2005ರ ಅನಾಹುತ ಮೀರಿಸೋ ಮಳೆ ಎಚ್ಚರಿಕೆ

Heavy Rain Alert For Mumbai, Monsoon To Hit On Today
Highlights

ವಾಣಿಜ್ಯ ರಾಜಧಾನಿ ಮುಂಬೈಗೆ ಇಂದು ಮುಂಗಾರು ಪ್ರವೇಶಿಸಲಿದ್ದು, ಮುಂದಿನ ಒಂದು ವಾರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈಗೆ ಇಂದು ಮುಂಗಾರು ಪ್ರವೇಶಿಸಲಿದ್ದು, ಮುಂದಿನ ಒಂದು ವಾರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಜೊತೆಗೆ ಭೀಕರ ಮಳೆಯಿಂದಾಗಿ ಭಾನುವಾರ (ಜೂ.10) ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ, ಗುರುವಾರದಿಂದ ಭಾನುವಾರದ ವರೆಗೆ ತೀವ್ರ ಮಳೆ ಸುರಿಯಲಿದ್ದು, 2005 ಜು.26ರ ನಂತರ ಇದೇ ಮೊದಲ ಬಾರಿ ಕೆಟ್ಟಅನುಭವ ನೀಡುವಂಥ ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ‘ಸ್ಕೈಮೆಟ್‌’ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಮುಂಬೈಯಲ್ಲಿ ಮುಂಗಾರು ಪೂರ್ವ ಮಳೆ ಈಗಾಗಲೇ ಸುರಿಯುತ್ತಿದೆ. ದಕ್ಷಿಣ ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಚಂಡಮಾರುತ ಪ್ರಭಾವ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ, ಮುಂಬೈಯಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಸ್ಕೈಮೆಟ್‌ ತಿಳಿಸಿವೆ.

loader