NEWS Jul 14, 2018, 2:19 PM IST
ದೆಹಲಿಯಲ್ಲಿ ಮಳೆ ಅಬ್ಬರ ಹೇಗಿದೆ ಎಂದರೆ ಕಟ್ಟಡಗಳೆಲ್ಲ ಸೋರುತ್ತಿವೆ. ಸೆಕ್ರೇಟರಿಯೇಟ್ ಕಚೇರಿ ಮಳೆ ಅಬ್ಬರಕ್ಕೆ ನಲುಗಿದ್ದು ನೀರು ಸೋರುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
NATIONAL Jul 13, 2018, 6:53 PM IST
ರಾಜ್ಯದ ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಬುಧವಾರ ಮತ್ತಷ್ಟುತೀವ್ರವಾಗಿದ್ದು ನದಿಪಾತ್ರಗಳಲ್ಲಿ ನೆರೆಪರಿಸ್ಥಿತಿ ಉದ್ಭವವಾಗಿದೆ.
NEWS Jul 12, 2018, 8:20 AM IST
ನದಿ ಪ್ರವಾಹದಲ್ಲಿ ಈಜುವ ಸಾಹಸ ಮಾಡಲು ಹೋಗಿ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಚಾಲೆಂಜ್ ಮಾಡಿ ಒಟ್ಟೊಟ್ಟಿಗೆ ಐವರು ಯುವಕರು ನಂಜನಗೂಡು ಹಳೆ ಸೇತುವೆಯಿಂದ ಜಿಗಿದಿದ್ದಾರೆ. ಐವರ ಪೈಕಿ ಓರ್ವ ನಾಪತ್ತೆಯಾಗಿದ್ದಾನೆ.
NEWS Jul 11, 2018, 10:58 AM IST
ಕಳೆದ ಎರಡು ವಾರಗಳಿಂದ ಥಾಯ್ಲೆಂಡ್ನ ಥಮ್ ಲುವಾಂಗ್ ಗುಹೆಯಲ್ಲಿ ಪ್ರವಾಹದ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಫುಟ್ಬಾಲ್ ತಂಟದ 12 ಬಾಲಕರು ಹಾಗೂ ಹಾಗೂ ಅವರ ಕೋಚ್ನ ರಕ್ಷಣಾ ಕಾರ್ಯದ ವೇಳೆ ನೌಕಾ ಪಡೆಯ ಮಾಜಿ ಡೈವರ್ (ಮುಳುಗು ತಜ್ಞ)ವೊಬ್ಬರು ಪ್ರಾಣಕಳೆದುಕೊಂಡಿದ್ದಾರೆ.
NEWS Jul 7, 2018, 11:38 AM IST
ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್ನ ಕಿರಿಯರ ಫುಟ್ಬಾಲ್ ತಂಡಕ್ಕೆ ಭರ್ಜರಿ ಅವಕಾಶವೊಂದು ಒದಗಿದೆ.
NEWS Jul 7, 2018, 10:42 AM IST
ಇಡೀ ಥಾಯ್ಲೆಂಡ್ನ್ನೇ ದಂಗಾಗಿಸಿದ್ದ ಬಾಲಕರ ಫುಟ್ಬಾಲ್ ತಂಡ ಮತ್ತು ಕೋಚ್ ನಾಪತ್ತೆ ಪ್ರಹಸನ ಸುಖಾಂತ್ಯ ಕಾಣುವ ಲಕ್ಷಣ ಗೋಚರವಾಗಿದೆ. ಪ್ರವಾಹದಿಂದ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬಾಲಕರ ಫುಟ್ಬಾಲ್ ತಂಡವನ್ನು ಪತ್ತೆ ಹಚ್ಚಲಾಗಿದೆ. ಕೋಚ್ ಸಮೇತ ಎಲ್ಲ ಆಟಗಾರರೂ ಸುರಕ್ಷಿತವಾಗಿದ್ದಾರೆ ಎಂದು ಥಾಯ್ಲೆಂಡ್ ಸರ್ಕಾರ ಮಾಹಿತಿ ನೀಡಿದೆ.
