ಬೆಂಗಳೂರು, (ಜುಲೈ.26): ಇನ್ನೂ ಮೂರು ವಾರ ಭಾನುವಾರದ ಲಾಕ್‌ಡೌನ್ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸದೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್. ಅಶೋಕ್ ಭಾನುವಾರದ ಲಾಕ್ಡೌನ್ ಮುಂದುವರೆಸುವ ಬಗ್ಗೆ ಇಂದು (ಭಾನುವಾರ) ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ.

ಕಾರ್ಗಿಲ್ ವೀರರಿಗೆ ಮೋದಿ ನಮನ, ಉ.ಕೊರಿಯಾದಲ್ಲಿ ಕೊರೋನಾ; ಜು.26ರ ಟಾಪ್ 10 ಸುದ್ದಿ!

ಈ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲೂ ಸಂಡೇ ಲಾಕ್‌ಡೌನ್ ಕಂಟಿನ್ಯೂ ಆಗಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಪ್ರತಿದಿನ ರಾತ್ರಿ ಕರ್ಫ್ಯೂ ಮತ್ತು ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ.

ಆಗಸ್ಟ್ 2 ರವರೆಗೆ ಭಾನುವಾರದ ಲಾಕ್ಡೌನ್ ಜಾರಿ ಮಾಡಲಾಗಿದೆ. ಮುಂದಿನವಾರಕ್ಕೆ ಲಾಕ್ಡೌನ್ ಮುಕ್ತಾಯವಾಗಬಹುದು. ಇಲ್ಲವೇ ಈ ವಾರಕ್ಕೆ ಲಾಕ್ಡೌನ್ ಕೊನೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಇನ್ನು ಮೂರು ವಾರ ಲಾಕ್ಡೌನ್ ಮುಂದುವರಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.