂ ಮುನ್ನ ಯೋಗೇಶ್ವರ್‌ ಬಂದಿದ್ದರೆ ಪಕ್ಷಕ್ಕೆಸೇರಿ ಸಿಕೊಳ್ಳುತ್ತಿದ್ದೆವು. ಅವರಿಗೆ ಗೌರವ ನೀಡುತ್ತಿದ್ದೆವು. ಈಗ ಎಚ್‌.ಡಿ ಕುಮಾರಸ್ವಾಮಿ ಜೊತೆ ಸೇರಿಸಿಕೊಂಡಿದ್ದಾರೆ. ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ನೋಡೋಣ. ನಮ್ಮ ಹಣೆ ಬರಹ ಏನಿತ್ತೋ ಗೊತ್ತಿಲ್ಲ. ಬಂದಿದ್ದರೆ ಗೌರವವಾಗಿ ನಡೆಸಿಕೊಳ್ಳುತ್ತಿದ್ದೇವು ಎಂದ ಶಾಸಕ ಎಚ್.ಸಿ ಬಾಲಕೃಷ್ಣ 

Congress has not been invited to BJP MLC CP Yogeshwar Says MLA HC Balakrishna grg

ರಾಮನಗರ(ಅ.01):  ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವ‌ರ್ ಅವರನ್ನು ನಾವು ಕಾಂಗ್ರೆಸ್‌ಗೆ ಆಹ್ವಾನ ಮಾಡಿಲ್ಲ. ಅವರೇ ಮುಖಂಡರ ಕಡೆಯಿಂದ ಪಕ್ಷಕ್ಕೆ ಕರೆತರುವಂತೆ ಹೇಳಿಸುತ್ತಿದ್ದಾರೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ತಿಳಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮುನ್ನ ಯೋಗೇಶ್ವರ್‌ ಬಂದಿದ್ದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಅವರಿಗೆ ಗೌರವ ನೀಡುತ್ತಿದ್ದೆವು. ಈಗ ಎಚ್‌.ಡಿ ಕುಮಾರಸ್ವಾಮಿ ಜೊತೆ ಸೇರಿಸಿಕೊಂಡಿದ್ದಾರೆ. ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ನೋಡೋಣ. ನಮ್ಮ ಹಣೆ ಬರಹ ಏನಿತ್ತೋ ಗೊತ್ತಿಲ್ಲ. ಬಂದಿದ್ದರೆ ಗೌರವವಾಗಿ ನಡೆಸಿಕೊಳ್ಳುತ್ತಿದ್ದೇವು ಎಂದರು. 

ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

ಮಾಜಿ ಸಂಸದ ಡಿ.ಕೆ.ಸುರೇಶ್ ಸದ್ಯಕ್ಕೆ ಚುನಾವಣೆ ಬೇಡ ಅನ್ನುತ್ತಿದ್ದಾರೆ. ಸಾಧಕ ಬಾಧಕ ಎಲ್ಲವನ್ನೂ ನೋಡಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಚನ್ನಪಟ್ಟಣ ಚುನಾವಣಾ ಉಸ್ತುವಾರಿ ಚೆಲುವರಾಯಸ್ವಾಮಿ ಕೂಡ ಸಭೆ ನಡೆಸಿದ್ದು, ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ. ಆದಷ್ಟು ಬೇಗ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು. 

ಚನ್ನಪಟ್ಟಣ ಉಪಚುನಾವಣೆ ದೃಷ್ಟಿಯಿಂದ ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸಿ ಮುಖಂಡರ ಜೊತೆ ಚರ್ಚೆ ಮಾಡಿ ದ್ದೇವೆ. ಅಂತಿಮವಾಗಿ ನಮ್ಮ ವಿರೋಧಿ ಯಾರು ಅಂತಾ ಗೊತ್ತಾದ ಮೇಲೆ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Latest Videos
Follow Us:
Download App:
  • android
  • ios