NEWS Jul 3, 2018, 2:28 PM IST
ಮನುಷ್ಯತ್ವಕ್ಕೆ ಭಾಷೆ, ಗಡಿ, ಜಾತಿ, ಧರ್ಮ ಎಂಬ ಗೋಡೆಗಳಿಲ್ಲ. ತನ್ನಂತೇ ಇರುವ ಮತ್ತೋರ್ವ ಮನುಷ್ಯ ಸಂಕಷ್ಟದಲ್ಲಿರುವಾಗ ಮಿಡಿಯುವ ಮನಸ್ಸನ್ನೇ ಮಾನವೀಯತೆ ಎನ್ನಬಹುದು. ಅಸ್ಸೋಂ ಪ್ರವಾಹದಲ್ಲಿ ಇದೀಗ ಇಂತದ್ದೇ ಮಾನವೀಯತೆಯ ನೆರೆ ಹರಿಯುತ್ತಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಸಿಖ್ ಸಮುದಾಯದ ಯುವಕರ ಗುಂಪೊಂದು ಹಗಲಿರುಳೂ ಶ್ರಮಿಸುತ್ತಿದೆ. ಖಾಲ್ಸಾ ಎಂಬ ಸಂಘಟನೆಯ ಸದಸ್ಯರು ಸ್ವಯಂಪ್ರೇರಿತವಾಗಿ ಅಸ್ಸೋಂ ಪ್ರವಾಹಪೀಡಿತರ ಸುರಕ್ಷತೆಗಾಗಿ ದುಡಿಯುತ್ತಿದೆ.
NEWS Jun 23, 2018, 3:24 PM IST
ಚಿನ್ನದ ಗಣಿಗಳಿದ್ದ ಊರಲ್ಲಿ ನೀರಿಗೆ ಬಂಗಾರದ ಬೆಲೆ. ರಾಜ್ಯಾದ್ಯಂತ ಪ್ರವಾಹಸದೃಶ ಮಳೆಯಾದರೂ ಇಲ್ಲಿ ನಾಲ್ಕು ಹನಿ ಸುರಿಯಲ್ಲ. ಮಳೆ, ಬೆಳೆ ಇಲ್ಲದೇ ತತ್ತರಿಸುವ ಜನ ಅನಿವಾರ್ಯವಾಗಿ ವಲಸೆ ಹೋಗುತ್ತಿದ್ದರು. ಆದರೆ ಈಗಬೆಂಗಳೂರಿನ ಕೆರೆಗಳು ಈ ಜಿಲ್ಲೆಯ ಕೆರೆಗೆ ನೀರುಣಿಸುತ್ತಿವೆ. ಎಷ್ಟೋ ವರ್ಷಗಳ ನಂತರ ಕೋಲಾರ ಬರಡು ನೆಲದಲ್ಲಿ ಜೀವ ಚೈತನ್ಯ ಮೂಡಿದೆ.
LIFESTYLE Jun 19, 2018, 1:47 PM IST
ವಾಣಿಜ್ಯ ರಾಜಧಾನಿ ಮುಂಬೈಗೆ ಇಂದು ಮುಂಗಾರು ಪ್ರವೇಶಿಸಲಿದ್ದು, ಮುಂದಿನ ಒಂದು ವಾರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಿದೆ
Jun 7, 2018, 9:53 AM IST
ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿದ್ದು ಹಲವೆಡೆ ಭಾರಿ ಪ್ರಮಾಣದಲ್ಲಿ ವರುಣನ ಆರ್ಭಟವಿದೆ. ಇದೀಗ ಬೆಂಗಳೂರಿನಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪಗಳ ನಿರ್ವಹಣಾ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ.
Jun 4, 2018, 11:19 AM IST
ಸಾಧಾರಣ ಮಳೆಯಾದರೂ ದ್ವೀಪದಂತಾಗುವ ಬೆಂಗಳೂರಿನಲ್ಲಿ ೫ ವರ್ಷದಲ್ಲಿ ಮಳೆ ಅಬ್ಬರಕ್ಕೆ 11 ಜೀವಗಳು ಬಲಿಯಾಗಿವೆ. ಇದೀಗ ಮುಂಗಾರು ಮಳೆ ರಾಜಧಾನಿ ಪ್ರವೇಶಕ್ಕೆ ಸಜ್ಜಾಗಿರುವ ಹೊತ್ತಿನಲ್ಲೇ ಬಿಬಿಎಂಪಿಯು ಪ್ರವಾಹದ ಅವಾಂತರ ಸೃಷ್ಟಿಸಬಲ್ಲ 27 ‘ಡೇಂಜರ್ ವಲಯಗಳ’ ಗುರುತಿಸಿದೆ.
Jun 3, 2018, 10:04 AM IST
Sep 7, 2017, 7:32 PM IST
Aug 16, 2017, 9:01 PM IST
Aug 4, 2017, 5:17 PM IST